Tuesday, December 7, 2021
spot_img
HomeUncategorizedಭುವನೇಂದ್ರ ಕಾಲೇಜು ರಸ್ತೆಯ ಕಂಬ ದುರಸ್ತಿ

ಭುವನೇಂದ್ರ ಕಾಲೇಜು ರಸ್ತೆಯ ಕಂಬ ದುರಸ್ತಿ

ನ್ಯೂಸ್ ಕಾರ್ಕಳ ವರದಿಗೆ ಸ್ಪಂದಿಸಿದ ಮೆಸ್ಕಾಂ

ಕಾರ್ಕಳ : ಕಾರ್ಕಳ ಭುವನೇಂದ್ರ ಕಾಲೇಜು ರಸ್ತೆ ಬದಿಯಲ್ಲಿ ವಿದ್ಯುತ್‌ ಕಂಬವೊಂದು ವಾಲಿದ್ದು ನೆಲಕ್ಕಪ್ಪಳಿಸುವ ಭೀತಿ ಎದುರಾಗಿರುವ ಕುರಿತು ಸೆ. 22ರಂದು ನ್ಯೂಸ್‌ ಕಾರ್ಕಳ ವರದಿ ಮಾಡಿತ್ತು. ವರದಿಗೆ ತಕ್ಷಣವೇ ಸ್ಪಂದಿಸಿರುವ ಮೆಸ್ಕಾಂ ಇಲಾಖೆಯವರು ಸೆ. 23ರಂದು ಅಪಾಯಕಾರಿ ಸ್ಥಿತಿಯಲ್ಲಿದ್ದ ವಿದ್ಯುತ್‌ ಕಂಬವನ್ನು ಸರಿಪಡಿಸಿದರು.

ಭುವನೇಂದ್ರ ಶಾಲಾ ವಿದ್ಯಾರ್ಥಿಗಳು ದಿನಂಪ್ರತಿ ಇದೇ ರಸ್ತೆಯಾಗಿ ನಡೆದುಕೊಂಡು ಹೋಗುತ್ತಿದ್ದು ಒಂದು ವೇಳೆ ಕಂಬ ಉರುಳಿದಲ್ಲಿ ಭಾರಿ ಅನಾಹುತವೇ ಸಂಭವಿಸುವ ಸಾಧ್ಯತೆಯಿದೆ ಎಂದು ನ್ಯೂಸ್‌ ಕಾರ್ಕಳ ವರದಿಯಲ್ಲಿ ಉಲ್ಲೇಖಿಸಿತ್ತು. ಕಳೆದ ಒಂದು ವರ್ಷದಿಂದ ಅಪಾಯಕಾರಿ ಸ್ಥಿತಿಯಲ್ಲಿದ್ದ ಕಂಬವನ್ನು ದುರಸ್ತಿ ಮಾಡುವ ಮೂಲಕ ಇದೀಗ ಸಾರ್ವಜನಿಕರ ಆತಂಕವನ್ನು ದೂರ ಮಾಡಿದಂತಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!