Saturday, October 16, 2021
spot_img
Homeಸ್ಥಳೀಯ ಸುದ್ದಿಕೆರ್ವಾಶೆ : ಅಕ್ಷತಾ ಪೂಜಾರಿ-ಅಜಿತ್‌ ಕುಮಾರ್‌ ಇಂದ್ರರವರಿಗೆ ಸನ್ಮಾನ‌

ಕೆರ್ವಾಶೆ : ಅಕ್ಷತಾ ಪೂಜಾರಿ-ಅಜಿತ್‌ ಕುಮಾರ್‌ ಇಂದ್ರರವರಿಗೆ ಸನ್ಮಾನ‌

ಕೆರ್ವಾಶೆ : 60ನೇ ರಾಷ್ಟ್ರೀಯ ಮುಕ್ತ ಚಾಂಪಿಯನ್‌ ಶಿಪ್‌ ಹೆಪ್ಟಾಥ್ಲಾನ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅಕ್ಷತಾ ಪೂಜಾರಿ ಹಾಗೂ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಅಜಿತ್‌ ಕುಮಾರ್‌ ಇಂದ್ರ ಅವರಿಗೆ ಸೆ. 29ರಂದು ಕೆರ್ವಾಶೆ ಸಾಗರ್‌ ಸಭಾಭವನದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಭಾಸ್ಕರ್‌ ವಿ. ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಕಳ ನಗರ ವಲಯ ಎಸ್‌ಕೆಡಿಆರ್‌ಡಿಪಿ ವಲಯಾಧ್ಯಕ್ಷ ಪ್ರಶಾಂತ್ ಡಿʼಸೋಜಾ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಸಾಲಿಯಾನ್‌, ಬಿ. ಒಕ್ಕೂಟದ ಅಧ್ಯಕ್ಷ ಬೋಜ ಪೂಜಾರಿ, ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮಮಾಲಿನಿ, ಅಕ್ಷತಾ ತಂದೆ ಅಂಗು ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಗ್ರಾಮಸ್ಥರ ಪರವಾಗಿ ರಾಮಣ್ಣ ಸೇರ್ವೆಗಾರ್‌ ಮಾತನಾಡಿದರು. ಒಕ್ಕೂಟದ ಸೇವಾ ಪ್ರತಿನಿಧಿ ಲಲಿತಾ ಜೈನ್ ಸ್ವಾಗತಿಸಿ, ವಿಮಲಾ ಪ್ರಾರ್ಥಿಸಿದರು. ಶಶಿಧರ ಕುಲಾಲ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪ್ರಭಾಕರ ನಾಯ್ಕ್ ನಿರೂಪಿಸಿ, ವಂದಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಕಾರ್ಕಳ ʼಎʼ ಮತ್ತು ʼಬಿʼ ಒಕ್ಕೂಟ ಕೆರ್ವಾಶೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟ ಮತ್ತು ಸ್ತ್ರೀ ಶಕ್ತಿ ಸಂಘ ಕೆರ್ವಾಶೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಭಿನಂದನಾ ಸಮಾರಂಭ ಜರಗಿತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!