Wednesday, January 26, 2022
spot_img
Homeಅಂಕಣಆರೋಗ್ಯಧಾರ - ತ್ರಿಕಟು ಚೂರ್ಣ ಹಾಗೂ ಚತುರ್ಜಾತ ಚೂರ್ಣದ ಉಪಯೋಗಗಳು

ಆರೋಗ್ಯಧಾರ – ತ್ರಿಕಟು ಚೂರ್ಣ ಹಾಗೂ ಚತುರ್ಜಾತ ಚೂರ್ಣದ ಉಪಯೋಗಗಳು

  1. ತ್ರಿಕಟು ಚೂರ್ಣ
    ಶ್ವಾಸಕೋಶದ ಹಲವಾರು ಕಾಯಿಲೆಗಳನ್ನು ಗುಣಪಡಿಸುವ ತ್ರಿಕಟು ಚೂರ್ಣವಿನ ಬಗ್ಗೆ ಇವತ್ತು ತಿಳಿದುಕೊಳ್ಳೋಣ. ತ್ರಿಕಟು ಅಂದರೆ ಮೂರು ಕಟು ರಸ ಹೊಂದಿರುವ ದ್ರವ್ಯಗಳ ಮಿಶ್ರಣ. ಇದರಲ್ಲಿ ಶುಂಠಿ, ಹಿಪ್ಪಲಿ ಹಾಗೂ ಕರಿಮೆಣಸನ್ನು ಬಳಸುತ್ತಾರೆ. ಇದನ್ನು ಆಯುರ್ವೇದದ ಅನೇಕ ಔಷಧಗಳಲ್ಲಿ ಬಳಸಲಾಗುವುದು.
    ಇದರ ಪರ್ಯಾಯ ಪದ – ತ್ರಿಕಟುಕಮ್, ಕಟುತ್ರಯ.

ಇದರ ಗುಣಗಳು – ಇದು ಉಷ್ಣವೀರ್ಯ, ದೀಪನ, ಜೀರ್ಣಕ್ರಿಯೆಯಲ್ಲಿ ಸಹಾಯಮಾಡುತ್ತದೆ. ಕಫ ದೋಷವನ್ನು ಸಮತೋಲನಗೊಳಿಸುತ್ತದೆ.

ತ್ರಿಕಟು ಚೂರ್ಣದ ಉಪಯೋಗಗಳು
• ಯಕೃತ್ತಿಗೆ ಬಹಳ ಹಿತಕಾರಿ.
• ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುತ್ತದೆ.
• ಬೊಜ್ಜನ್ನು ಕರಗಿಸುತ್ತದೆ.
• ತ್ವಚೆಯ ರೋಗಗಳಲ್ಲಿ ಅತ್ಯುಪಯೋಗಿ ಔಷಧ.
• ಇದಕ್ಕೆ ನೆಗಡಿ, ಕೆಮ್ಮು, ಅಲರ್ಜಿ ನಿವಾರಿಸುವ ಶಕ್ತಿ ಇದೆ.
• ಅರುಚಿಯನ್ನು ಹೋಗಲಾಡಿಸುತ್ತದೆ.
• ಅಜೀರ್ಣವನ್ನು ಗುಣಪಡಿಸುತ್ತದೆ.
• ಸಕ್ಕರೆ ಕಾಯಿಲೆಗಳಲ್ಲಿ ಪ್ರಯೋಜನಕಾರಿ.
• ರಕ್ತಹೀನತೆಯಲ್ಲಿ ಬಳಸುತ್ತಾರೆ.
• ಜ್ವರವನ್ನು ನಿವಾರಿಸುತ್ತದೆ.
• ಗಂಟಲು ನೋವಿನಲ್ಲಿ ಸಹಾಯಕಾರಿ.

ಸೇವಿಸುವ ಪ್ರಮಾಣ – 500mg ರಿಂದ 3 gm ಜೇನುತುಪ್ಪ ಅಥವಾ ನೀರಿನ ಜೊತೆ ಸೇವಿಸಬಹುದು.
ಅಧಿಕ ಪ್ರಮಾಣದಲ್ಲಿ ಸೇವಿಸಬಾರದು.

  1. ಚತುರ್ಜಾತ ಚೂರ್ಣ
    ಚಕ್ಕೆ, ಲವಂಗದ ಪತ್ರ, ಏಲಕ್ಕಿ ಹಾಗೂ ನಾಗಕೇಶರವನ್ನು ಬಳಸಿ ಮಾಡಿದ ಔಷಧವನ್ನು ಚತುರ್ಜಾತ ಎನ್ನುತ್ತಾರೆ.
    ದೋಷದ ಮೇಲೆ ಪ್ರಭಾವ – ವಾತ ಹಾಗೂ ಕಫ ದೋಷವನ್ನು ಕಡಿಮೆಗೊಳಿಸುತ್ತದೆ.

ಉಪಯೋಗಗಳು
• ತ್ವಚೆಯನ್ನು ಸುಂದರಗೊಳಿಸುತ್ತದೆ, ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.
• ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆ ಹೆಚ್ಚಿಸುತ್ತದೆ.
• ದೇಹ ಶುದ್ಧಿ ಮಾಡುತ್ತದೆ.
• ಕೊಲೆಸ್ಟ್ರಾಲನ್ನು ಕಡಿಮೆಗೊಳಿಸುತ್ತದೆ.

ಸೇವಿಸುವ ಪ್ರಮಾಣ- 1 gm – 3 gm ನೀರು ಅಥವಾ ಜೇನುತುಪ್ಪದ ಜತೆ ಆಹಾರ ಸೇವಿಸಿದ ಬಳಿಕ ದಿನಕ್ಕೆ ಎರಡು ಬಾರಿ.

ಡಾ. ಹರ್ಷಾ ಕಾಮತ್

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!