Sunday, October 24, 2021
spot_img
Homeಅಂಕಣಆರೋಗ್ಯಧಾರ - ಸಾಮಾನ್ಯ ಶೀತಕ್ಕೆ ಇಲ್ಲಿದೆ ಮನೆಮದ್ದು

ಆರೋಗ್ಯಧಾರ – ಸಾಮಾನ್ಯ ಶೀತಕ್ಕೆ ಇಲ್ಲಿದೆ ಮನೆಮದ್ದು

ಶೀತ, ಕೆಮ್ಮು ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆಗಳು. ಇದರ ಜೊತೆಗೆ ತಲೆನೋವು, ನಿದ್ರಾಹೀನತೆ, ಮೂಗು ಕಟ್ಟುವಿಕೆ ಕಂಡುಬರುತ್ತದೆ. ಕೆಲವರಿಗೆ ಪುನಃ ಪುನಃ ಮರುಕಳಿಸುತ್ತದೆ. ಇದು ಯಾವುದರಿಂದ ಆಗುತ್ತದೆ ಹಾಗೂ ಹೇಗೆ ನಾವು ಇದನ್ನು ತಡೆದು ಕೊಳ್ಳಬಹುದು ಎಂದು ಇವತ್ತು ತಿಳಿದುಕೊಳ್ಳೋಣ.

ಸಾಮಾನ್ಯ ಕಾರಣಗಳು
ಆಯುರ್ವೇದದಲ್ಲಿ ಯಾವುದೇ ರೋಗಗಳಿರಲಿ ಅದಕ್ಕೆ ಪ್ರಮುಖವಾದ ಕಾರಣಗಳನ್ನು ತೆಗೆದು ಹಾಕುವುದು ಮುಖ್ಯ ಎಂದು ಹೇಳುತ್ತದೆ. ರೋಗದ ಮೂಲ ಕಾರಣವನ್ನೇ ಕಿತ್ತೊಗೆಯದೆ ಬರೀ ಔಷಧವನ್ನು ಸೇವಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಕಾರಣಗಳು ಭಿನ್ನವಾಗಿರುತ್ತದೆ. ಅದನ್ನು ಕಂಡು ಹಿಡಿಯುವುದು ಮುಖ್ಯ. ಧೂಳು, ವಾಯುಮಾಲಿನ್ಯ, ಎಸಿಯಲ್ಲಿ ಸಮಯ ಕಳೆಯುವುದರಿಂದ, ಕೂಲ್ ಡ್ರಿಂಕ್ಸ್ ಕುಡಿಯುವುದರಿಂದ, ಹಗಲಿನಲ್ಲಿ ಮಲಗುವುದರಿಂದ, ರಾತ್ರಿ ಜಾಗರಣೆ ಮಾಡುವುದರಿಂದ ಕೂಡ ಸಮಸ್ಯೆ ಆಗಬಹುದು. ಋತುಗಳಲ್ಲಿ ಏರಿಳಿತವಾದಾಗ, ಯಾವುದೇ ಇನ್ಫೆಕ್ಷನ್ ಆದಾಗ ಕಂಡುಬರುವ ಇವು ಸಾಮಾನ್ಯ ಲಕ್ಷಣಗಳು. ಪ್ರಥಮವಾಗಿ ನಾವು ಮಾಡಬೇಕಾದದ್ದು ಕಾರಣಗಳನ್ನು ಪತ್ತೆ ಹಚ್ಚಿ ಅದರಿಂದ ದೂರ ಸರಿಯುವುದು. ಹೀಗೆ ಮಾಡುವುದರಿಂದ ರೋಗವನ್ನು ತಡೆಯಬಹುದು. ಇದನ್ನು ನಿದಾನಪರಿವರ್ಜನೆ ಎಂದು ಹೇಳುತ್ತದೆ ಆಯುರ್ವೇದ.

