Sunday, October 24, 2021
spot_img
Homeರಾಜ್ಯ2022, ಜನವರಿ 26 ರಂದು 'ಗ್ರಾಮ ಸೇವಾ ಯೋಜನೆ'ಗೆ ಚಾಲನೆ: ಬಸವರಾಜ ಬೊಮ್ಮಾಯಿ

2022, ಜನವರಿ 26 ರಂದು ‘ಗ್ರಾಮ ಸೇವಾ ಯೋಜನೆ’ಗೆ ಚಾಲನೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಎಲ್ಲಾ ನಾಗರಿಕ ಸೇವೆಗಳು ಆನ್ ಲೈನ್ ಮೂಲಕ ಜನರಿಗೆ ಲಭ್ಯವಾಗಬೇಕು. ತಾಂತ್ರಿಕ ಮಟ್ಟದಲ್ಲಿ ಜನರಿಗೆ ಸೇವೆಗಳನ್ನು ನೀಡಲು ಕ್ರಮ ಕೈಗೊಳ್ಳುತ್ತೇವೆ. ಇದರಿಂದ ಗ್ರಾಮ ಪಂಚಾಯತ್, ತಹಶಿಲ್ದಾರ್ ಕಚೇರಿಗಳಿಗೆ ಜನರು ಹೋಗಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಪ್ರಯಾಸಪಡುವುದು ತಪ್ಪುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ “ಅಮೃತ ಗ್ರಾಮ ಪಂಚಾಯಿತಿ ಯೋಜನೆ”ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜನರ ಪಿಂಚಣಿ ಯೋಜನೆ, ಸೇವೆಗಳು, ರೇಷನ್, ಸಂಧ್ಯಾ ಸುರಕ್ಷ, ಅಂಗವಿಕಲರ ಮಾಸಾಶನ ಹೀಗೆ ಎಲ್ಲಾ ಯೋಜನೆಗಳು ಗ್ರಾಮಪಂಚಾಯತ್ ಮಟ್ಟದಲ್ಲಿ ಸಿಗಬೇಕು. ಅದು ಗ್ರಾಮಸೇವೆಯಾಗಿ ಬದಲಾಗಬೇಕು. ಗ್ರಾಮಸೇವಕರಿಗೆ ತರಬೇತಿಯನ್ನು ನೀಡಿ ಎಲ್ಲಾ ಸೇವೆಗಳು ಮನೆಮನೆಗೆ ತಲುಪುವ ಕೆಲಸ ಆಗಬೇಕು ಎಂದು ಹೇಳಿದರು.

ಗ್ರಾಮ ಪಂಚಾಯತಿ ಮುಖಾಂತರ ಸರ್ಕಾರದ ಸೇವೆಗಳು ಜನರ ಮನೆಬಾಗಿಲಿಗೆ ಸಿಗುವಂತೆ ಮಾಡುವ ‘ಗ್ರಾಮ ಸೇವಾ ಯೋಜನೆ’ಗೆ 2022ರ ಜನವರಿ 26 ರಂದು ಚಾಲನೆ ನೀಡಲಾಗುವುದು. ಆರಂಭದಲ್ಲಿ 5 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದ್ದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ವಿಸ್ತರಿಸಲಾಗುವುದು ಎಂದು ಸಿಎಂ ಪ್ರಕಟಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!