Homeವಿದೇಶವಿಮಾನ ಸೇವೆ ಆರಂಭಿಸಿ : ಭಾರತಕ್ಕೆ ತಾಲಿಬಾನ್ ಮನವಿ

Related Posts

ವಿಮಾನ ಸೇವೆ ಆರಂಭಿಸಿ : ಭಾರತಕ್ಕೆ ತಾಲಿಬಾನ್ ಮನವಿ

ಕಾಬೂಲ್: ಸ್ಥಗಿತಗೊಂಡಿರುವ ವಿಮಾನ ಸೇವೆ ಪುನರಾರಂಭಿಸುವಂತೆ ತಾಲಿಬಾನ್ ಆಡಳಿತ ಭಾರತಕ್ಕೆ ಮನವಿ ಮಾಡಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ತಾಲಿಬಾನ್ ಆಡಳಿತ ಈ ಸಂಬಂಧ ಪತ್ರ ಬರೆದಿದೆ.
ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಜಾರಿಗೆ ಬಂದ ಬಳಿಕ ಭಾರತ ವಿಮಾನ ಸೇವೆ ಸ್ಥಗಿತಗೊಳಿಸಿತ್ತು. ಕಾಬೂಲ್ ವಿಮಾನ ನಿಲ್ದಾಣದ ಭದ್ರತೆಯ ಹೊಣೆಯನ್ನು ಅಮೆರಿಕ ಸೇನಾ ಪಡೆ ವಹಿಸಿದ್ದ ವೇಳೆ ವಿಶೇಷ ವಿಮಾನಗಳಲ್ಲಿ ಅಲ್ಲಿಂದ ನಾಗರಿಕರನ್ನು ತೆರವುಗೊಳಿಸಿತ್ತು.
ವಿಮಾನ ಪ್ರಯಾಣಿಕರ ಸುರಕ್ಷತೆ ಹಾಗೂ ಇನ್ನಿತರ ಭದ್ರತಾ ಅಂಶಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಕುರಿತು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

Latest Posts

error: Content is protected !!