Wednesday, January 26, 2022
spot_img
Homeಸ್ಥಳೀಯ ಸುದ್ದಿಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದಾಳಿ : ಕಾರ್ಕಳದಲ್ಲಿ ವಿಹಿಂಪ ಭಜರಂಗದಳ ಪ್ರತಿಭಟನೆ

ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದಾಳಿ : ಕಾರ್ಕಳದಲ್ಲಿ ವಿಹಿಂಪ ಭಜರಂಗದಳ ಪ್ರತಿಭಟನೆ

ಕಾಶ್ಮೀರ ಪಂಡಿತರು, ಹಿಂದೂಗಳಿಗೆ ಧೈರ್ಯ ನೀಡುವ ಕಾರ್ಯ- ಸುನಿಲ್‌ ಕೆ.ಆರ್.‌

ಕಾರ್ಕಳ : ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದಾಳಿ ಖಂಡಿಸಿ ಕಾರ್ಕಳ ಬಸ್‌ ನಿಲ್ದಾಣದ ಬಳಿ ಅ. 9ರಂದು ವಿಹಿಂಪ, ಬಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಭಜರಂಗದಳ ಪ್ರಾಂತೀಯ ಸಂಚಾಲಕ ಸುನಿಲ್‌ ಕೆ.ಆರ್.‌, 1990ರ ನಂತರ ಕಾಶ್ಮೀರದಲ್ಲಿ ಹಿಂದೂಗಳ ಸರಣಿ ಹತ್ಯೆ ನಡೆಯುತ್ತಿದೆ. ಒಂದೆರಡು ವಾರದಲ್ಲಿ 8 ಹಿಂದೂ ಕಾಶ್ಮೀರ ಪಂಡಿತರ ಹತ್ಯೆಯಾಗಿದೆ. ಅಲ್ಲಿನ ಪಂಡಿತರು, ಹಿಂದೂಗಳಿಗೆ ಧೈರ್ಯ, ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಿಂದೂ ಸಮಾಜ ಒಗ್ಗೂಡಬೇಕೆಂದರು.

ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಅಶೋಕ್‌, ಕಾರ್ಯದರ್ಶಿ ಸುಧೀರ್‌ ನಿಟ್ಟೆ, ಭಜರಂಗದಳದ ಅವಿನಾಶ್‌, ಪ್ರಸಾದ್‌, ಶರತ್‌ ಉಪಸ್ಥಿತರಿದ್ದರು.
ಶೈಲೇಶ್‌ ಸ್ವಾಗತಿಸಿ, ನಿರೂಪಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!