Wednesday, January 26, 2022
spot_img
HomeUncategorizedಸಾಮಾಜಿಕ ಜಾಲತಾಣಗಳ ಕುರಿತು ಎಚ್ಚರಿಕೆ ಅಗತ್ಯ - ಎಸ್‌ಐ ತೇಜಸ್ವಿ

ಸಾಮಾಜಿಕ ಜಾಲತಾಣಗಳ ಕುರಿತು ಎಚ್ಚರಿಕೆ ಅಗತ್ಯ – ಎಸ್‌ಐ ತೇಜಸ್ವಿ

ಬೆಳ್ಮಣ್‌ ಸರಕಾರಿ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ

ಕಾರ್ಕಳ : ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಕುರಿತು ಬಹಳ ಎಚ್ಚರಿಕೆ ವಹಿಸಬೇಕು. ರಸ್ತೆ ಸುರಕ್ಷತಾ ನಿಯಮ ಪಾಲನೆ ಮಾಡಬೇಕೆಂದು ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ ಟಿ.ಐ. ಹೇಳಿದರು.

ಅವರು ಅ. 5ರಂದು ಬೆಳ್ಮಣ್‌ ಸರಕಾರಿ ಕಾಲೇಜಿನಲ್ಲಿ ನಡೆದ ರಸ್ತೆ ಸುರಕ್ಷತಾ ನಿಯಮ- ಮೊಬೈಲ್‌ ದುರ್ಬಳಕೆ ಕುರಿತು ಮಾಹಿತಿ ನೀಡಿದರು.

ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ದುಶ್ಚಟದಿಂದ ದೂರವಿದ್ದು, ಸದ್ಗುಣ ಮೈಗೂಡಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಮಿತಿಯಲ್ಲಿ ಬಳಕೆ ಮಾಡಿಕೊಂಡು ವಿದ್ಯಾರ್ಜನೆಗೆ ಹೆಚ್ಚಿನ ಸಮಯ ವಿನಿಯೋಗಿಸಬೇಕೆಂದು ತೇಜಸ್ವಿ ಹೇಳಿದರು.

ವೇದಿಕೆಯಲ್ಲಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಗಣಪತಿ ಆಚಾರ್ಯ, ಚಿತ್ರಕಲಾ ಶಿಕ್ಷಕ ರಮೇಶ್‌ ಬಂಟಕಲ್‌ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲೆ ಡಾ. ಮಾಲತಿ ಪೈ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸುಜಾತಾ ಕುಮಾರಿ ಸ್ವಾಗತಿಸಿ, ರೇಖಾ ಡಿ. ನಿರೂಪಿಸಿದರು. ರಶ್ಮಿ ವಂದಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!