ಸಾಮಾನ್ಯವಾಗಿ ಕಂಡುಬರುವಂತಹ ಶೀತ, ಕೆಮ್ಮುನ್ನು ತಡೆಯಬಹುದಾದ ಕ್ರಮಗಳು ಹೀಗಿವೆ

 • ಹುಳಿ ರಸ ಇರುವ ಆಹಾರವನ್ನು ಸೇವಿಸಿ. ನಿಂಬೆಹಣ್ಣು, ಮೂಸಂಬಿ, ಕಿತ್ತಳೆ ಸೇವಿಸಿದರೆ ಹಿತಕರ.
 • ಮೊಸರನ್ನು ಸೇವಿಸಿ ಇದು ಕಫ ದೋಷವನ್ನು ದೇಹದಿಂದ ಹೊರ ಹಾಕುತ್ತದೆ.
 • ಕಫ ಜಾಸ್ತಿ ಇದ್ದಾಗ ಹಾಲನ್ನು ಕಡಿಮೆ ಕುಡಿಯಿರಿ ಇಲ್ಲದಿದ್ದರೆ ಹಾಲಿಗೆ ಕರಿಮೆಣಸಿನ ಪುಡಿ, ಅರಿಶಿನ ಪುಡಿ, ಕಲ್ಲು ಸಕ್ಕರೆಯನ್ನು ಬೆರೆಸಿ ಕುದಿಸಿ ಕುಡಿಯಬಹುದು.
 • ನೀಲಗಿರಿ ತೈಲವನ್ನು ಬಿಸಿ ನೀರಿಗೆ ಹಾಕಿ ಸ್ಟೀಮ್ ಇನ್ ಹಲೇಷನ್ ಮಾಡಿರಿ.
 • ಒಣಗಿದ ಅರಶಿನ ಕಾಂಡದ ಧೂಮವನ್ನು ತೊಗೋಳ್ಳಿ. ಇದು ಕಟ್ಟಿದ ಮೂಗು ಹಾಗೂ ನೆಗಡಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 • ಪ್ರಾಣಾಯಾಮವನ್ನು ದಿನಾಲು ರೂಢಿಸಿಕೊಂಡರೆ ನೆಗಡಿ ನಿಮ್ಮ ಹತ್ತಿರ ಸುಳಿಯುವುದಿಲ್ಲ. ಭ್ರಾಮರಿ, ಭಸ್ತ್ರಿಕಾ, ಅನುಲೋಮ ವಿಲೋಮ ಪ್ರಾಣಾಯಾಮ, ಕಪಾಲಭಾತಿ ಮಾಡಿದರೆ ಪ್ರಯೋಜನಕಾರಿ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
 • ದಿನಾಲು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಎರಡೆರಡು ಹನಿ ತುಪ್ಪವನ್ನು ಮೂಗಿಗೆ ಹಾಕುವುದರಿಂದ ನೆಗಡಿಯನ್ನು ಗುಣಪಡಿಸುವ ಕೊಳ್ಳಬಹುದು.
 • ಬಿಸಿನೀರಿನ ಸೇವನೆ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣಗಿದ ಶುಂಠಿಚೂರ್ಣ ಕಾಲು ಚಮಚ ಜೇನುತುಪ್ಪದ ಜೊತೆ ಸೇವಿಸಿದರೆ ಶೀತ ಕಡಿಮೆಯಾಗುತ್ತದೆ.
 • ಅಶ್ವಗಂಧ ಚೂರ್ಣ ಅರ್ಧ ಚಮಚ ಜೇನುತುಪ್ಪದ ಜತೆ ಸೇವಿಸಿರಿ.
 • ಅಮೃತಬಳ್ಳಿಯ ಕಷಾಯ ಕೂಡ ಲಾಭಕಾರಿ.
 • ಎರಡು ಚಮಚ ದಶಮೂಲ ಕ್ವಾಥ ಎರಡು ಚಮಚ ನೀರು ಬೆರೆಸಿ ಸೇವಿಸಿರಿ.
 • ಒಂದು ಲೋಟ ನೀರಿಗೆ ಕಾಲು ಚಮಚ ಅರಶಿನ ಪುಡಿ, ಅರ್ಧ ಚಮಚ ಕರಿಮೆಣಸಿನ ಪುಡಿ, ಐದು ತುಳಸಿ ಎಲೆಗಳು, ಸ್ವಲ್ಪ ಬೆಲ್ಲ ಹಾಕಿ ಕಾಲು ಗ್ಲಾಸ್ ಬರುವವರೆಗೆ ಕುದಿಸಿ ನಂತರ ಸೋಸಿ ಕಷಾಯವನ್ನು ದಿನಕ್ಕೆ ಎರಡು ಸಲ ಸೇವಿಸಿ.
 • ಮನೆಮದ್ದುಗಳಿಂದ ಗುಣವಾಗದೆ ಇದ್ದರೆ ಆಯುರ್ವೇದದಲ್ಲಿ ಅನೇಕ ಪರಿಣಾಮಕಾರಿ ಬೇಗ ಗುಣಪಡಿಸುವ ಔಷಧಗಳಿವೆ. ಆಯುರ್ವೇದ ಔಷಧಗಳಲ್ಲಿ ತ್ರಿಕಟು ಚೂರ್ಣ, ಮಹಾಲಕ್ಷ್ಮಿ ವಿಲಾರಸರಸ, ಶ್ವಾಸಕುಠಾರ ರಸ, ಹರಿದ್ರಾಖಂಡ ಮುಂತಾದವುಗಳನ್ನು ಆಯುರ್ವೇದ ವೈದ್ಯರನ್ನು ಕೇಳಿ ಸೇವಿಸಿ.
ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!