Wednesday, January 26, 2022
spot_img
Homeಸ್ಥಳೀಯ ಸುದ್ದಿಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಪದಪ್ರದಾನ ಸಮಾರಂಭ

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಪದಪ್ರದಾನ ಸಮಾರಂಭ

ಸಂಬಂಧದಿಂದ ಸಂತೃಪ್ತ – ವಿಶ್ವನಾಥ ಶೆಟ್ಟಿ

ಸಾಧಕರಿಗೆ ಸನ್ಮಾನ

ಕಾರ್ಕಳ : ಸಂಬಂಧ ಚೆನ್ನಾಗಿದ್ದಲ್ಲಿ ಜೀವನದಲ್ಲಿ ಸಂತೃಪ್ತಿ ಕಾಣಲು ಸಾಧ್ಯ. ಲಯನ್ಸ್‌ ಕ್ಲಬ್‌ ಸ್ನೇಹಿತರೊಂದಿಗಿನ ಸಂಬಂಧ ಸದೃಢಗೊಳಿಸುವುದರೊಂದಿಗೆ ಹತ್ತಾರು ಸಮಾಜಮುಖಿ ಕಾರ್ಯ ನಡೆಸುತ್ತಿದೆ ಎಂದು ಲಯನ್ಸ್‌ ಜಿಲ್ಲಾ ಗವರ್ನರ್‌ ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಅ. 3ರಂದು ಹೊಟೇಲ್‌ ಕಟೀಲ್‌ ಇಂಟರ್‌ ನ್ಯಾಷನಲ್‌ನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಪದಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜೇಶ್‌ ಶೆಣೈ ನೇತೃತ್ವದಲ್ಲಿ ಲಯನ್ಸ್‌ ಕ್ಲಬ್‌ ಕಾರ್ಕಳ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸ ಲಯನ್ಸ್‌ ಕ್ಲಬ್‌ ಸ್ಥಾಪನೆಗಿಂತಲೂ ಪ್ರಸ್ತುತವಿರುವ ಕ್ಲಬ್‌ಗಳು ನಿರಂತರವಾಗಿ ಕಾರ್ಯಚಟುವಟಿಕೆಯಿಂದಿರುವುದು ಮುಖ್ಯವೆಂದು ವಿಶ್ವನಾಥ ಶೆಟ್ಟಿ ಹೇಳಿದರು.

ಪದಪ್ರದಾನ
ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಅಧ್ಯಕ್ಷೆ ಜ್ಯೋತಿ ರಮೇಶ್‌, ಕಾರ್ಯದರ್ಶಿ ಪ್ರವೀಣ್‌ ಸುವರ್ಣ, ಕೋಶಾಧಿಕಾರಿ ವನಿತಾ ವಿಶ್ವನಾಥ್‌, ಉಪಾಧ್ಯಕ್ಷರಾಗಿ ವಿಜೇಶ್‌ ಶೆಟ್ಟಿ, ರಘುವೀರ್‌ ಶೆಣೈ, ರವಿಪ್ರಕಾಶ್‌ ಪ್ರಭು, ಜೊತೆ ಕಾರ್ಯದರ್ಶಿ ವೀಣಾ ಆರ್. ಭಂಡಾರಿ, ಜೊತೆ ಕೋಶಾಧಿಕಾರಿ ಟಿ. ಕೆ. ರಘುವೀರ್
ಹಾಗೂ ನೂತನ ಸದಸ್ಯರಿಗೆ ವೀರಭದ್ರಪ್ಪ ಪ್ರಮಾಣವಚನ ಬೋಧಿಸಿದರು.

ಸನ್ಮಾನ

ನಿವೃತ್ತ ಏರ್‌ವೈಸ್‌ ಮಾರ್ಷಲ್‌ ಗಣೇಶ್‌ ಕಾರ್ಣಿಕ್‌, ನಿವೃತ್ತ ಶಿಕ್ಷಕಿ ಇಂದಿರಾ ಶಾಂತರಾಂ ಪುರೋಹಿತ್‌, ರೈತೆ ಮುತ್ತು ವಿಠಲ್‌ ಸಾಲ್ಯಾನ್‌, ಚಿತ್ರನಟಿ ರಕ್ಷಾ ಶೆಣೈ, ಪುರಸಭಾ ನಾಮನಿರ್ದೇಶಿತ ಸದಸ್ಯ ಅಶೋಕ್‌ ಸುವರ್ಣ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ವೈಸ್‌ ಗವರ್ನರ್ ನೇರಿ ಕರ್ನೆಲಿಯೋ, ಜಿಲ್ಲಾ ಸಂಪುಟದ ಕಾರ್ಯದರ್ಶಿ ಸ್ವಪ್ನಾ ಸುರೇಶ್‌, ಜಿಲ್ಲಾ ಕೋಶಾಧಿಕಾರಿ ಜಯಪ್ರಕಾಶ್‌ ಭಂಡಾರಿ, ಪ್ರಾಂತ್ಯ ಅಧ್ಯಕ್ಷರಾದ ಮಿಥುನ್‌ ಹೆಗ್ಡೆ, ಶಂಕರ್ ಶೆಟ್ಟಿ, ವಲಯಾಧ್ಯಕ್ಷ ಸುಭಾಷ್‌ ಸುವರ್ಣ, ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಸ್ಥಾಪಕ ಚಂದ್ರಹಾಸ ಸುವರ್ಣ, ಪ್ರೊ. ಬಿ. ಪದ್ಮನಾಭ ಗೌಡ, ರಾಬರ್ಟ್‌ ಡಿಮೆಲ್ಲೊ, ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ, ಕೋಶಾಧಿಕಾರಿ ಪ್ರಕಾಶ್‌ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮಮತಾ ಸುರ್ವಣ ಪ್ರಾರ್ಥಿಸಿ, ರಾಜೇಶ್‌ ಶೆಣೈ ಸ್ವಾಗತಿಸಿದರು. ಕಾರ್ಕಳ ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಆಶೀಶ್‌ ಶೆಟ್ಟಿ ನಿರೂಪಿಸಿ, ಪ್ರವೀಣ್‌ ಸುವರ್ಣ ವಂದಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!