Wednesday, January 26, 2022
spot_img
Homeಸ್ಥಳೀಯ ಸುದ್ದಿನವರಾತ್ರಿ ಪ್ರಯುಕ್ತ ನ್ಯೂಸ್‌ ಕಾರ್ಕಳ ವತಿಯಿಂದ ಭಜನಾ ಕಾರ್ಯಕ್ರಮ

ನವರಾತ್ರಿ ಪ್ರಯುಕ್ತ ನ್ಯೂಸ್‌ ಕಾರ್ಕಳ ವತಿಯಿಂದ ಭಜನಾ ಕಾರ್ಯಕ್ರಮ

ಬಂಡಿಮಠ ಶ್ರೀ ಮೂಡುಮಹಾಗಣಪತಿ ದೇಗುಲದಲ್ಲಿ ಚಾಲನೆ

ಭಜನೆಯಿದ್ದಲ್ಲಿ ವಿಭಜನೆಯಿಲ್ಲ – ಭಾಸ್ಕರ್‌ ರಾವ್‌ ಲಾಡ್‌

ಕಾರ್ಕಳ : ನವರಾತ್ರಿಯಂಗವಾಗಿ ನ್ಯೂಸ್‌ ಕಾರ್ಕಳದ ವತಿಯಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅ. 3ರಂದು ಬಂಡಿಮಠ ಶ್ರೀ ಮೂಡುಮಹಾಗಣಪತಿ ದೇಗುಲದಲ್ಲಿ ಪಶುಸಂಗೋಪನಾ ಇಲಾಖೆಯ ನಿವೃತ್ತ ಹಿರಿಯ ಪಶುವೈದ್ಯಕೀಯ ಪರೀಕ್ಷಕ ಕೆ. ಭಾಸ್ಕರ್‌ ಲಾಡ್‌ ರಾವ್‌ ಹಾಗೂ ಸುಮಿತ್ರಾ ದಂಪತಿ ದೀಪ ಬೆಳಗಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಭಾಸ್ಕರ್‌ ರಾವ್ ಅವರು ದೇವರ ಅನುಗ್ರಹ ಪಡೆಯಲು ಭಜನೆ ಸುಲಭ ದಾರಿ. ಭಜನೆಯಿದ್ದಲ್ಲಿ ವಿಭಜನೆಯಿಲ್ಲ. ಶ್ರದ್ಧೆಯಿಂದ ಭಜನೆ ಮಾಡಿದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದರು.

ತರಂಗ ವಾರಪತ್ರಿಕೆ ಸಂಪಾದಕಿ ಡಾ. ಯು.ಬಿ. ರಾಜಲಕ್ಷ್ಮೀ ಮಾತನಾಡಿ, ಕ್ಷಣ-ಕ್ಷಣದ ಸುದ್ದಿ, ಉಪಯುಕ್ತ ಮಾಹಿತಿಯೊಂದಿಗೆ ನ್ಯೂಸ್ ಕಾರ್ಕಳ ವಿನೂತನ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದೆ. ಇಂತಹ ಕಾರ್ಯಕ್ರಮಗಳು ಸದಾ ಮೂಡಿಬರಲಿ ಎಂದು ಶುಭಹಾರೈಸಿದರು.

ಗಾಯಕ ಯೋಗೀಶ್‌ ಕಿಣಿ ಮಾತನಾಡಿ, ದೇವರನ್ನು ಸಾಕ್ಷಾತ್ಕರಿಸಲು ಭಜನೆ ಸುಲಭ ವಿಧಾನ. ನ್ಯೂಸ್‌ ಕಾರ್ಕಳ ಇಂತಹ ಶ್ರೇಷ್ಠ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ವಿಚಾರವೆಂದರು.

ಶ್ರೀ ಮೂಡುಗಣಪತಿ ದೇಗುಲದ ಆಡಳಿತ ಸಮಿತಿ ಸದಸ್ಯ ಕೆ.ಎಸ್.‌ ಹರೀಶ್‌ ಶೆಣೈ, ಸುಂದರ ಪ್ರಭು, ಅಜಿತ್‌ ಕುಮಾರ್‌ ಪೈ, ನ್ಯೂಸ್‌ ಕಾರ್ಕಳ ಸಂಪಾದಕ ರಾಮಚಂದ್ರ ಬರೆಪ್ಪಾಡಿ, ಸಲಹಾ ಸಮಿತಿ ಸದಸ್ಯರಾದ ಎಂಸಿಎಫ್‌ ಡಿಜಿಎಂ ಕೀರ್ತನ್‌ ಕೆ.ಬಿ., ಮೋಹನ್‌ ಕಾರ್ಕಳ, ಪದ್ಮಪ್ರಸಾದ್‌ ಜೈನ್‌, ರಾಜ್‌ ಸೌಂಡ್ಸ್‌ನ ರಾಜೇಂದ್ರ, ಉಪಸ್ಥಿತರಿದ್ದರು. ಅರುಣ್‌ ಮಾಂಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನ್ಯೂಸ್‌ ಕಾರ್ಕಳ ಜಾಹೀರಾತು ವಿಭಾಗದ ಮುಖ್ಯಸ್ಥೆ ಜ್ಯೋತಿ ರಮೇಶ್‌ ವಂದಿಸಿದರು. ಸುಮಿತ್‌, ಸೂರಜ್‌ ಸಹಕರಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!