Wednesday, January 19, 2022
spot_img
HomeUncategorizedಕಾರ್ಕಳ ಮೆಸ್ಕಾಂ ಉಪವಿಭಾಗಗಳಿಗೆ ರೂ. 6 ಕೋಟಿ ವಿಶೇಷ ಅನುದಾನ : ಸುನಿಲ್ ಕುಮಾರ್

ಕಾರ್ಕಳ ಮೆಸ್ಕಾಂ ಉಪವಿಭಾಗಗಳಿಗೆ ರೂ. 6 ಕೋಟಿ ವಿಶೇಷ ಅನುದಾನ : ಸುನಿಲ್ ಕುಮಾರ್

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲೊ ವೊಲ್ಟೇಜ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಕಾರ್ಕಳ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ಮೆಸ್ಕಾಂ ಉಪ ವಿಭಾಗಗಳಿಗೆ ರೂ. 6.00 ಕೋಟಿ ವಿಶೇಷ ಅನುದಾನದಲ್ಲಿ ಹೆಚ್ಚುವರಿಯಾಗಿ ವಿದ್ಯುತ್ ಪರಿವರ್ತಕ (ಟಿಸಿ) ಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಲೊ ವೊಲ್ಟೇಜ್ ಹಾಗೂ ವಿದ್ಯುತ್ ಪರಿವರ್ತಕಗಳ ಸಮಸ್ಯೆ ಬಗೆಹರಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿರುತ್ತಾರೆ.
ಕಾರ್ಕಳ ಉಪವಿಭಾಗಕ್ಕೆ ಸಂಬಂಧಿಸಿದಂತೆ ರೂ. 5 ಕೋಟಿ ವೆಚ್ಚದಲ್ಲಿ 25 ಕೆ.ವಿ. ಸಾಮರ್ಥ್ಯದ 33 ಪರಿವರ್ತಕ, 63 ಕೆ.ವಿ ಸಾಮಥ್ರ್ಯದ 70 ಒಟ್ಟು 103 ವಿದ್ಯುತ್ ಪರಿವರ್ತಕಗಳನ್ನು ಹೊಸದಾಗಿ ಅಳವಡಿಸಲಾಗುವುದು. ಕಾರ್ಕಳ ಉಪವಿಭಾಗದ ಬೈಲೂರು ಶಾಖೆಯ ಬೈಲೂರು – 02, ಎರ್ಲಪಾಡಿ -01, ಕೌಡೂರು – 05, ನೀರೆ – 01, ಪಳ್ಳಿ – 01 ಕಾರ್ಕಳ ಎ ಶಾಖೆಯ ತೆಳ್ಳಾರು – 14, ನಿಟ್ಟೆ – 02, ಕಾರ್ಕಳ ಬಿ ಶಾಖೆಯಲ್ಲಿ ಮಿಯ್ಯಾರು – 05, ಸಾಣೂರು – 02, ಮುಡಾರು -01, ರೆಂಜಾಳ – 02, ಇರ್ವತ್ತೂರು – 01, ನಿಟ್ಟೆ ಶಾಖೆಯ ನಿಟ್ಟೆ – 10, ಕಲ್ಯಾ – 05, ಬೋಳ – 03, ಕಾಂತಾವರ – 06, ಬಜಗೋಳಿ ಶಾಖೆಯ ನಲ್ಲೂರು – 07, ಮುಡಾರು – 04, ಮಾಳ – 04, ಈದು -04, ನೂರಾಳ್‍ಬೆಟ್ಟು – 01, ಬೆಳ್ಮಣ್ ಶಾಖೆಯ ಮುಂಡ್ಕೂರು – 07, ಬೆಳ್ಮಣ್ – 04, ಮುಲ್ಲಡ್ಕ – 02, ಸೂಡ – 06, ನಂದಳಿಕೆ – 02, ಇನ್ನಾ – 01 ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
ಹೆಬ್ರಿ ಉಪವಿಭಾಗಕ್ಕೆ ಸಂಬಂಧಿಸಿದಂತೆ ರೂ. 1.00 ಕೊಟಿ ವೆಚ್ಚದಲ್ಲಿ 25 ಕೆ.ವಿ ಸಾಮಥ್ರ್ಯದ 07 ಪರಿವರ್ತಕ, 63 ಕೆ.ವಿ ಸಾಮಥ್ರ್ಯದ 19 ಒಟ್ಟು 26 ವಿದ್ಯುತ್ ಪರಿವರ್ತಕಗಳನ್ನು ಹೊಸದಾಗಿ ಅಳವಾಡಿಸಲಾಗುವುದು. ಹೆಬ್ರಿ ಉಪ ವಿಭಾಗದ ಹೆಬ್ರಿ ಶಾಖೆಯ ನಾಡ್ಪಾಲು – 03, ಮುದ್ರಾಡಿ – 04, ಹೆಬ್ರಿ – 03, ಚಾರಾ – 03, ಶಿವಪುರ – 03 ಮತ್ತು ಅಜೆಕಾರು ಶಾಖೆಯ ಮರ್ಣೆ – 05, ಕಡ್ತಲ – 03, ಶಿರ್ಲಾಲು – 01, ವರಂಗ – 01 ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಕಳ ಶಾಸಕರ ಕಛೇರಿ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!