Saturday, October 16, 2021
spot_img
Homeಸ್ಥಳೀಯ ಸುದ್ದಿವಿವಿಧೆಡೆ ಗಾಂಧಿ ಜಯಂತಿ ಆಚರಣೆ

ವಿವಿಧೆಡೆ ಗಾಂಧಿ ಜಯಂತಿ ಆಚರಣೆ

ಸ್ವಚ್ಛ ಕಾರ್ಕಳ ಬ್ರಿಗೇಡ್‌ ವತಿಯಿಂದ ಸೈಕಲ್‌ ರ್ಯಾಲಿ

ಕಾರ್ಕಳ : ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ “ಸ್ವಚ್ಛ ಭಾರತ್ ಮಿಷನ್” ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಸೈಕಲ್ ಜಾಥಾ ಆಯೋಜಿಸಲಾಯಿತು. ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಹೆಪ್ಟಥ್ಲಾನ್‌ ಕ್ರೀಡಾಪಟು ಅಕ್ಷತಾ ಪೂಜಾರಿ ಜಾಥಾ ಉದ್ಘಾಟಿಸಿದರು.
ಸುಮಾರು 85 ಮಂದಿ ತಮ್ಮ ಸೈಕಲಿನೊಂದಿಗೆ ಆನೆಕೆರೆಯಿಂದ- ದಾನ ಶಾಲೆ- ಅನಂತಶಯನ- ಕಾರ್ಕಳ ಬಸ್ ಸ್ಟ್ಯಾಂಡ್- ಶ್ರೀ ವೆಂಕಟರಮಣ ದೇವಸ್ಥಾನವಾಗಿ- ಗಾಂಧಿ ಮೈದಾನ ತಲುಪಿ, ಗಾಂಧೀಜಿಯ ಸ್ವಚ್ಛತೆಯ ಸಂದೇಶ ಸಾರಿದರು. ಕಳೆದ ಎರಡು ವರ್ಷಗಳಿಂದ ಸ್ವಚ್ಛ ಕಾರ್ಕಳ ಬ್ರಿಗೇಡ್‌ ತಂಡ ತಾಲೂಕಿನ ವಿವಿಧಡೆ ನಿರಂತರವಾಗಿ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬಂದಿರುವ ಮೂಲಕ ತಂಡವು ಸಾರ್ವಜನಿಕರಿಂದ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ.

ಚಾರ ಪಂಚಾಯತ್‌ನಲ್ಲಿ ಸ್ವಚ್ಛತಾ ಕಾರ್ಯ

ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ರವರ ಆಶಯದಂತೆ ಚಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅ. 2ರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಜೆಪಿ ಹೆಬ್ರಿ ತಾಲೂಕು ಪ್ರಮುಖರಾದ ಗುರುದಾಸ ಶೆಣೈ, ಪಂಚಾಯತ್ ಅಧ್ಯಕ್ಷೆ ಕುಸುಮ ಪ್ರಭು, ಉಪಾಧ್ಯಕ್ಷೆ ಜಯಲಕ್ಷ್ಮೀ, ಪಂಚಾಯತ್ ಸದಸ್ಯರಾದ ರಾಘವೇಂದ್ರ, ಮಮತಾ ಶೆಟ್ಟಿ, ಶಶಿಕಲಾ, ಕೃಷ್ಣ ನಾಯ್ಕ್, ವಾದಿರಾಜ ಶೆಟ್ಟಿ ಸುಮಲತಾ, ಸಂತೋಷ ಶೆಟ್ಟಿ, ಎಪಿಎಂಸಿ ಸದಸ್ಯರಾದ ಸಂಜೀವ ನಾಯ್ಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸೀತಾರಾಮ ಗಾಣಿಗ, ಪ್ರಧಾನ ಕಾರ್ಯದರ್ಶಿ ಸುನೀಲ್ ಪೂಜಾರಿ, ಬಿಜೆಪಿ ಕಾರ್ಕಳ ಮಂಡಲ ಕಾರ್ಯದರ್ಶಿ ರಾಘವೇಂದ್ರ ಡಿಜಿ., ಹೆಬ್ರಿ ಶಕ್ತಿಕೇಂದ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ನಾಯ್ಕ್, ಪಕ್ಷದ ಪ್ರಮುಖರಾದ ಸಿಎಂ ಪ್ರಸನ್ನ ಶೆಟ್ಟಿ, ಗಣೇಶ್ ಪ್ರಭು, ರಾಜೇಶ್ ಪೂಜಾರಿ, ಮಹೇಶ್ ಗಾಣಿಗ ಮತ್ತಿತರರು ಭಾಗವಹಿಸಿದ್ದರು.

