Wednesday, January 19, 2022
spot_img
HomeUncategorizedಬಿಜೆಪಿ ಸರಕಾರ ಧರ್ಮವಿರೋಧಿ ಕಾರ್ಯ ಮಾಡುತ್ತಿದೆ : ಸುಧೀರ್‌ ಕುಮಾರ್ ಮರೋಳಿ

ಬಿಜೆಪಿ ಸರಕಾರ ಧರ್ಮವಿರೋಧಿ ಕಾರ್ಯ ಮಾಡುತ್ತಿದೆ : ಸುಧೀರ್‌ ಕುಮಾರ್ ಮರೋಳಿ

ಕಾಂಗ್ರೆಸ್‌ ವತಿಯಿಂದ ಪಂಜಿನ ಮೆರವಣಿಗೆ

ಕಾರ್ಕಳ : ಧರ್ಮ, ದೇವರು ಎನ್ನುತ್ತಾ ಅಧಿಕಾರಕ್ಕೆ ಬಂದ ಬಿಜೆಪಿ ಇದೀಗ ಧರ್ಮ ವಿರೋಧಿ ಕಾರ್ಯ ನಡೆಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಅನಂತರ ಕಸಾಯಿ ಖಾನೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸುಧೀರ್‌ ಕುಮಾರ್ ಮರೋಳಿ ಹೇಳಿದರು.

ಅವರು ಸೆ. 25ರಂದು ಸರಕಾರ ದೇಗುಲ ತೆರವು ನಡೆಸಿರುವ ವಿರುದ್ಧ ಕಾಂಗ್ರೆಸ್‌ ವತಿಯಿಂದ ಕಾರ್ಕಳದಲ್ಲಿ ನಡೆದ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್‌, ಪೊಲೀಸ್‌ ದೌರ್ಜನ್ಯ ಮಾಡಲಾಗುತ್ತಿದೆ. ಇಂತಹ ಷಡ್ಯಂತ್ರವನ್ನು ಎದುರಿಸುವ ತಾಖತ್ ಮತ್ತು ದೈರ್ಯ ಕಾಂಗ್ರೆಸ್ ಪಕ್ಷಕ್ಕಿದೆ. ಬೈಂದೂರಿನ ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯಕರ್ತ ಉದಯ ಗಾಣಿಗ ಕೊಲೆ ಪ್ರಕರಣ, ಹೆಬ್ರಿಯ ಪ್ರವೀಣ್ ಪೂಜಾರಿ ಕೊಲೆ ಪ್ರಕರಣ, ಹೊನ್ನಾವರದ ಪರೇಶ್ ಮೇಸ್ತನ ಕೊಲೆ ಪ್ರಕರಣಗಳಿಗೆ ನ್ಯಾಯ ಒದಗಿಸದ ಬಿಜೆಪಿ ಮುಖಂಡರು ಎಂತಹ ಹಿಂದುತ್ವವಾದಿಗಳು ಎಂದು ಪ್ರಶ್ನಿಸಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ್ ರಾವ್ ಮಾತನಾಡಿ, ಕಾಂಗ್ರೇಸ್ ಆಡಳಿತದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರವಾಗಿದೆ. ಬಿಜೆಪಿ ದೇವಸ್ಥಾನ ಹೊಡೆದು ಪಾಪ ಮಾಡಿದೆ. ದೇವಸ್ಥಾನ ಹೊಡೆದವರನ್ನು ದೇವರು ರಕ್ಷಿಸಲಾರ. ದೇವರ, ಧರ್ಮದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ನೈಜ ಬಣ್ಣ ಬಯಲಾಗಿದೆ ಎಂದರು.
ಹಿಂದೆ ಕಾಂಗ್ರೆಸ್ ಸರಕಾರವಿರುವಾಗ ಗೋಕಳ್ಳತನದ ಕುರಿತು ಪ್ರತಿಭಟನೆ ಮಾಡುತ್ತಾ, ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದ ಸುನೀಲ್ ಕುಮಾರ್ ಅವರು ಇಂದು ಮೌನವಾಗಿದ್ದಾರೆ ಎಂದು ಶುಭದ ಹೇಳಿದರು.

ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಉಡುಪಿ ಉಸ್ತುವಾರಿ ಹಾಗೂ ರಾಜ್ಯ ಕಾರ್ಯದರ್ಶಿ ಜೋತಿಷ್ ಹೆಚ್.ಎಂ. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಸುಶಾಂತ್ ಸುಧಾಕರ್, ಕಿಸಾನ್ ಘಟಕದ ಉದಯ ಶೆಟ್ಟಿ, ಪ್ರಭಾಕರ ಕೋಟ್ಯಾನ್, ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶ ಮೂಲ್ಯ, ಮಾಜಿ ಜಿ.ಪಂ. ಸದಸ್ಯರಾದ ಸುಪ್ರೀತ್ ಶೆಟ್ಟಿ, ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜಾ ಬೆಳ್ಮಣ್, ಈದು ಪಂಚಾಯತ್ ಅಧ್ಯಕ್ಷೆ ಜಯಂತಿ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮುಖಂಡರು‌, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ದಿನೇಶ್‌ ಹೇರೂರು, ಕೆಪಿಸಿಸಿ ಕೋಆರ್ಡಿನೇಟರ್ ಹರೀಶ್ ಕಿಣಿ, ಯತೀಶ್ ಕರ್ಕೇರ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೈನ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ, ಪ್ರದೀಪ್ ಶೆಟ್ಟಿ ಬಜಗೋಳಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಬೇಲಾಡಿ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಸುರಯ್ಯ ಅಂಜುಮ್, ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಮೀದ್ ಹುಸೈನ್, ಕಾರ್ಕಳ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಪೂಜಾರಿ ಇನ್ನಾ ಉಪಸ್ಥಿತರಿದ್ದರು. ಕಾರ್ಕಳದ ಅನಂತ ಶಯನ ದೇವಸ್ಥಾನದಿಂದ ಹೊರಟ ಪಂಜಿನ ಮರೆವಣಿಗೆ ಕಾರ್ಕಳ ಬಸ್ಟ್ಯಾಂಡ್ ತನಕ ಸಾಗಿದ್ದು ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!