Saturday, October 16, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಮುಖ್ಯರಸ್ತೆ ಬದಿ ತ್ಯಾಜ್ಯದ ರಾಶಿ

ಕಾರ್ಕಳ ಮುಖ್ಯರಸ್ತೆ ಬದಿ ತ್ಯಾಜ್ಯದ ರಾಶಿ

ಕಸ ಎಸೆದು ಹೋಗುವ ದುರುಳರು

ಕಾರ್ಕಳ : ಸ್ವಚ್ಛ ಕಾರ್ಕಳ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಹತ್ತಾರು ಸಂಘ-ಸಂಸ್ಥೆಗಳು ಅವಿರತವಾಗಿ ಶ್ರಮಿಸುತ್ತಿದೆ. ಕಾರ್ಕಳ ಸುಂದರ ನಗರವಾಗಬೇಕೆಂಬ ಕಾಳಜಿಯಲ್ಲಿ ನೂರಾರು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತವರ ಮಧ್ಯೆ ಬೆರಳೆಣಿಕೆ ಮಂದಿ ನಗರದ ಸೌಂದರ್ಯ ಹಾಳುಗೆಡವುತ್ತಿರುವುದು ವಿಪರ್ಯಾಸವೇ ಸರಿ. ಕಾರ್ಕಳ ಮುಖ್ಯ ರಸ್ತೆಯ ಶಾಲಿನಿ ಟವರ್‌ ಬಳಿ, ಎಸ್‌.ಜೆ. ಆರ್ಕೇಡ್‌ ಮುಂಭಾಗ ಹೊರಗಿನವರು ಬಂದು ನಿತ್ಯ ತ್ಯಾಜ್ಯ ಸುರಿಯುತ್ತಿದ್ದು ಕಂಡುಬರುತ್ತಿದೆ. ದೇವರ ರಸ್ತೆ ಎಂದೇ ಕರೆಯಲ್ಪಡುವ ಈ ರಸ್ತೆಯಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಇಲ್ಲಿನ ವ್ಯಾಪಾರಸ್ಥರಿಗೆ ಭಾರಿ ತೊಂದರೆಯಾಗುತ್ತಿದ್ದು, ಅಲ್ಲಿಗಾಗಮಿಸುವ ಗ್ರಾಹಕರು ಮೂಗು ಮುಚ್ಚಿಕೊಂಡೇ ತೆರಳುವಂತಾಗಿದೆ. ದಿನಸಿ, ಜ್ಯುವೆಲ್ಲರಿ ಸೇರಿದಂತೆ ಹಲವು ಮಳಿಗೆಗಳು ಇದೇ ಪರಿಸರದಲ್ಲಿದೆ.

ಮೂರು ಕ್ಲಿನಿಕ್‌
ಇದೇ ಪರಿಸರದಲ್ಲಿ ಅಂದರೆ ಮುಕುಂದಕೃಪಾ ಕಾಂಪ್ಲೆಕ್ಸ್‌ ಬಳಿ ಆಯುರ್ವೇದಿಕ್‌, ಹೋಮಿಯೋಪತಿ ಹಾಗೂ ಅಲೋಪತಿ ವಿಭಾಗದ ಖ್ಯಾತ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ತ್ಯಾಜ್ಯದ ದರ್ಶನ ಮಾಡಿಯೇ ವೈದ್ಯರನ್ನು ಕಾಣುವಂತಾಗಿದೆ. ಆರೋಗ್ಯದ ಮೇಲೂ ಇಲ್ಲಿನ ತ್ಯಾಜ್ಯದಿಂದಾಗಿ ಪರಿಣಾಮ ಬೀರುವ ಸಾಧ್ಯತೆಯೂ ಇದೆ.

ಕ್ರಮ ಅಗತ್ಯ
ಎಲ್ಲಿಂದಲೋ ತಂದು ಇಲ್ಲಿ ಕಸ ಸುರಿದು ಪರಿಸರ ಹಾಳುಗೆಡುವವರ ವಿರುದ್ಧ ಪುರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಾರೆ. ಸ್ವಚ್ಛತೆಗೆ ಆದ್ಯತೆ ನೀಡುವುದರೊಂದಿಗೆ ಪುರಸಭೆ ಕಸ ಬಿಸಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಗರದ ಕೆಲವೆಡೆ ಸಿಸಿಟಿವಿ ಅಳವಡಿಸುವ ಕಾರ್ಯವೂ ಆಗಬೇಕಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!