Saturday, October 16, 2021
spot_img
Homeಸ್ಥಳೀಯ ಸುದ್ದಿಅ. 7ರಿಂದ ತೆಳ್ಳಾರು ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ವಿಶೇಷ ಪೂಜೆ

ಅ. 7ರಿಂದ ತೆಳ್ಳಾರು ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ವಿಶೇಷ ಪೂಜೆ

ಅ. 10 : ಚಂಡಿಕಾಹೋಮ, ಅ. 12-ದುರ್ಗಾನಮಸ್ಕಾರ

ವೈಭವದ ಸಾಂಸ್ಕೃತಿಕ ಉತ್ಸವ

ಕಾರ್ಕಳ : ತೆಳ್ಳಾರು ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನದಲ್ಲಿ ನವರಾತ್ರಿಯಂಗವಾಗಿ ಅ. 7ರಿಂದ 14ರವರೆಗೆ ವಿಶೇಷ ಪೂಜೆ, ಚಂಡಿಕಾಹೋಮ, ಕಲ್ಪೋಕ್ತ ಪೂಜೆ, ರಂಗಪೂಜೆ, ದುರ್ಗಾನಮಸ್ಕಾರ, ಸಾಂಸ್ಕೃತಿಕ ಉತ್ಸವ ಹಾಗೂ ನಿತ್ಯ ಅನ್ನಪ್ರಸಾದ ಸೇವೆ ನಡೆಯಲಿದೆ. ವೈದಿಕ ಕಾರ್ಯ ವೇ.ಮೂ. ಬ್ರಹ್ಮಶ್ರೀ ಜಾರ್ಕಳ ಪ್ರಸಾದ ತಂತ್ರಿ ಅವರ ನೇತೃತ್ವದಲ್ಲಿ ಜರಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ಏಕಾಹ ಭಜನೆ

ಅ. 7ರ ಪೂರ್ವಾಹ್ನ 7ರಿಂದ ಸಂಜೆ 7ರ ತನಕ ಶ್ರೀ ಜಲದುರ್ಗಾ ಭಜನಾ ಮಂಡಳಿ ನೇತೃತ್ವದಲ್ಲಿ ಏಕಾಹ ಭಜನೆ ನಡೆಯಲಿದೆ. ಜಲದುರ್ಗಾ ಭಜನಾ ಮಂಡಳಿ ತೆಳ್ಳಾರು, ಜಲದುರ್ಗಾ ಮಹಿಳಾ ಭಜನಾ ಮಂಡಳಿ ತೆಳ್ಳಾರು, ಕಾಳಿಕಾಂಬಾ ಭಜನಾ ಮಂಡಳಿ ನೆಕ್ಲಾಜೆ, ಲಕ್ಷ್ಮೀ ಅಂಬಾಭವಾನಿ ಭಜನಾ ದುರ್ಗಾ, ಭಾರ್ಗವ ಮಹಿಳಾ ಭಜನಾ ಮಂಡಳಿ ದುರ್ಗಾ, ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿ ಕಾರ್ಕಳ, ಶ್ರೀ ಶಾರದಾ ಮಹಿಳಾ ಭಜನಾ ಮಂಡಳಿ ಅನಂತಶಯನ, ಶ್ರೀ ಶಂಕರ ಪ್ರತಿಷ್ಠಾನ ಅನಂತಶಯನ, ಶ್ರೀ ಮಹಾಮ್ಮಾಯಿ ಭಜನಾ ಮಂಡಳಿ ಶಿರ್ಲಾಲು, ಶ್ರೀ ಸೀತಾಮಾತಾ ಭಜನಾ ಮಂಡಳಿ ಕಾರ್ಕಳ, ಶ್ರೀ ದುರ್ಗಾ ಭಜನಾ ಮಂಡಳಿ ಕುಕ್ಕುಂದೂರು, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಪೆರ್ವಾಜೆ, ಶ್ಯಾಮಲಾ ಕೃಷ್ಣ ಕುಮಾರ್‌ ಮತ್ತು ಶಿಷ್ಯ ವೃಂದ ಕಾರ್ಕಳ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಉತ್ಸವ
ಅ. 7ರಿಂದ ಪ್ರತಿ ದಿನ ರಾತ್ರಿ 7:45ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು, ಮುನಿಯಾಲು ಸರಕಾರಿ ಕಾಲೇಜಿನ ಪ್ರಾಂಶುಪಾಲೆ ಬೇಬಿ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು. ಅ. 7ರಂದು ನ್ಯಾಟ್ಯಾಂಜಲಿ ಭರತ ನಾಟ್ಯ ನಡೆಯಲಿದೆ.