ಚಾರ ಪಂಚಾಯತ್‌ನಲ್ಲಿ ಸ್ವಚ್ಛತಾ ಕಾರ್ಯ

ಪರ್ಪಲೆಗುಹೆ ಸಂಪರ್ಕ ದಾರಿ ಸ್ವಚ್ಛತೆ

ಹಿರಿಯಂಗಡಿ ಚೇತಕ್ ಯುವಕ ಮಂಡಲ, ಯುವತಿ ಮಂಡಲ ಇದರ ವತಿಯಿಂದ ಶ್ರೀ ಕ್ಷೇತ್ರ ಪರ್ಪಲೆಗಿರಿಯ ಶಕ್ತಿಪೀಠ ಪರ್ಪಲೆಗುಹೆ ದಾರಿ ಸ್ವಚ್ಛತಾ ಕಾರ್ಯ ನಡೆಯಿತು. ಶಿವತಿಕೆರೆ ಹಿಂದೂ ಜಾಗರಣ ವೇದಿಕೆ ಘಟಕದ ಸದಸ್ಯರು ಪಾಲ್ಗೊಂಡಿದ್ದರು.

ರ್ಪಲೆಗುಹೆ ಸಂಪರ್ಕ ದಾರಿ ಸ್ವಚ್ಛತೆ

ಸುರಕ್ಷಾ ಸೇವಾಶ್ರಮದಲ್ಲಿ ಸ್ಕೌಟ್‌ ಗೈಡ್‌ ವಿದ್ಯಾರ್ಥಿಗಳಿಂದ ವಿಶಿಷ್ಟ ರೀತಿಯಲ್ಲಿ ಗಾಂಧಿ ಜಯಂತಿ ಆಚರಣೆ
ಕಾರ್ಕಳ : ಭುವನೇಂದ್ರ ಇಂಗ್ಲಿಷ್ ಮೀಡಿಯಂ ಪ್ರೈಮರಿ ವಿಭಾಗದ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸುರಕ್ಷಾ ಸೇವಾಶ್ರಮದಲ್ಲಿ ಗಾಂಧಿ ಜಯಂತಿ ಆಚರಿಸಿದರು. ಸುಮಾರು 40 ನಿಮಿಷಗಳ ಕಾಲ ಮನರಂಜನಾ ಕಾರ್ಯಕ್ರಮ ನೀಡಿ, ಸ್ವಚ್ಛತೆಯ ಬಗೆಗೂ ಅರಿವನ್ನೂ ಮೂಡಿಸಿದರು. ಸುರಕ್ಷಾ ಸೇವಾಶ್ರಮದ ಮುಖ್ಯಸ್ಥೆ ಆಯೇಷಾ, ಶಾಲಾ ಗೈಡರ್ ಸೀಮಾ ಕಾಮತ್, ಸ್ಕೌಟರ್ ಸುಜಾತಾ ಹೆಗ್ಡೆ ಉಪಸ್ಥಿತರಿದ್ದರು.

ಸುರಕ್ಷಾ ಸೇವಾಶ್ರಮದಲ್ಲಿ ಸ್ಕೌಟ್‌ ಗೈಡ್‌ ವಿದ್ಯಾರ್ಥಿಗಳಿಂದ ವಿಶಿಷ್ಟ ರೀತಿಯಲ್ಲಿ ಗಾಂಧಿ ಜಯಂತಿ ಆಚರಣೆ
ಸಾಣೂರು ಯುವಕ ಮಂಡಲ
ಕೈರಬೆಟ್ಟು 2ನೇ ವಾರ್ಡಿನಲ್ಲಿ ಸ್ವಚ್ಛತಾ ಅಭಿಯಾನ
ಕುಕ್ಕುಂದೂರು ಗ್ರಾಮ ಪಂಚಾಯತ್
ಕುಕ್ಕುಂದೂರು ಗ್ರಾಮ ಪಂಚಾಯತ್
ನಕ್ರೆ ಶಾಲೆಯ ವಠಾರದ ಸ್ವಚ್ಛತೆ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!