Saturday, October 16, 2021
spot_img
Homeದೇಶತವಾಂಗ್‌ : ಚೀನಾ-ಭಾರತ ಸೇನಾ ಪಡೆಗಳ ಘರ್ಷಣೆ

ತವಾಂಗ್‌ : ಚೀನಾ-ಭಾರತ ಸೇನಾ ಪಡೆಗಳ ಘರ್ಷಣೆ

ಅರುಣಾಚಲ ಪ್ರದೇಶ : ಲಡಾಖ್ ಘರ್ಷಣೆಯ ನಂತರ ಅರುಣಾಚಲ ಪ್ರದೇಶದಲ್ಲಿ ಚೀನಾ ಮತ್ತೆ ಕ್ಯಾತೆ ತೆಗೆದಿದ್ದು, ಈ ಭಾಗದ ತವಾಂಗ್ ನ ಯಾಂಗ್ಸೆಯಲ್ಲಿ ಭಾರತ-ಚೀನಾ ಸೇನಾಪಡೆಗಳ ನಡುವೆ ಘರ್ಷಣೆಯುಂಟಾಗಿರುವುದು ಬಹಿರಂಗವಾಗಿದೆ.
ಚೀನಾದ ಪಿಎಲ್ಎ ಸಿಬ್ಬಂದಿ ಭಾರತೀಯ ಪ್ರಾಂತ್ಯವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದಾಗ ಭಾರತೀಯ ಸೇನಾ ಸಿಬ್ಬಂದಿ ಚೀನಾ ಸೇನೆಯನ್ನು ಹಿಮ್ಮೆಟ್ಟಿಸುವಾಗ ಈ ಸಂಘರ್ಷ ಉಂಟಾಗಿದೆ ಎಂದು ತಿಳಿದುಬಂದಿದೆ. ಈಶಾನ್ಯ ಲಡಾಖ್ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸೇನಾ ಸಭೆ ನಡೆದ ಬಳಿಕ ಅರುಣಾಚಲ ಪ್ರದೇಶದಲ್ಲಿನ ಬೆಳವಣಿಗೆ ಬಗೆಗಿನ ಮಾಹಿತಿ ಬಹಿರಂಗಗೊಂಡಿದೆ. ಉಭಯ ಸೇನೆಗಳು ಲೈನ್ ಆಫ್ ಪರ್ಸೆಪ್ಷನ್ ವರೆಗೂ ಗಸ್ತು ಚಟುವಟಿಕೆಗಳನ್ನು ಹೊಂದಿರುತ್ತವೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!