ಅ. 8ರಂದು ರಾತ್ರಿ 7:45ರಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರಿಂದ ಅಹಲ್ಯಾ ಏಕಾಯಾಣ, ರಂಗಪ್ರಯೋಗ ಜರಗಲಿದೆ.

ಅ.9ರಂದು ಭೂಮಿಕಾ ಹಾರಾಡಿ ಇವರಿಂದ ನಮ್ಮ ನಿಮ್ಮೊಳಗೊಬ್ಬ ನಾಟಕ ಪ್ರದರ್ಶನಗೊಳ್ಳಲಿದೆ.

ಅ. 10ರಂದು ಶ್ರೀ ಶನೀಶ್ವರ ಭಕ್ತವೃಂದ ಪಕ್ಷಿಕರೆ ಮಂಗಳೂರು ಇವರಿಂದ ಪಟ್ಲ ಸತೀಶ್‌ ಶೆಟ್ಟಿ ಭಾಗವತಿಕೆಯಲ್ಲಿ ಯಕ್ಷಗಾನ ಬಯಲಾಟ ಶ್ರೀ ಶನೀಶ್ವರ ಮಹಾತ್ಮೆ ಪ್ರದರ್ಶನಗೊಳ್ಳಲಿದೆ.

ಅ. 11ರಂದು ಯಕ್ಷನಿಧಿ ಮೂಡಬಿದ್ರಿ ವತಿಯಿಂದ ಏಕಾದಶಿ ಶ್ರೀ ದೇವಿ ಮಹಾತ್ಮೆ ಜರಗಲಿದೆ.

ಅ. 12ರಂದು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲು ಕಡ್ತಲ ಇವರಿಂದ ಕುಣಿತ ಭಜನೆ ನಡೆಯಲಿದೆ.

ಅ. 13ರ ಸಂಜೆ 6:10ರಿಂದ ಕುಂದೇಶ್ವರ ಭಜನಾ ಮಂಡಳಿ ಹಿರ್ಗಾನ ಇವರಿಂದ ಕುಣಿತ ಭಜನೆ ಜರಗಲಿದೆ. 7:45ರಿಂದ ಸ್ಥಳೀಯ ಮಕ್ಕಳಿಂದ ಕತ್ತಲೆ ನಗರಿ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ 8:15ರಿಂದ ದೀಪಕ್‌ ದರ್ಬೆ ತಂಡದಿಂದ ತುಳು ನೃತ್ಯರೂಪಕ ದೇಯಿ ನಡೆಯಲಿದೆ.

ಅ. 14ರಂದು ಸಂಜೆ 6ರಿಂದ ಕೆರ್ವಾಶೆ ಶಾರದಾಂಬ ಭಜನಾ ಮಂಡಳಿ ವತಿಯಿಂದ ಕುಣಿತ ಭಜನೆ ನಡೆಯಲಿದೆ. ರಾತ್ರಿ ಗಂಟೆ 7:45ರಿಂದ ಯುವ ಸ್ಪಂದನ ಗೆಳೆಯರ ಬಳಗ ನೇತೃತ್ವದಲ್ಲಿ ಮೋಕೆದ ಕಲಾವಿದೆರ್‌ ಮುಂಡ್ಲಿ ಇವರಿಂದ ತುಳು ಸಾಮಾಜಿಕ ನಾಟಕ ನಮ ನಮ್ಮಾತೆಗೆ ಪ್ರದರ್ಶನಗೊಳ್ಳಲಿದೆ.

ಅ.15ರಂದು ಊರ ಕಲಾವಿದರಿಂದ ರಾತ್ರಿ ಗಂಟೆ 7:45ರಿಂದ ತುಳು ಹಾಸ್ಯಮಯ ನಾಟಕ ಬಾಕಿಲ್‌ ದೆಪ್ಪುಲೆ ನಡೆಯಲಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!