Wednesday, January 26, 2022
spot_img
Homeಸ್ಥಳೀಯ ಸುದ್ದಿದೃಢ ಸಂಕಲ್ಪವು ಮಾನವನ ಬೆಳಣಿಗೆಯ ಮೆಟ್ಟಿಲು : ಡಾ. ಈಶ್ವರ ಪ್ರಸಾದ್ ಅಭಿಪ್ರಾಯ

ದೃಢ ಸಂಕಲ್ಪವು ಮಾನವನ ಬೆಳಣಿಗೆಯ ಮೆಟ್ಟಿಲು : ಡಾ. ಈಶ್ವರ ಪ್ರಸಾದ್ ಅಭಿಪ್ರಾಯ

ಸಾಧನೆಗೈಯಲು ಉತ್ತೇಜನ ಅಗತ್ಯ – ವಿನಯ ಹೆಗ್ಡೆ

ನಿಟ್ಟೆ: ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಮ್ಮ ಜೀವನಶೈಲಿಯಲ್ಲೂ ವಿವಿಧ ಬಗೆಯ ಬದಲಾವಣೆಗಳನ್ನು ಕಾಣಬಹುದಾಗಿದೆ. ವಿದ್ಯಾರ್ಥಿದೆಸೆಯಲ್ಲಿ ಯಾವುದು ಸರಿ, ತಪ್ಪು ಎಂಬುದನ್ನು ನಿರ್ಧರಿಸಿ ಉತ್ತಮ ದಾರಿಯನ್ನು ಆರಿಸಿಕೊಂಡು ಜೀವನದಲ್ಲಿ ಮುನ್ನಡೆಯುವುದು ಅತಿಮುಖ್ಯ ಎಂದು ಮೂಡಬಿದ್ರೆಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಇಂಜಿನಿಯರಿಂಗ್‍ನ ಪ್ರಾಂಶುಪಾಲ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಕಾಡೆಮಿಕ್ ಸೆನೇಟ್‍ನ ಸದಸ್ಯ ಡಾ. ಜಿ.ಎಲ್. ಈಶ್ವರ ಪ್ರಸಾದ್ ಅಭಿಪ್ರಾಯಪಟ್ಟರು.

ಅವರು ಸೆ. 24ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತವು ಇಂಟರ್‍ನೆಟ್ ಕ್ಷೇತ್ರದಲ್ಲಿ 5ಜಿ ಅಂತಹ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿದೆ. ಇಂತಹ ತಂತ್ರಜ್ಞಾನ ಕ್ರಾಂತಿಯು ದೇಶದ ಬೆಳವಣಿಗೆಗೆ ಪೂರಕವೇ ಸರಿ. ಪ್ರತಿದಿನವೂ ನಾವು ವಿವಿಧ ಕ್ಷೇತ್ರದಲ್ಲಿ ಕಲಿಕೆಯನ್ನು ಮುಂದುವರೆಸಲು ಅವಕಾಶಗಳು ವಿಫುಲವಾಗಿವೆ. ನಮ್ಮ ದೃಢ ನಿರ್ಧಾರವೇ ನಮ್ಮ ಸಾಧನೆಯ ಮೆಟ್ಟಿಲಾಗಬೇಕು. ಕಲಿಕೆಯನ್ನು ನಿರಂತರವಾಗಿ ಮುಂದುವರೆಸಲು ವಯಸ್ಸು ಯಾವುದೇ ರೀತಿಯಲ್ಲೂ ಅಡ್ಡಿಯಾಗದು ಎಂದವರು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಎಜುಕೇಶನ್ ಟ್ರಸ್ಟ್‌ ಅಧ್ಯಕ್ಷ ಎನ್. ವಿನಯ ಹೆಗ್ಡೆ, ನಮ್ಮ ಜೀವನದಲ್ಲಿ ಸಾಧನೆಗೈಯ್ಯಲು ನಮಗೆ ಉತ್ತಮ ಉತ್ತೇಜನ ಅಗತ್ಯವಿದೆ. ಪ್ರತಿಯೋರ್ವ ಪ್ರಾಧ್ಯಾಪಕನೂ ತಮ್ಮ ಕ್ಷೇತ್ರದಲ್ಲಿನ ಬೆಳವಣಿಗೆ ಅರಿತುಕೊಂಡು ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ದಾರಿಯಾಗಬೇಕು. ಯಶಸ್ಸಿನ ಹಿಂದೆ ಜ್ಞಾನ, ಪ್ರಾಮಾಣಿಕ ಪ್ರಯತ್ನ ಹಾಗೂ ವಿವಿಧ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮನೋಭಾವ ಅಡಕವಾಗಿರುತ್ತದೆ ಎಂದರು.

ಪದವಿಪ್ರದಾನ ಸಮಾರಂಭದ ಸಂದರ್ಭದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿವಿಧ ಕೋರ್ಸ್‍ಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿಪದಕಗಳನ್ನು ನೀಡಿ ಸನ್ಮಾನಿಸಲಾಯಿತು. ಬಿ.ಇ., ಎಂ.ಟೆಕ್ ಹಾಗೂ ಎಂ.ಸಿ.ಎ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಡಿಗ್ರಿ ಪ್ರದಾನ ಮಾಡಲಾಯಿತು.

