Saturday, October 16, 2021
spot_img
Homeಸ್ಥಳೀಯ ಸುದ್ದಿಜಲಜೀವನ್ ಮಿಷನ್ ಯೋಜನೆಗೆ (ಎಎಒ) 53.32 ಕೋಟಿ ಅನುದಾನ : ವಿ. ಸುನಿಲ್ ಕುಮಾರ್

ಜಲಜೀವನ್ ಮಿಷನ್ ಯೋಜನೆಗೆ (ಎಎಒ) 53.32 ಕೋಟಿ ಅನುದಾನ : ವಿ. ಸುನಿಲ್ ಕುಮಾರ್

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ಜನವಸತಿ ಪ್ರದೇಶದ ಕುಟುಂಬಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ (ಈಊಖಿಅ) ಒದಗಿಸಿ ಪ್ರತಿ ಸದಸ್ಯನಿಗೆ ದಿನಕ್ಕೆ 55 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಹೊಂದಲಾಗಿದೆ. ಯೋಜನೆಯಡಿ ಒಟ್ಟು 34 ಗ್ರಾಮ ಪಂಚಾಯತ್‍ಗಳ 504 ಜನವಸತಿ ಪ್ರದೇಶಗಳಿಗೆ ನೀರಿನ ಸಂಪರ್ಕ ಒದಗಿಸಲು ಕಾರ್ಕಳ ತಾಲೂಕಿನಲ್ಲಿ 150 ಕಾಮಗಾರಿಗಳನ್ನು ಮತ್ತು ಹೆಬ್ರಿ ತಾಲೂಕಿನಲ್ಲಿ 48 ಕಾಮಗಾರಿಗಳನ್ನು ಕೈಗೊಳ್ಳಲು ಅಂದಾಜು ಮೊತ್ತ ರೂ. 53.32 ಕೋಟಿಗಳಿಗೆ ಯೋಜನೆ ರೂಪಿಸಲಾಗಿರುತ್ತದೆ.
ಕಾಮಗಾರಿಗಳಲ್ಲಿ ಒಟ್ಟು 133 ಕೊಳವಿಬಾವಿಗಳು 92 ಮೇಲ್ಮಟ್ಟದ ಟ್ಯಾಂಕ್ಗ ಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. 198 ಕಾಮಗಾರಿಗಳ ಪೈಕಿ 14 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, 137 ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತವೆ ಹಾಗೂ 64 ಮೇಲ್ಮಟ್ಟದ ಟ್ಯಾಂಕ್ಗ ಳು ಪ್ರಗತಿಯಲ್ಲಿರುತ್ತದೆ. ಬಾಕಿ ಉಳಿದ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯ ಹಂತದಲ್ಲಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಕೊಳವೆಬಾವಿಗಳಲ್ಲಿನ ನೀರಿನ ಲಭ್ಯತೆಯು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ವಾರಾಹಿ ನದಿಯ ಶಾಶ್ವತ ಜಲಮೂಲದಿಂದ ನೀರನ್ನು ಪಡೆದು ಕಾರ್ಕಳ ಕ್ಷೇತ್ರದ ಉಭಯ ತಾಲೂಕಿನ ಎಲ್ಲಾ ಜನವಸತಿಗಳಲ್ಲಿರುವ ಪ್ರತಿಯೊಬ್ಬರಿಗೂ ದಿನಕ್ಕೆ ತಲಾ 55 ಲೀಟರ್ ಶುದ್ಧ ಕುಡಿಯುವ ನೀರನ್ನು ಮುಂದಿನ 30 ವರ್ಷಗಳವರೆಗೆ ಸರಬರಾಜು ಮಾಡಲು ಅಂದಾಜು ರೂ.600.00 ಕೋಟಿಗೂ ಅಧಿಕ ಮೊತ್ತದ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಸಚಿವ ಸುನಿಲ್‌ ಕುಮಾರ್‌ ಅವರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!