Tuesday, December 7, 2021
spot_img
Homeಅಂಕಣಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣೆ ಮತ್ತು ಜಾಮೀನು - ಕಾನೂನು ಮಾಹಿತಿ

ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣೆ ಮತ್ತು ಜಾಮೀನು – ಕಾನೂನು ಮಾಹಿತಿ

ಪೊಲೀಸರು ಯಾವುದೇ ಅಪರಾಧ ಕೃತ್ಯಕ್ಕೆ ಸಂಬಂಧಪಟ್ಟಂತೆ ದೂರು ಅಥವಾ ಮಾಹಿತಿ ಪಡಕೊಂಡ ಕೂಡಲೇ ಪ್ರಥಮ ವರ್ತಮಾನ ವರದಿಯನ್ನು ಸಂಬಂಧ ಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಿ ನಂತರ ಅಪರಾಧದ ಸ್ವರೂಪವನ್ನು ಪರಿಗಣಿಸಿ ಸೂಕ್ತ ತನಿಖೆ ಮಾಡಬೇಕಾಗುತ್ತದೆ. ಈ ರೀತಿಯಾಗಿ ತನಿಖೆ ಮಾಡುವ ಸಂದರ್ಭದಲ್ಲಿ ಪೊಲೀಸರು ಅಪರಾಧ ಕೃತ್ಯಕ್ಕೆ ಸಂಬಂಧಪಟ್ಟ ವಿವಿಧ ವಿಚಾರಗಳ ಬಗ್ಗೆ ಸೂಕ್ತ ಮಾಹಿತಿ ಮತ್ತು ಸಾಕ್ಷಾಧಾರ ಕಲೆ ಹಾಕಿ ದೂರಿನ ಕುರಿತ ನಿಜಾಂಶದ ಬಗ್ಗೆ ತನಿಖೆ ಮಾಡಿ ಅಗತ್ಯವಿದ್ದಲ್ಲಿ ಅಪರಾಧ ಕೃತ್ಯಕ್ಕೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕಾಗುತ್ತದೆ. ಪೊಲೀಸ್ ತನಿಖೆಯನ್ನು ಅನಾವಶ್ಯಕವಾಗಿ ವಿಳಂಬ ಮಾಡದೆ ತಮ್ಮ ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ.

ಅಪರಾಧಶಾಸ್ತ್ರದ ಪ್ರಕಾರ ಅಪರಾಧದಲ್ಲಿ (1) ಸಂಜ್ಞೇಯ ಅಪರಾಧ (ಕೋಗ್ನಿಜಿಬಲ್) ಮತ್ತು (2) ಅಸಂಜ್ಞೇಯ ಅಪರಾಧ ( ನೋನ್ ಕೋಗ್ನಿಜಿಬಲ್) 2 ವಿಧಗಳಿರುತ್ತದೆ. ಸಂಜ್ಞೇಯ ಪ್ರಕರಣಕ್ಕೆ ಸಂಬಂಧಪಟ್ಟ ಒಬ್ಬ ವ್ಯಕ್ತಿಯನ್ನು ಪೊಲೀಸರು ವಾರಂಟ್ ಇಲ್ಲದೇ ದಸ್ತಗಿರಿ ಮಾಡಬಹುದು. ಆದರೆ‌, ಅಸಂಜ್ಞೇಯ ಪ್ರಕರಣಕ್ಕೆ ಸಮ್ಮಂಧಪಟ್ಟ ವ್ಯಕ್ತಿಯನ್ನು ಪೊಲೀಸರು ವಾರಂಟ್ ಇಲ್ಲದೇ ದಸ್ತಗಿರಿ ಮಾಡುವ ಅಧಿಕಾರ ಹೊಂದಿರುವುದಿಲ್ಲ.‌

ಭಾರತದ ಸಂವಿಧಾನದ ಪ್ರಕಾರ ಜಾಮೀನು ಎಂಬುವುದು ವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಹೊಂದಿರುತ್ತದೆ. ಸಮಾಜಘಾತುಕ ವ್ಯಕ್ತಿಗಳ, ರೂಡಿಗತ ಅಪರಾಧಿಗಳ, ಉಗ್ರಗಾಮಿಗಳ, ದೇಶ ದ್ರೋಹಿಗಳ ನಿಯಂತ್ರಣವು ಸಮಾಜದ ನೆಮ್ಮದಿ, ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಅತ್ಯಾವಶ್ಯಕವಾಗಿರುವುದರಿಂದ ಸಾಮಾನ್ಯವಾಗಿ ಇಂತಹ ಉಗ್ರ ಸ್ವರೂಪದ ಅಪರಾಧ ಎಸಗಿದವರನ್ನು ಕ್ರಿಮಿನಲ್ ಪ್ರಕರಣದ ವಿಚಾರಣೆ ಸಂಪೂರ್ಣಗೊಳ್ಳುವ ತನಕ ನ್ಯಾಯಾಂಗ ಬಂಧನದಲ್ಲಿಡಬೇಕಾಗುತ್ತದೆ.

ಕ್ರಿಮಿನಲ್ ಆರೋಪ ಹೊತ್ತಿರುವ ವ್ಯಕ್ತಿಯ ಸ್ವಾತಂತ್ರವನ್ನು ಪರಿಗಣಿಸುವ ಸಂದರ್ಭದಲ್ಲಿ ನ್ಯಾಯಾಲಯವು ಆತನ ಹಿನ್ನೆಲೆ ಮತ್ತು ಆತನ ಮೇಲಿನ ಆರೋಪದ ಸ್ವರೂಪವನ್ನು ಪರಿಗಣಿಸುತ್ತದೆ.
ಯಾವುದೇ ಒಬ್ಬ ವ್ಯಕ್ತಿ ಕ್ರಿಮಿನಲ್ ಆರೋಪದ ಮೇಲೆ ಬಂಧಿಸಲ್ಪಟ್ಟು ಬಂಧನದಲ್ಲಿದ್ದರೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ಯಾವುದೇ ಸೂಕ್ತ ಷರತ್ತು ವಿಧಿಸಬಹುದು ಮತ್ತು ನಂತರ ಷರತ್ತುಗಳನ್ನು ಮಾಪಾರ್ಡು ಅಥವಾ ರದ್ದು ಮಾಡಬಹುದು. ಒಮ್ಮೆ ನೀಡಿದ ಜಾಮೀನನ್ನು ರದ್ದುಪಡಿಸುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ. ಆದರೆ, ಇದಕ್ಕೆ ಸೂಕ್ತ ಕಾರಣದ ಅವಶ್ಯಕತೆಯಿದೆ. ಆದುದರಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ವ್ಯಕ್ತಿಯು ತನ್ನ ಮೇಲಿನ ಕ್ರಿಮಿನಲ್ ಪ್ರಕರಣ ಸಂಪೂರ್ಣವಾಗಿ ವಿಚಾರಣೆಗೊಂಡು ಮುಕ್ತಾಯವಾಗುವ ತನಕ ಕ್ರಮಬದ್ದವಾಗಿ ಸಂಬಂಧಪಟ್ಟ ವಿಚಾರಣಾ ಪೊಲೀಸ್ ಅಧಿಕಾರಿ ಅಥವಾ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಮೇಲಿನ ಅಪರಾಧದ ವಿಚಾರಣೆಗೆ ಸಹಕಾರ ನೀಡುವ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾನೆ.‌

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!