Thursday, December 2, 2021
spot_img
Homeಸ್ಥಳೀಯ ಸುದ್ದಿಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

2,99,640 ರೂ. ನಿವ್ವಳ ಲಾಭ : 15% ಡಿವಿಡೆಂಟ್ ಘೋಷಣೆ

ಕಾರ್ಕಳ : ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ 16ನೇ ವಾರ್ಷಿಕ ಮಹಾಸಭೆಯು ಪಂಚಾಯತ್‌ ಆವರಣದ ಸುವರ್ಣ ಗ್ರಾಮೋದಯ ಸೌಧದಲ್ಲಿ ಸಾಣೂರು ನರಸಿಂಹ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಘದ ಅಧ್ಯಕ್ಷ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಮಾತನಾಡಿ, ಕೊರೋನಾ ಸಂಕಷ್ಟದ ಕಾಲದಲ್ಲಿಯೂ ಕೂಡ ಸದಸ್ಯರು ನಿರಂತರವಾಗಿ ಗುಣಮಟ್ಟದ ಹಾಲನ್ನು ಪೂರೈಸಿರುವುದರಿಂದ ನಮ್ಮ ಸಂಘವು 2,99,640 ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ 15% ಡಿವಿಡೆಂಟ್ ನೀಡಲು ಸಾಧ್ಯವಾಗಿದೆ ಎಂದು ತಿಳಿಸಿದರು.

3 ಸಾವಿರ ಲೀ. ಸಾಮರ್ಥ್ಯದ ಸಾಂದ್ರಶೀತಲೀಕರಣ

ಸಂಸ್ಥೆಯು ಪ್ರಗತಿಪಥದಲ್ಲಿ ಸಾಗುತ್ತಿದ್ದು, ಮುಂದಿನ ವರ್ಷ ಸಾಣೂರು ಪೇಟೆಯ ರಾಷ್ಟ್ರೀಯ ಹೆದ್ದಾರಿ 169 ರ ಸನಿಹದಲ್ಲಿಯೇ ಸ್ವಂತ ನಿವೇಶನದಲ್ಲಿ ನೂತನ ಕಚೇರಿ ಕಟ್ಟಡ, ಗೋದಾಮು ಮತ್ತು 3 ಸಾವಿರ ಲೀಟರ್ ಸಾಮರ್ಥ್ಯದ ಸಾಂದ್ರ ಶೀತಲೀಕರಣ ಘಟಕದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ನರಸಿಂಹ ಕಾಮತ್ ತಿಳಿಸಿದರು.

ಜ್ಞಾನದೇವ 2020- 21 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ನಿರ್ದೇಶಕ ಸೋಮಶೇಖರ್ ರಾವ್ ಅಂದಾಜು ಆಯವ್ಯಯ ಮಂಡಿಸಿದರು. ಜಯಶೆಟ್ಟಿ ಸಂಘದ ಮುಂದಿನ ಯೋಜನೆ ಮತ್ತು ಕಾರ್ಯಚಟುವಟಿಕೆಗಳ ವಿವರ ಸಭೆಯ ಮುಂದಿಟ್ಟರು.

ಹಾಲು ಒಕ್ಕೂಟದ ಮೇಲ್ವಿಚಾರಕ ಅಬ್ದುಲ್ ಶಮಿರ್ ಲೆಕ್ಕಪರಿಶೋಧನಾ ವರದಿ ಪರಿಶೀಲನೆ ನಡೆಸಿ, ಸಂಘವು ಲೆಕ್ಕ ಪರಿಶೋಧನೆಯಲ್ಲಿ ಉತ್ತಮ ಸಾಧನೆಯನ್ನು ದಾಖಲಿಸಿ “ಎ”ವರ್ಗೀಕರಣವನ್ನು ಗಳಿಸಿದೆ ಎಂದು ತಿಳಿಸಿದರು.

ಸಂಘದ ನೂತನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸಂಘಕ್ಕೆ ಹೊಸ ಸದಸ್ಯರ ಸೇರ್ಪಡೆ ಮತ್ತು ರದ್ಧತಿಯ ವಿವರ ನೀಡಿದರು.

ಅಭಿನಂದನೆ
ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ 16 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಜ್ಞಾನದೇವ್, ಸ್ವಚ್ಛತಾ ಸಿಬ್ಬಂದಿಯಾಗಿ 10 ವರ್ಷಗಳ ಕಾಲ ಸೇವೆಗೈದ ಜಯಂತಿ ಅವರನ್ನು ಅಭಿನಂದಿಸಲಾಯಿತು.

ಬಹುಭಾಷಾ ಕಲಾವಿದರಾದ ಮೋಹನ ದಾಸ್ ಜಿ. ಪ್ರಭು, ಕಳೆದ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿ ಶಿಕ್ಷಣದಲ್ಲಿ ಅಪ್ರತಿಮ ಸಾಧನೆಗೈದ ಸಂಘದ ಸದಸ್ಯರ ಮಕ್ಕಳನ್ನು, ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಸಂಘಕ್ಕೆ ಅತ್ಯಂತ ಹೆಚ್ಚು ಹಾಲನ್ನು ಪೂರೈಸಿದ 10 ಸದಸ್ಯರಿಗೆ ಮತ್ತು ಗುಣಮಟ್ಟದ ಹಾಲನ್ನು ಪೂರೈಸಿದ ಮೂವರು ಸದಸ್ಯರಿಗೆ ಹಾಗೂ ಸಮಯ ಪಾಲನೆಯ ಅದೃಷ್ಟಶಾಲಿ ಸದಸ್ಯರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಹಾಲು ಒಕ್ಕೂಟದ ಪಶುವೈದ್ಯ ಡಾ. ಶೀತಲ್ ಹಸು ಸಾಕಣೆ ಮತ್ತು ಗುಣಮಟ್ಟದ ಹಾಲು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷೆ ಯಶೋಧ ಆರ್. ಸುವರ್ಣ ಸ್ವಾಗತಿಸಿ, ನಿರ್ದೇಶಕ ಮುದಲಾಡಿ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಾಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು, ಸಂಘದ ನಿರ್ದೇಶಕರಾದ ಕೊರಗ ಶೆಟ್ಟಿ, ವಿಶ್ವನಾಥ್ ಶೆಟ್ಟಿಗಾರ್, ಶ್ರೀಧರ ಸಮಗಾರ, ಜಯಾನಂದ, ಉಮಾನಾಥ ಶೆಟ್ಟಿ, ಸುಗಂಧಿ, ಸಂಜೀವಿ, ರಾಯಲ್ ನರೋನ, ಹಾಲು ಪರೀಕ್ಷಕ ಗುರುಪ್ರಸಾದ್ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!