ಕಾರ್ಕಳ : ಅನ್ಯಕೋಮಿನ ಯುವತಿಯೊರ್ವಳಿಗೆ ಬಂಗ್ಲೆಗುಡ್ಡೆ ಪರಿಸರದಲ್ಲಿ ವಾಸವಾಗಿರುವ ಯುವಕ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರವೆಸಗಿರುವ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ನಯಾಝ್ ಮೂಲತಃ ಶಿವಮೋಗ್ಗದವನಾಗಿದ್ದು ಕಳೆದ 12 ವರ್ಷಗಳಿಂದ ಬಂಗ್ಲೆಗುಡ್ಡೆಯಲ್ಲಿ ನೆಲೆಸಿದ್ದು ಕಾರ್ಕಳ ತಾಲೂಕಿನ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿರುತ್ತಾನೆ. ಮದುವೆಯಾಗಿದ್ದ ಈತ ಎರಡು ವರ್ಷದ ಹಿಂದೆ ಅಂದರೆ ಆಕೆ ಅಪ್ರಾಪ್ತಳಾಗಿರುವಾಗಲೇ ಪುಸಲಾಯಿಸಿ ಲೈಂಗಿಕವಾಗಿ ಬಳಕೆ ಮಾಡಿಕೊಂಡಿರುತ್ತಾನೆ. ನಿನ್ನೆ ದಿನ ಸಂತ್ರಸ್ತೆಯನ್ನು ಬೈಕ್ನಲ್ಲಿ ಪತ್ತೊಂಜಿಕಟ್ಟೆಗೆ ಕರೆದುಕೊಂಡು ಹೋಗಿ ಕೈಯಿಂದ ಹಲ್ಲೆ ನಡೆಸಿ ಆಕೆಯ ಮೊಬೈಲನ್ನು ಕಿತ್ತುಕೊಂಡು ಹೋಗಿರುತ್ತಾನೆ. ಈತನ ವಿರುದ್ಧ ಸುಲಿಗೆ, ಅತ್ಯಾಚಾರ, ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on