Wednesday, January 26, 2022
spot_img
HomeUncategorizedಸಾಣೂರು ಮಾತೃಶಕ್ತಿ ದುರ್ಗಾವಾಹಿನಿ ಘಟಕ ಉದ್ಘಾಟನೆ

ಸಾಣೂರು ಮಾತೃಶಕ್ತಿ ದುರ್ಗಾವಾಹಿನಿ ಘಟಕ ಉದ್ಘಾಟನೆ

ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು- ಚೈತ್ರಾ ಕುಂದಾಪುರ

ಕಾರ್ಕಳ : ಸಮಾಜದ ದೌರ್ಜನ್ಯದ ವಿರುದ್ಧ ದುರ್ಗಾವಾಹಿನಿ ಹೋರಾಟ ಮಾಡುವುದು ಮಾತ್ರವಲ್ಲದೇ ಹಿಂದೂ‌ ಹೆಣ್ಣುಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳುವುದು ಎನ್ನುವ ಕುರಿತು ತರಬೇತಿ ನೀಡುವುದು ಎಂದು ಚೈತ್ರಾ ಕುಂದಾಪುರ ಹೇಳಿದರು.

ಅವರು ಅ. 3ರಂದು ಸಾಣೂರು ಗ್ರಾಮದ ಕುಜುಮಾರುಗುಡ್ಡೆ ಕೊರಗಜ್ಜ ದೇವಸ್ಥಾನದ ಆವರಣದಲ್ಲಿ ಸಾಣೂರು ಮಾತೃಶಕ್ತಿ ದುರ್ಗಾ ವಾಹಿನಿ‌ ಘಟಕ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಹಿಂದೂ‌ ಪರಿಷತ್, ಬಜರಂಗದಳ ಸಾಣೂರು ವಲಯದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುರ್ಗೆ ಶಾಂತ ಸ್ವರೂಪಿಣಿ ಹಾಗೂ ಉಗ್ರ ರೂಪ ಹೊಂದಬಲ್ಲ ದೇವತೆ. ಹೀಗಾಗಿ ಈ ಸಂಘಟನೆಗೆ ದುರ್ಗಾವಾಹಿನಿ ಹೆಸರಿಡಲಾಗಿದೆ ಎಂದರು.

ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು
ಹೆಣ್ಣು ಮಕ್ಕಳಿಗೆ ದೊರೆತ ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು. ಇದರಿಂದಾಗಿಯೇ ಹೆಣ್ಣುಮಕ್ಕಳು ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದಾರೆ. ಲವ್ ಜಿಹಾದ್ ತಡೆಯಲು ಹೋದ ಬಜರಂಗದಳ ಕಾರ್ಯಕರ್ತರ ಮೇಲೆ ನೈತಿಕ ಪೊಲೀಸ್ ಗಿರಿ ಪಟ್ಟ ಕಟ್ಟುತ್ತಾರೆ. ಇನ್ನು ಸ್ವಲ್ಪ ಸಮಯದಲ್ಲಿ ಈ‌ ಕೆಲಸವನ್ನು ದುರ್ಗಾವಾಹಿನಿ ಮಾಡಲಿದೆ ಎಂದು ಚೈತ್ರಾ ಹೇಳಿದರು.

ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ವಿಹಿಂಪ ಕಾರ್ಕಳ ಪ್ರಖಂಡದ ಉಪಾಧ್ಯಕ್ಷ ಜಗದೀಶ್‌ ಸಾಣೂರು, ಅಶೋಕ್‌ ಕುಮಾರ್‌ ಜೈನ್‌, ಸಾಣೂರು ವಲಯದ ಅಧ್ಯಕ್ಷ ದೇವಾನಂದ ಶೆಟ್ಟಿ, ದುರ್ಗಾವಾಹಿನಿ ತಾಲೂಕು ಸಂಚಾಲಕಿ ಕುಮಾರಿ ಸುರಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುರೇಖಾ ಸಂಚಾಲಕಿ
ಸಾಣೂರು ಮಾತೃಶಕ್ತಿ ದುರ್ಗಾಹಿನಿ‌ ಘಟಕ ಸಂಚಾಲಕಿಯಾಗಿ ಸುರೇಖಾ, ಸಹ ಸಂಚಾಲಕರಾಗಿ ಧನುಷಾ ಕುಮಾರಿ ಹಾಗೂ ಸೌಮ್ಯಾ ಅವರು ಆಯ್ಕೆಯಾಗಿರುತ್ತಾರೆ.

ಧನುಷಾ ಸ್ವಾಗತಿಸಿ, ಸೌಮ್ಯ ಇರ್ವತ್ತೂರು, ಶೈಲೇಶ್‌ ನಿರೂಪಿಸಿದರು. ಭವ್ಯಾ ಶ್ರೀ ವಂದಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!