Saturday, October 16, 2021
spot_img
HomeUncategorizedಸಾಧನ ಜಿ. ಆಶ್ರೀತ್ ಅವರಿಗೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್

ಸಾಧನ ಜಿ. ಆಶ್ರೀತ್ ಅವರಿಗೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್

ಕಾರ್ಕಳ : ಸುಮೇಧ ಫ್ಯಾಶನ್ ಇನ್ಸಿಟ್ಯೂಟ್‌ ಹಾಗೂ ಸುಮೇಧ ಡಿಸೈನರ್ ಬುಟಿಕ್ ಸಂಸ್ಥಾಪಕಿ ಸಾಧನ ಜಿ. ಆಶ್ರೀತ್ ಅವರಿಗೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್ ಲಭಿಸಿದೆ. ಸರ್ವಸಂತೃಪ್ತಿ ವೆಂಚರ್ಸ್ ಬೆಂಗಳೂರು ಆಶ್ರಯದಲ್ಲಿ ಬೆಂಗಳೂರಿನ ಆರ್.ಜಿ. ರೋಯಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ತಾರ ಮ್ಯಾಗಜೀನ್ ಸಂಪಾದಕ ಶಿವಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು. 12 ವರ್ಷ ಫ್ಯಾಶನ್ ಡಿಸೈನಿಂಗ್ ಕಾಲೇಜ್ ಗಳಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದು, ಕನ್ನಡ ಧಾರಾವಾಹಿ, ಪ್ಯಾಷನ್ ಇವೆಂಟ್ ಕಾರ್ಯಕ್ರಮ ನಡೆಸಿದ್ದು, ಕಾಸ್ಟ್ಯೂಮ್ ಡಿಸೈನರಾಗಿ ಪ್ರಸಿದ್ಧಿ ಪಡೆದಿರುತ್ತಾರೆ.

ಉಚಿತ ತರಬೇತಿ
ಹೆಣ್ಣು ಮಕ್ಕಳಿಗೆ ಫ್ಯಾಷನ್‌ ಡಿಸೈನಿಂಗ್‌ ಸೇರಿದಂತೆ ಹಲವಾರು ಉಚಿತ ತರಬೇತಿಗಳನ್ನು ನೀಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬವ ಕಾರ್ಯವನ್ನೂ ಮಾಡಿರುತ್ತಾರೆ. ಈ ಮೂಲಕ ಸ್ವಂತ ಉದ್ಯೋಗ ಮಾಡಲು ನೆರವಾಗಿದ್ದಾರೆ. ಇವರ ಒಟ್ಟು ಸಾಧನೆಯನ್ನು ಗುರುತಿಸಿ ಚಿತ್ತಾರ ಸಂಸ್ಥೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್ ನೀಡಿದೆ. ಕಾರ್ಲ್ಟನ್ ಇವೆಂಟ್ ಮ್ಯಾನೇಜ್ಮೆಂಟ್ ಮುಖ್ಯಸ್ಧ ಬಸವರಾಜ್ , ಕಿರುತೆರೆ ನಟ ನಟಿಯರು, ನಿರ್ದೇಶಕರು, ಕಿರುತೆರೆಯ ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!