Thursday, August 18, 2022
spot_img
HomeUncategorizedಕಾರ್ಕಳದಲ್ಲಿ 90 % ಲಸಿಕೆ ಕಾರ್ಯ ಪೂರ್ಣ -ಸಚಿವ ಸುನಿಲ್‌ ಕುಮಾರ್‌

ಕಾರ್ಕಳದಲ್ಲಿ 90 % ಲಸಿಕೆ ಕಾರ್ಯ ಪೂರ್ಣ -ಸಚಿವ ಸುನಿಲ್‌ ಕುಮಾರ್‌

ಡಾ. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ ಜಿಲ್ಲೆಗೆ ಬೃಹತ್‌ ಕೊಡುಗೆ

ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಶೇ. 90 ಲಸಿಕೆ ಕಾರ್ಯ ಪೂರ್ಣಗೊಂಡಿದೆ. ಕೊರೊನಾ ಎರಡನೆ ಅಲೆಯಲ್ಲಿ 10,594 ಮಂದಿ ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ಅವರು ಸೆ. 24ರಂದು ಕಾರ್ಕಳ ಸಾರ್ವಜನಿಕ ಆಸ್ಪತ್ರೆಯ ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟಿಸಿ ಬಳಿಕ ಮಾತನಾಡಿದರು.
ಕಾರ್ಕಳದಲ್ಲಿ ಆಮ್ಲಜನಕ ಕೊರತೆ ಉಂಟಾಗದಂತೆ ಬಹಳಷ್ಟು ಮುಂಜಾಗ್ರತೆ ವಹಿಸಲಾಗಿತ್ತು. ಡಾ. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಗೇರು ಉತ್ಪಾದಕರ ಸಂಘ, ರಾಜಾಪುರ ಸಾರಸ್ವತ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ, ಬೋಳ ದಾಮೋದರ್‌ ಕಾಮತ್‌, ಅನಿವಾಸಿ ಭಾರತೀಯ ನಿಸಾರ್‌ ಅಹಮ್ಮದ್‌ ಸಹಕಾರದೊಂದಿಗೆ 75 ಲಕ್ಷ ರೂ. ವೆಚ್ಚದಲ್ಲಿ ಆಕ್ಸಿಜನ್‌ ಘಟಕ ನಿರ್ಮಾಣವಾಗಿದೆ. ಸರಕಾರಿ ಕೆಲಸದಲ್ಲಿ ಸಾರ್ವಜನಿಕ ಸಹಭಾಗಿತ್ವವಿದ್ದಲ್ಲಿ ಮಾತ್ರ ಉತ್ತಮ ಕಾರ್ಯ ಮಾಡಲು ಸಾಧ್ಯ. ಜಿಲ್ಲೆಗೆ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಕೊಡುಗೆ ಅಪಾರ. ವರ್ಷಕ್ಕೆ ಸುಮಾರು 5 ಕೋಟಿ ರೂ. ನಷ್ಟು ಕೊಡುಗೆ ಜಿ. ಶಂಕರ್‌ ನೀಡುತ್ತಿರುವುದು ಶ್ಲಾಘನೀಯವೆಂದರು.

ಕೋವಿಡ್‌ 19 ಕಾಲದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಸಹಕರಿಸಿದ ಸಂಘ -ಸಂಸ್ಥೆ, ದಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಡಾ. ಜಿ. ಶಂಕರ್‌, ನಿಸಾರ್‌ ಅಹಮ್ಮದ್‌ ಕೆ.ಎಸ್‌., ಕ್ಯಾಂಪ್ಕೋ, ಕೆನರಾ ಬ್ಯಾಂಕ್‌, ಸೆಂಟರ್‌ ಫಾರ್‌ ವೈಲ್ಡ್‌ ಲೈಫ್‌, ರಾಜಾಪುರ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ,‌ ಜೈನ ಧರ್ಮ ಜೀರ್ಣೋದ್ಧಾರಕ ಸಂಘ ಕಾರ್ಕಳ, ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘ, ಮರದ ಮಿಲ್‌ ಮಾಲಕರ ಸಂಘ, ಸ್ಪಂದನಾ ಆಸ್ಪತ್ರೆ, ಬೋಳ ದಾಮೋದರ ಕಾಮತ್‌, ಆನಂದ ಶೆಟ್ಟಿ, ಡಿ.ಆರ್‌. ರಾಜು, ಗಣಪತಿ ಹೆಗ್ಡೆ, ರವೀಂದ್ರ ವಿವಿ‍ದ್ಧೋದ್ದೇಶ ಸಹಕಾರಿ ಸಂಘ, ಲ್ಯಾಂಪ್ಸ್‌ ವಿವಿದ್ಧೋದ್ದೇಶ ಸಹಕಾರಿ ಬ್ಯಾಂಕ್‌, ಅಂಗನವಾಡಿ ಕಾರ್ಯಕರ್ತರ ಸಂಘ, ಬಾರ್‌ ಅಸೊಸಿಯೇಷನ್‌, ಕುಕ್ಕುಂದೂರು ಫ್ರೆಂಡ್ಸ್‌, ಸೇವಾ ಭಾರತಿ, ಸ್ವಚ್ಛ ಕಾರ್ಕಳ ಬ್ರಿಗೇಡ್‌, ವಿನಾಯಕ ಫ್ರೆಂಡ್ಸ್‌, ಕಾರ್ಕಳ ಜೈನ್‌ ಬ್ರಿಗೇಡ್‌, ಶಿವಭಕ್ತ ಭಜನಾ ಮಂಡಳಿ,

ಪುರಸಭೆ ಅಧ್ಯಕ್ಷೆ ಸುಮಾ ಕೇಶವ್‌, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ್, ಪುರಸಭಾ ಉಪಾ‍‍ಧ್ಯಕ್ಷೆ ಪಲ್ಲವಿ ಪ್ರವೀಣ್, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಶಶಾಂಕ್‌ ಸ್ವಾಗತಿಸಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷಕ ಗಣೇಶ್‌ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿ, ಡಾ. ಮಾನಸ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!