Saturday, October 16, 2021
spot_img
HomeUncategorizedಕಾರ್ಕಳ : ಗೋಕಳ್ಳರ ಬಂಧನ

ಕಾರ್ಕಳ : ಗೋಕಳ್ಳರ ಬಂಧನ

ಕಾರ್ಕಳ : ಶಿರ್ಲಾಲು, ಕೆರ್ವಾಶೆ, ಅಜೆಕಾರು ಪರಿಸರದ ಮನೆಗಳ ಹಟ್ಟಿಯಿಂದ ಗೋ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದಿರೆಯ ಮೂವರನ್ನು ಸೆ. 23ರಂದು ಪೊಲೀಸರು ವಶಕ್ಕೆ ಪಡೆದಿರುತ್ತಾರೆ. ಮೂಡಬಿದ್ರಿ ಗಂಟಾಲ್‌ಕಟ್ಟೆ ಪರಿಸರದ ಝಬೀರ್, ಸಲೀಮ್ ಹಾಗೂ ಹನೀಫ್‌ ಯಾನೆ ಇಚ್ಚನನ್ನು ಬಂಧಿಸಿ, ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನಿರಂತರವಾಗಿ ಗೋಕಳ್ಳತನ ಮಾಡುವ ಮೂಲಕ ಪೊಲೀಸರಿಗೆ ಸವಾಲಾಗಿದ್ದ ಮತ್ತು ಊರಿಗೆ ಕಂಟಕರಾಗಿದ್ದ ಗೋ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್‌, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌ ಮಾರ್ಗದರ್ಶನದಲ್ಲಿ ಅಜೆಕಾರು ಠಾಣೆ ಎಸ್‌ಐ ಸುದರ್ಶನ್‌, ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ನಗರ ಠಾಣೆ ಎಸ್‌ಐ ಮಧು ಬಿ.ಇ. ಮತ್ತವರ ತಂಡ ಗೋಕಳ್ಳರ ಪತ್ತೆಗಾಗಿ ಹಗಲಿರುಳು ಶ್ರಮಿಸಿದ್ದರು. ಗೋ ಕಳ್ಳರ ಪತ್ತೆಯಾಗುವ ಮೂಲಕ ಇದೀಗ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!