Saturday, October 16, 2021
spot_img
Homeಸ್ಥಳೀಯ ಸುದ್ದಿಕುಕ್ಕುಂದೂರು : ಬಿಜೆಪಿ ಮಹಾಶಕ್ತಿ ಕೇಂದ್ರ ವಿಶೇಷ ಸಭೆ

ಕುಕ್ಕುಂದೂರು : ಬಿಜೆಪಿ ಮಹಾಶಕ್ತಿ ಕೇಂದ್ರ ವಿಶೇಷ ಸಭೆ

ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ -ಸುನಿಲ್‌ ಕುಮಾರ್‌
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸುವ ಪಣ ತೊಡಬೇಕು : ಮಹಾವೀರ ಹೆಗ್ಡೆ

ಕಾರ್ಕಳ : ಕುಕ್ಕುಂದೂರು ಬಿಜೆಪಿ ಮಹಾಶಕ್ತಿ ಕೇಂದ್ರದ ವಿಶೇಷ ಸಭೆಯು ಸೆ. 27ರಂದು ಜೋಡುರಸ್ತೆ ಕುಲಾಲ ಸಭಾಂಗಣದಲ್ಲಿ ಜರುಗಿತು. ಮಂಡಲ ಕ್ಷೇತ್ರಾ‍ಧ್ಯಕ್ಷ ಮಹಾವೀರ ಹೆಗ್ಡೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸುವ ಪಣ ತೊಡಬೇಕು. ಚುನಾವಣೆಗೆ ಬೂತ್‌ ಮಟ್ಟದಿಂದಲೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ -ಸುನಿಲ್‌ ಕುಮಾರ್
ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಮಾತನಾಡಿ, ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ತಯಾರಿ ನಡೆಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಹೊಂದಾಣಿಕೆಯೊಂದಿಗೆ ಬೂತ್‌ ಮಟ್ಟದಲ್ಲಿ ಸಕ್ರೀಯ ಚಟುವಟಿಕೆಯಾಗಬೇಕೆಂದರು. ‌

ಕಾರ್ಯಕರ್ತರು ಚಟುವಟಿಕೆಯಿಂದಿರಬೇಕು- ಮಣಿರಾಜ್‌ ಶೆಟ್ಟಿ
ಗೇರು ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಕರ್ತರು ಚಟುವಟಿಕೆಯಿಂದ ಇರುವುದು ಮುಖ್ಯವಾಗಿದೆ. ಸಚಿವರ ಅನುಪಸ್ಥಿಯಲ್ಲೂ ಕೂಡ ಪಕ್ಷದ ಕಾರ್ಯ ಬೂತ್‌ ಮಟ್ಟದಲ್ಲಿ ಸದೃಢವಾಗಿರಬೇಕೆಂದರು.

ವೈಯಕ್ತಿಕ ವಿಚಾರ ಬದಿಗಿಡಿ -ಸುನಿತ್‌ ಶೆಟ್ಟಿ
ಜಿ.ಪಂ. ನಿಕಟಪೂರ್ವ ಸದಸ್ಯ ಸುಮಿತ್‌ ಶೆಟ್ಟಿ ಮಾತನಾಡಿ, ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಪಕ್ಷಸಂಘಟನೆಯಲ್ಲಿ ತೊಡಗಿಕೊಂಡು ಕುಕ್ಕುಂದೂರು ಶಕ್ತಿಕೇಂದ್ರವನ್ನು ಮತ್ತಷ್ಟು ಬಲಪಡಿಸುವ ಕಾರ್ಯವಾಗಬೇಕೆಂದು ಅಭಿಪ್ರಾಯಪಟ್ಟರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ಕೋಟ್ಯಾನ್‌, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್‌, ಮಹಿಳಾ.ಮೋರ್ಚಾ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಕುಕ್ಕುಂದೂರು ಪಂಚಾಯತ್‌ ಸದಸ್ಯರಾದ ಅಂತೋನಿ ಡಿಸೋಜಾ, ಯೋಗೀಶ್‌ ಸಾಲಿಯಾನ್‌, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಜಯರಾಂ ಸಾಲಿಯಾನ್‌, ನವೀನ್‌ ನಾಯಕ್‌, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಉದಯ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಮಹಾಶಕ್ತಿಕೇಂದ್ರದ ಬೂತ್‌ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಗ್ರಾಮ ಸಮಿತಿ ಪದಾಧಿಕಾರಿಗಳು, ಎಪಿಎಂಸಿ ಸದಸ್ಯರು, ಮಹಿಳಾ ಮೋರ್ಚಾ, ಯುವಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ, ರೈತ ಮೋರ್ಚಾ, ಎಸ್ಸಿ ಮೋರ್ಚಾ, ಎಸ್‌ಟಿ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪಳ್ಳಿ ಪಂಚಾಯತ್‌ ಸದಸ್ಯ ಶ್ರೀಕಾಂತ್ ಪ್ರಭು ಗೀತೆ ಹಾಡಿದರು. ಎಪಿಎಂಸಿ ಸದಸ್ಯೆ ಜ್ಯೋತಿ ರಮೇಶ್‌ ಪ್ರಾರ್ಥಿಸಿ, ಕುಕ್ಕುಂದೂರು ಶಕ್ತಿಕೇಂದ್ರದ ಕಾರ್ಯದರ್ಶಿ ಅಶೋಕ್‌ ಶೆಟ್ಟಿ ಸ್ವಾಗತಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ಪ್ರಸಾದ್‌ ಐಸಿರ ಕಾರ್ಯಕ್ರಮ ನಿರೂಪಿಸಿ, ಯುವಮೋರ್ಚಾ ಅಧ್ಯಕ್ಷ ರಾಕೇಶ್‌ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!