Saturday, October 16, 2021
spot_img
Homeಸ್ಥಳೀಯ ಸುದ್ದಿಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಅ‍ಧ್ಯಕ್ಷೆಯಾಗಿ ಜ್ಯೋತಿ ರಮೇಶ್‌

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಅ‍ಧ್ಯಕ್ಷೆಯಾಗಿ ಜ್ಯೋತಿ ರಮೇಶ್‌

ಅ. 3ರಂದು ಪದಪ್ರಧಾನ

ಕಾರ್ಕಳ : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಇದರ ಅಧ್ಯಕ್ಷೆಯಾಗಿ ಕುಕ್ಕುಂದೂರು ಗ್ರಾಮದ ಜ್ಯೋತಿ ರಮೇಶ್‌ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಹೊಟೇಲ್‌ ಪ್ರಕಾಶ್‌ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಕಾರ್ಯದರ್ಶಿಯಾಗಿ ಪ್ರವೀಣ್‌ ಸುವರ್ಣ, ಕೋಶಾಧಿಕಾರಿ ವನಿತಾ ವಿಶ್ವನಾಥ್‌, ಉಪಾಧ್ಯಕ್ಷರಾಗಿ ವಿಜೇಶ್‌ ಶೆಟ್ಟಿ, ರಘುವೀರ್‌ ಶೆಣೈ, ರವಿಪ್ರಕಾಶ್‌ ಪ್ರಭು, ಜೊತೆ ಕಾರ್ಯದರ್ಶಿಯಾಗಿ ವೀಣಾ ಆರ್. ಭಂಡಾರಿ, ಜೊತೆ ಕೋಶಾಧಿಕಾರಿಯಾಗಿ ಟಿ. ಕೆ. ರಘುವೀರ್ ಕಾರ್ಯನಿರ್ವಹಿಸಲಿದ್ದಾರೆ. ಚಂದ್ರಹಾಸ ಸುವರ್ಣ, ಯೋಗೀಶ್‌ ನಾಯಕ್‌, ಅನಂತಕೃಷ್ಣ ಶೆಣೈ, ಪ್ರದೀಪ್‌ ನಾಯಕ್‌, ಜೆಸ್ಸಿ ಮಿನೇಜಸ್‌, ನಿತ್ಯಾನಂದ ಪೈ ಸಮಿತಿಯಲ್ಲಿದ್ದು, ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ಗಳಾಗಿ ಗಂಗಾಧರ ಕೋಟ್ಯಾನ್‌, ಕೆ.ಎಸ್. ರಘುನಾಥ್‌, ಸಚಿನ್‌ ಸಾಲ್ಯಾನ್‌, ಶರತ್‌ ಭಟ್‌, ಸಂದೀಪ್‌ ಜೈನ್‌, ಉದಯ ಆಚಾರ್ಯ, ಕಾಂತಿ ಹರೀಶ್‌, ಬಾಲಕೃಷ್ಣ ಶೆಟ್ಟಿ, ಅಶೋಕ್‌ ಸುವರ್ಣ, ಗೋಪಾಲ ಅಂಚನ್‌, ಸದಾಶಿವ ಪೂಜಾರಿ, ವಿನಯ ಹೆಗ್ಡೆ ಕಾಬೆಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರದಪ್ರಧಾನ ಸಮಾರಂಭ
ಅ. 3ರಂದು ಕಾರ್ಕಳದ ಹೊಟೇಲ್ ಕಟೀಲ್‌‌ ಇಂಟರ್‌ನ್ಯಾಷನಲ್‌ನಲ್ಲಿ ಸಂಜೆ 7:30 ಗಂಟೆಗೆ ಪದಪ್ರಧಾನ ಸಮಾರಂಭ ನಡೆಯಲಿದೆ. ಜಿಲ್ಲಾ ಗವರ್ನರ್‌ ವಿಶ್ವನಾಥ್‌ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿರುವರು. ಜಿಲ್ಲಾ ಮಾಜಿ ಗವರ್ನರ್‌ ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಕ್ಯಾಬಿನೆಟ್‌ ಕಾರ್ಯದರ್ಶಿ ಸ್ವಪ್ನಾ ಸುರೇಶ್‌, ರೀಜನಲ್‌ ಚೇರ್‌ಮೆನ್‌ ಮಿಥುನ್ ಹೆಗ್ಡೆ, ವಲಯಾಧ್ಯಕ್ಷ ಸುಭಾಷ್‌ ಸುವರ್ಣ, ಕಾರ್ಕಳ ಲಯನ್ಸ್‌ ಕ್ಲಬ್‌ ಅಧ್ಯಕ್ಷರು ರಾಜೇಶ್‌ ಶೆಣೈ, ಕಾರ್ಯದರ್ಶಿ ನಿತ್ಯಾನಂದ ಭಂಡಾರಿ, ಕೋಶಾಧಿಕಾರಿ ಪ್ರಕಾಶ್‌ ಪಿಂಟೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!