ಬಿ.ಇ. ವಿಭಾಗದಲ್ಲಿ ಬಯೋಟೆಕ್ನಾಲಜಿ ವಿಭಾಗದ ಶಿವಾನಿ, ಸಿವಿಲ್ ವಿಭಾಗದ ಸಿದ್ಧಿವಿನಾಯಕ ದತ್ತಾತ್ರೇಯ ಹೆಗ್ಡೆ, ಕಂಪ್ಯೂಟರ್ ಸೈನ್ಸ್‌ನ ಮೈತ್ರಿ ಸುರೇಶ್, ಇಲೆಕ್ಟ್ರಾನಿಕ್ಸ್ ವಿಭಾಗದ ಸಂಜನಾ, ಇಲೆಕ್ಟ್ರಿಕಲ್ ವಿಭಾಗದ ಶ್ರೇಯಸ್ ಪಿ.ಪಿ., ಇನ್ಫೋಮೇಶನ್‍ ಸೈನ್ಸ್‌ನ ಅರ್ಚನಾ ಎಸ್.ಎಚ್., ಮೆಕ್ಯಾನಿಕಲ್ ವಿಭಾಗದ ಕೆನನ್ ಡಿʼಸಿಲ್ವಾ, ಎಂ.ಟೆಕ್ ವಿಭಾಗದಲ್ಲಿ ಶ್ರೀಲಕ್ಷ್ಮೀ ಎಂ.ಎಚ್.ಎಂ. ಮೇಘನಾ, ಶಾರದಾ ಜಿ., ಪ್ರಗತಿ ಯು. ರಾವ್, ಲುಬ್ನಾ ಮೊಹಮ್ಮದ್, ಅಖಿಲ್ ಮೊಹಮ್ಮದ್, ಹರಿಪ್ರಸಾದ್ ಹಾಗೂ ಎಂ.ಸಿ.ಎ. ವಿಭಾಗದ ಬಬಿತಾ ಶೆಟ್ಟಿ, ಕೆ. ಚಿನ್ನದ ಪದಕ ಪಡೆದರು.
ಬಿ.ಇ ವಿಭಾಗದಲ್ಲಿ ಬಯೋಟೆಕ್ನಾಲಜಿ ವಿಭಾಗದ ಶ್ರೇಯಾ ಹೆಗ್ಡೆ, ಸಿವಿಲ್ ವಿಭಾಗದ ಸುಜಿತ್ ಶೆಟ್ಟಿ, ಕಂಪ್ಯೂಟರ್‍ ಸೈನ್ಸ್‌ ನ ಶಿವಾನಿ ಶೆಣೈ ಬಿ, ಇಲೆಕ್ಟ್ರಾನಿಕ್ಸ್ ವಿಭಾಗದ ನಿಶಾ ವಿರಾ ಡಿಕುನ್ನಾ, ಇಲೆಕ್ಟ್ರಿಕಲ್ ವಿಭಾಗದ ಪೃಥ್ವಿ ಜೆ. ಪಡ್ಪು, ಇನ್ಫೋಮೇಶನ್‍ ಸೈನ್ಸ್‌ ನ ಮೇಧಿನಿ ಐತಾಳ್, ಮೆಕ್ಯಾನಿಕಲ್ ವಿಭಾಗದ ಅಜಯ್ ಕೆ. ಶೆಟ್ಟಿ, ಎಂ.ಟೆಕ್ ವಿಭಾಗದಲ್ಲಿ ಪ್ರಜ್ವಲ್ ಕೆ.ಎಸ್, ಮೊಹಮ್ಮದ್ ಹಾಶಿಮ್ ಎಂ.ಎಚ್., ದೀಕ್ಷಾ ವಿ. ನಾಯ್ಕ್, ವೈಷ್ಣವಿ ಎಸ್. ಶೆಟ್ಟಿ, ವಂದನಾ ಆರ್.ಪಿ., ಅಶ್ವಿನಿ ಯು, ನಿಖಿಲ್ ಕನೋಜಿ ಹಾಗೂ ಎಂ.ಸಿ.ಎ ವಿಭಾಗದ ವಿಘ್ನೇಶ್ ಪೈ ಬೆಳ್ಳಿ ಪದಕಗಳಿಸಿದರು.

ವೇದಿಕೆಯಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಹಾಗೂ ಪರೀಕ್ಷಾ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ರಾವ್ ಬಿ.ಆರ್ ಸಮಾರಂಭ ಮೆರವಣಿಗೆ ಮುನ್ನಡೆಸಿದರು. ಉಪಪ್ರಾಂಶುಪಾಲ ಡಾ.ಐ. ರಮೇಶ್ ಮಿತ್ತಂತಾಯ ಚಿನ್ನ ಹಾಗೂ ಬೆಳ್ಳಿಯ ಪದಕಗಳಿಸಿದ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಸಂಯೋಜಿಸಿದರು. ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ.ಉಜ್ವಲ ಕಾರ್ಯಕ್ರಮ ನಿರೂಪಿಸಿ, ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಹಾಗೂ ಮೆಕ್ಯಾನಿಕಲ್ ವಿಭಾಗದ ಪ್ರೊಫೆಸರ್ ಡಾ. ಶ್ರೀನಿವಾಸ್ ಪೈ ವಂದಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!