Saturday, October 16, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಹೆಬ್ರಿ ತಾಲೂಕಿನೆಲ್ಲೆಡೆ ಗಾಂಧಿ ಜಯಂತಿ ಆಚರಣೆ

ಕಾರ್ಕಳ ಹೆಬ್ರಿ ತಾಲೂಕಿನೆಲ್ಲೆಡೆ ಗಾಂಧಿ ಜಯಂತಿ ಆಚರಣೆ

ಪುರಸಭೆಯ ಪ್ರತಿ ವಾರ್ಡ್‌ ನಲ್ಲೂ ಸ್ವಚ್ಛತಾ ಕಾರ್ಯ

ಸರ್ವಜ್ಞ ವೃತ್ತ ಸ್ವಚ್ಛಗೊಳಿಸಿದ ಕುಲಾಲ ಸಂಘ-ಕುಲಾಲ ಯುವ ವೇದಿಕೆ

ಕಾರ್ಕಳ : ಕಾರ್ಕಳ ತಾಲೂಕು ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್‌ಬಹದ್ದೂರ್‌ ಶಾಸ್ತ್ರೀ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗಾಂಧಿ ಹಾಗೂ ಶಾಸ್ತ್ರೀ ಜಯಂತಿ ಆಚರಿಸಲಾಯಿತು. ತಹಶೀಲ್ದಾರ್‌ ಕೆ. ಪುರಂದರ, ಡಿಟಿ ಮಂಜುನಾಥ ನಾಯಕ್‌, ಲಕ್ಷ್ಮೀ, ನಮಿತಾ, ಉಪನೋಂದಣಾಧಿಕಾರಿ ಮಾರುತಿ ಪ್ರಸಾದ್‌ ಎಚ್.ಕೆ., ಕಂದಾಯ ನಿರೀಕ್ಷಕ ಶಿವಪ್ರಸಾದ್‌, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ನಿವೇದಿತಾ ಪ್ರಾರ್ಥಿಸಿ, ಗ್ರಾಮ ಸಹಾಯಕ ಪ್ರಕಾಶ್‌ ನಿರೂಪಿಸಿ, ವಂದಿಸಿದರು.

ಪುರಸಭೆ ವತಿಯಿಂದ ಗಾಂಧಿ ಜಯಂತಿ
ಗಾಂಧಿ ಮೈದಾನದಲ್ಲಿನ ಗಾಂಧಿ ಪ್ರತಿಮೆಗೆ ಮುಖ್ಯಾಧಿಕಾರಿ ರೂಪ ಶೆಟ್ಟಿ ಮಾಲಾರ್ಪಣೆ ಮಾಡಿದರು. ಪುರಸಭೆ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಪುರಸಭಾ ಸದಸ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌ ಅವರ ವಾರ್ಡ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಸರ್ವಜ್ಞ ವೃತ್ತ ಸ್ವಚ್ಛತೆ
ಕುಲಾಲ ಸಂಘ, ಕುಲಾಲ ಯುವ ವೇದಿಕೆ ಕಾರ್ಕಳ ಇದರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ತಾಲೂಕು ಆಫೀಸಿನ ಹೆದ್ದಾರಿ ಬಳಿಯ ಸರ್ವಜ್ಞ ವೃತ್ತ ಸ್ವಚ್ಛಗೊಳಿಸಲಾಯಿತು. ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ಚಂದ್ರ ಕುಲಾಲ್‌, ಯುವ ವೇದಿಕೆ ಜಿಲ್ಲಾಧ್ಯಕ್ಷ ದಿವಾಕರ ಬಂಗೇರಾ, ಹೃದಯ್‌ ಕುಲಾಲ್‌, ಸಂದೇಶ್‌ ಕುಲಾಲ್‌, ಗಣೇಶ್‌, ದೇವಪ್ಪ ಕುಲಾಲ್‌, ವಿಜೇಶ್‌ ಕುಲಾಲ್, ಚಂದ್ರಹಾಸ್‌ ಮೂಲ್ಯ, ಮಾ. ದಿವಿತ್‌ ಮೊದಲಾದವರು ಉಪಸ್ಥಿತರಿದ್ದರು.

ಸರ್ವಜ್ಞ ವೃತ್ತ ಸ್ವಚ್ಛತೆ

ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯಲ್ಲಿ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ವೃಂದಾ ಶೆಣೈ, ಶಿಕ್ಷಕರ ವೃಂಧ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ

ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಗಾಂಧಿ ಭಾವಚಿತ್ರಕ್ಕೆ ಉಪಾಧ್ಯಕ್ಷ ಜೆರಾಲ್ಡ್ ಜೆ. ಡಿಸಿಲ್ವಾ ಪುಷ್ಪಾರ್ಚನೆ ಗೈದರು. ಎಪಿಎಂಸಿ ನಾಮನಿರ್ದೇಶಿತ ಸದಸ್ಯೆ ಜ್ಯೋತಿ ರಮೇಶ್, ಕಾರ್ಯದರ್ಶಿ ಕಾಕನೂರು, ಸಹ ಕಾರ್ಯದರ್ಶಿ ಬಾಲಚಂದ್ರ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಬಳಿಕ ಕಚೇರಿ ವಠಾರವನ್ನು ಸ್ವಚ್ಛಗೊಳಿಸಲಾಯಿತು. 

ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ

ಕುಕ್ಕುಂದೂರು ಅಯ್ಯಪ್ಪನಗರ
ನೀರೆ 3ನೇ ವಾರ್ಡ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!