ಪಕ್ಷ ಸಂಘಟನೆಗಾಗಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸುವಂತೆ ಸುನಿಲ್ ಕುಮಾರ್ ಸೂಚನೆ
ಸಭೆಯಲ್ಲಿ 5 ಪಂಚಾಯತ್ನ 71 ಪಂಚಾಯತ್ ಸದಸ್ಯರು ಭಾಗಿ
ಕಾಂಗ್ರೆಸ್, ಪಕ್ಷೇತರ ಗ್ರಾ. ಪಂ. ಸದಸ್ಯರು ಬಿಜೆಪಿ ಸೇರ್ಪಡೆ
ಕಾರ್ಕಳ : ಪಕ್ಷ ಸಂಘಟನೆಗಾಗಿ ಪ್ರತಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಬೇಕು. ಅಕ್ಟೋಬರ್ 2ರಂದು ಎಲ್ಲರೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಸೆ. 27ರಂದು ಮುರತ್ತಂಗಡಿ ರಿಜೆನ್ಸಿ ಹಾಲ್ನಲ್ಲಿ ನಡೆದ ಬಿಜೆಪಿ ನಿಟ್ಟೆ ಮಹಾಶಕ್ತಿ ಕೇಂದ್ರದ ವಿಶೇಷ ಸಭೆಯಲ್ಲಿ ಮಾತನಾಡಿದರು.
ಮಿಯ್ಯಾರು, ರೆಂಜಾಳ, ಸಾಣೂರು, ಇರ್ವತ್ತೂರು ನಿಟ್ಟೆ ಗ್ರಾಮ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ, 5 ಗ್ರಾಮ ಪಂಚಾಯತ್ನ 71 ಪಂಚಾಯತ್ ಸದಸ್ಯರು, 29 ಬೂತ್ ಸಮಿತಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ, ಮಹಿಳಾ ಮೋರ್ಚಾ ಶಕ್ತಿ ಕೇಂದ್ರ ಸಮಿತಿಯವರು ಸಭೆಯಲ್ಲಿ ಭಾಗವಹಿಸಿದ್ದರು.
ಪಕ್ಷಕ್ಕೆ ಸೇರ್ಪಡೆ
ಸಚಿವ ಸುನಿಲ್ ಕುಮಾರ್ ಅವರ ಅಭಿವೃದ್ಧಿ ಕಾರ್ಯ, ಬಿಜೆಪಿ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ಮಿಯಾರು ಗ್ರಾ. ಪಂ. ನ ಕಾಂಗ್ರೆಸ್ ಬೆಂಬಲಿತ ಸದಸ್ಯ ದಿನೇಶ್ ನಲ್ಕೆ, ಪಕ್ಷೇತರ ಗ್ರಾ.ಪಂ. ಸದಸ್ಯ ಪ್ರಶಾಂತ್ ಪೂಜಾರಿ, ಗಣೇಶ್ ಹಾಗೂ ತಂಡ ಬಿಜೆಪಿ ಸೇರ್ಪಡೆಗೊಂಡರು.

ನಿಟ್ಟೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕರುಣಾಕರ್ ಎಸ್. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯನ್ನು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಉದ್ಘಾಟಿಸಿದರು, ನಿಟ್ಟೆ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಲಿಪ, ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್ ರೆಂಜಾಳ, ಚಂದ್ರಶೇಖರ್ ಇರ್ವತ್ತೂರು, ಕಾರ್ಯದರ್ಶಿ ಧನ್ಶೇಖರ್, ಸತೀಶ್ ಶೆಟ್ಟಿ, ಯುವರಾಜ್ ಜೈನ್, ಬಾಲಕೃಷ್ಣ ಹೆಗ್ಡೆ,ರಮೇಶ್ ಶೆಟ್ಟಿ, ಪ್ರಶಾಂತ್, ಜಯಕರ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋಹನ್ ಶೆಟ್ಟಿ ಸ್ವಾಗತಿಸಿ, ಪ್ರಸಾದ್ ಪೂಜಾರಿ ವಂದಿಸಿದರು, ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.