Saturday, October 16, 2021
spot_img
Homeಅಂಕಣಆರೋಗ್ಯಧಾರ - ಬಹು ಉಪಯೋಗಿ ಪಾರಿಜಾತ

ಆರೋಗ್ಯಧಾರ – ಬಹು ಉಪಯೋಗಿ ಪಾರಿಜಾತ

ಪಾರಿಜಾತದ ವೃಕ್ಷವು 25 – 30 ಫೀಟ್ ಎತ್ತರವಿರುತ್ತದೆ. ಇದರ ಶಾಖೆಗಳು ಬಾಗಿರುತ್ತದೆ. ಇದರ ಎಲೆಗಳು 3 – 5 ಇಂಚ್ ಉದ್ದ, 2 ಇಂಚು ಅಗಲ ಹಾಗೂ ರೋಮಯುಕ್ತವಾಗಿರುತ್ತದೆ. ಸುಗಂಧಯುಕ್ತ ಚಿಕ್ಕ ಶ್ವೇತ ಬಣ್ಣದ ಹೂವುಗಳನ್ನು ಬಿಡುತ್ತದೆ. ಫಲಗಳು ¾ ಇಂಚು ಉದ್ದ ಹಾಗೂ 1/6 ಇಂಚು ದಪ್ಪವಾಗಿರುತ್ತದೆ. ಶರದ್ ಋತುವಿನಲ್ಲಿ ಪುಷ್ಪ ಹಾಗೂ ಹೇಮಂತ ಋತುವಿನಲ್ಲಿ ಫಲವನ್ನು ಬಿಡುತ್ತದೆ.

ಪಾರಿಜಾತದ ಎಲೆ ಹಾಗೂ ಬೀಜದ ಉಪಯೋಗಗಳನ್ನು ತಿಳಿದುಕೊಳ್ಳೋಣ
ಇದರ ಗುಣಗಳು – ಲಘು ಹಾಗೂ ರೂಕ್ಷ. ಸ್ವಭಾವದಲ್ಲಿ ಉಷ್ಣ ಹಾಗೂ ಕಹಿರಸವನ್ನು ಹೊಂದಿದೆ. ಕಟು ವಿಪಾಕ, ಜೀರ್ಣವಾದ ನಂತರ ಕಟು ರಸವನ್ನು ಹೊಂದುತ್ತದೆ. ವಾತ ಹಾಗೂ ಕಫವನ್ನು ಕಡಿಮೆಗೊಳಿಸುತ್ತದೆ ಹಾಗೂ ಪಿತ್ತಶೋಧನ ಮಾಡುತ್ತದೆ.

ಪಾರಿಜಾತದ ಆರೋಗ್ಯ ಲಾಭಗಳು
• ವಾತ ಹಾಗೂ ಕಫ ವಿಕಾರಗಳಲ್ಲಿ ಉಪಯೋಗಿಸುತ್ತಾರೆ. ಪಿತ್ತವನ್ನು ಹೊರ ಹಾಕಲು ಸಹಾಯಕಾರಿ.
• ಎಲೆಯ ರಸ ಕುಡಿಯುವುದರಿಂದ ಜಂತುಹುಳಗಳನ್ನು ನಾಶಪಡಿಸಬಹುದು.
• ಬೀಜದ ಚೂರ್ಣ ದಿನನಿತ್ಯ ತಲೆಗೆ ಹಚ್ಚುವುದರಿಂದ ತಲೆ ಗೂದಲು ಬೆಳೆಯುತ್ತದೆ.
• ಉರಿ ಊತವನ್ನು ಕಡಿಮೆ ಮಾಡುವುದರಿಂದ ಕೀಲುನೋವನ್ನು ಸರಿಪಡಿಸಬಹುದು. ಎಣ್ಣೆಯನ್ನು ಹಚ್ಚಿ ಪಾರಿಜಾತ ಎಲೆಯ ಶಾಖವನ್ನು ನೀಡಿದರೆ ಕೀಲು ನೋವು ಕಡಿಮೆಯಾಗುವುದು.
• ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪತ್ರ ಸ್ವರಸ ಕುಡಿಯುವುದರಿಂದ ಗೃಧ್ರಸಿ ಅಥವಾ ಸಯಾಟಿಕಾವನ್ನು ನಿವಾರಿಸುತ್ತದೆ.
• ಎಲೆಯ ರಸ ಕುಡಿಯುವುದರಿಂದ ಜಠರಾಗ್ನಿಯನ್ನು ದೀಪನಗೊಳಿಸುತ್ತದೆ. ಆದ್ದರಿಂದ ಅಜೀರ್ಣದ ಸಮಸ್ಯೆಯನ್ನು ದೂರ ಮಾಡಬಹುದು.
• ಪಿತ್ತ ವಿಕಾರ, ಯಕೃತ್ ವಿಕಾರ ಹಾಗೂ ಕ್ರಿಮಿ ರೋಗದಲ್ಲಿ ಅತ್ಯುಪಯೋಗಿ ಔಷಧವಿದು. ಇದರಲ್ಲಿ ಎಲೆಯ ಕಷಾಯ ಅಥವಾ ರಸವನ್ನು ಸೇವಿಸುವುದು ಒಳ್ಳೆಯದು.
• ಇದು ರಕ್ತವನ್ನು ಶುದ್ಧೀಕರಿಸುವುದರಿಂದ ರಕ್ತ ವಿಕಾರಗಳಲ್ಲಿ ಪ್ರಯೋಜಕ. ಪಾರಿಜಾತದ ಎಲೆಗಳನ್ನು ತ್ವಚೆಯ ವಿಕಾರಗಳಲ್ಲಿ ಬಳಸುತ್ತಾರೆ.
• ಕಫ ದೋಷವನ್ನು ಕಡಿಮೆ ಮಾಡುವುದರಿಂದ ಕೆಮ್ಮು ಶ್ವಾಸಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಇದಕ್ಕೆ ಎಲೆಯ ರಸ ಹಾಗೂ ಕಷಾಯವನ್ನು ಸೇವಿಸಬಹುದು.
• ಅನೇಕ ದಿನಗಳಿಂದ ಕಾಡುವ ಜ್ವರವನ್ನು ಗುಣಪಡಿಸುತ್ತದೆ.
• ದೇಹಕ್ಕೆ ಪುಷ್ಟಿಯನ್ನು ನೀಡುತ್ತದೆ.

ಸೇವಿಸುವ ಪ್ರಮಾಣ – ಪತ್ರ ಸ್ವರಸ -10 -20 ml , ಬೀಜದ ಚೂರ್ಣ – 3 -6 gm

ಎಲೆಯ ಕಷಾಯ ಮಾಡುವ ವಿಧಾನ
ಒಂದು ಲೋಟ ನೀರಿಗೆ ನಾಲ್ಕೈದು ಎಲೆಗಳನ್ನು ಹಾಕಿ ಕಾಲು ಭಾಗ ಬರುವವರೆಗೆ ಕುದಿಸಿ, ಸೋಸಿ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ 20 -50 ml ಸೇವಿಸಿ.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!