Thursday, December 2, 2021
spot_img
Homeಸ್ಥಳೀಯ ಸುದ್ದಿಅ. 9 : ಜೋಡುರಸ್ತೆ ಪ್ರೈಮ್‌ ಮಾಲ್‌ ಉದ್ಘಾಟನೆ

ಅ. 9 : ಜೋಡುರಸ್ತೆ ಪ್ರೈಮ್‌ ಮಾಲ್‌ ಉದ್ಘಾಟನೆ

ಮಾಲ್‌ನಲ್ಲಿ ಯಾವ್ಯಾವ ಮಳಿಗೆಗಳಿವೆ ? ಸಂಪೂರ್ಣ ವಿವರಕ್ಕಾಗಿ

ಕಾರ್ಕಳ : ಜೋಡುರಸ್ತೆಯಲ್ಲಿ ನಿರ್ಮಾಣಗೊಂಡಿರುವ ಪ್ರೈಮ್‌ ಮಾಲ್‌ ಅ. 9ರ ಶನಿವಾರ ಸಂಜೆ 5:30ರ ವೇಳೆ ಉದ್ಘಾಟನೆಗೊಳ್ಳಲಿದೆ. ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಕಟ್ಟಡ ಲೋಕಾರ್ಪಣೆಗೊಳಿಸಲಿರುವರು. ಹಿರಿಯ ವಕೀಲ ಎಂ.ಕೆ. ವಿಜಯ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದು, ಗೃಹ ಮಂತ್ರಿ ಆರಗ ಜ್ಞಾನೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಎಸ್‌ಸಿಡಿಸಿಸಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಅಧ್ಯಕ್ಷ ಎಂ.ಎನ್.‌ ರಾಜೇಂದ್ರ ಕುಮಾರ್‌, ಉದ್ಯಮಿ ಬೋಳ ಪ್ರಭಾಕರ್‌ ಕಾಮತ್‌, ಬಿಲ್ಲವ ಅಸೋಶಿಯೇಷನ್‌ ಮುಂಬೈ ಇದರ ಅಧ್ಯಕ್ಷ ಹರೀಶ್‌ ಜಿ. ಅಮೀನ್‌, ಪ್ರಗತಿಪರ ಕೃಷಿಕ ಅಶೋಕ್‌ ಅಡ್ಯಂತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಎಂ.ಕೆ. ಸುವೃತ್‌ ಕುಮಾರ್‌, ಮಹಾವೀರ ಹೆಗ್ಡೆ, ಸಚಿನ್‌ ಪಿ. ಸಾಲ್ಯಾನ್‌, ದಿವಾಕರ್‌ ಶೆಟ್ಟಿ, ಸಂಪತ್‌ ಜೈನ್‌ ತಿಳಿಸಿದ್ದಾರೆ.

ನೆಲ ಮತ್ತು ಮೊದಲನೇ ಮಹಡಿಯಲ್ಲಿ ಹೆಗ್ಡೆ ಮೆಡಿಕಲ್‌, ಬಿಗ್‌ಮಿಶ್ರಾ ಪೇಡ, ಜಸ್ಟ್‌ ಬೇಕ್‌, ಶ್ಯಾಮ ಟ್ರೇಡರ್ಸ್‌, ಖುಷಿ ಬ್ಯೂಟಿ ಸ್ಪಾ, ವೆಂಕಟರಮಣ ಡ್ರೈ ಫ್ರೂಟ್ಸ್‌ ಆಂಡ್‌ ಚಾಕಲೇಟ್‌, ಬ್ಯೂಟಿ ಪಾಯಿಂಟ್‌ ಫ್ಯಾನ್ಸಿ ಸೆಂಟರ್‌, ದುರ್ಗಾಸ್‌ ಬ್ಯೂಟಿ ಸ್ಪಾಟ್‌, ಫ್ಯಾಷನೆಟ್‌ ಡ್ರೆಸ್ಸ್‌ ಮೇಕರ್ಸ್, ಬಂಟರ ವಿವಿದ್ಧೋದ್ಧೇಶ ಸಹಕಾರ ಸಂಘ ತೆರೆಯಲಿದೆ.

ಎರಡನೇ ಮಹಡಿಯಲ್ಲಿ 6,500 ಚದರಡಿಯಲ್ಲಿ ಪೂರ್ಣಿಮಾ ಲೈಫ್‌ ಸ್ಟೈಲ್‌ ಕಾರ್ಯನಿರ್ವಹಿಸಲಿದೆ.

ನ್ಯೂಸ್‌ ಕಾರ್ಕಳದಲ್ಲಿ ನೇರ ಪ್ರಸಾರ

ಕಾರ್ಯಕ್ರಮದ ನೇರ ಪ್ರಸಾರ ನ್ಯೂಸ್‌ ಕಾರ್ಕಳ ಫೇಸ್‌ ಬುಕ್‌, ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ 9980442360 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!