Saturday, October 16, 2021
spot_img
Homeಸ್ಥಳೀಯ ಸುದ್ದಿಮರ್ಣೆ ಗ್ರಾಮ ಪಂಚಾಯತ್ ಪ್ರಥಮ ಹಂತದ ಗ್ರಾಮ ಸಭೆ

ಮರ್ಣೆ ಗ್ರಾಮ ಪಂಚಾಯತ್ ಪ್ರಥಮ ಹಂತದ ಗ್ರಾಮ ಸಭೆ

ಕಾರ್ಕಳ : ಮರ್ಣೆ ಗ್ರಾಮ ಪಂಚಾಯತ್‍ನ 2021-22ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಅಜೆಕಾರು ರಾಮ ಮಂದಿರದಲ್ಲಿ ಸೆ.21ರಂದು ನಡೆಯಿತು. ಇತ್ತೀಚಿನ ದಿನಗಳಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಹಟ್ಟಿಗೆ ನುಗ್ಗಿ ದನಗಳನ್ನು ಕಳ್ಳತನ ಮಾಡಲಾಗುತ್ತಿದೆ. ಆದರೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತಾಳಿದೆ. ಗೋ ಕಳ್ಳರನ್ನು ಮಟ್ಟಹಾಕುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಮಾತ್ರವಲ್ಲದೇ ಕೆಲ ಪೊಲೀಸರೂ ಗೋಕಳ್ಳತನಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗೋ ಕಳ್ಳತನ ಬಗ್ಗೆ ಕಠಿನ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಾದ ನಂದಕುಮಾರ್ ಹೆಗ್ಡೆ, ಶ್ರೀನಿವಾಸ್ ಭಟ್, ಜಲಜ ಶೆಟ್ಟಿ, ಕೃಷ್ಣ ನಾಯ್ಕ್, ಪ್ರಶಾಂತ್ ಶೆಟ್ಟಿ ಕುಂಠಿನಿ, ಅಮೃತ್ ಶೆಟ್ಟಿ ಆಗ್ರಹಿಸಿದರು.
ಪೊಲೀಸ್ ಅಧಿಕಾರಿ ಮಾತನಾಡಿ, ದನ ಕಳ್ಳತನ ತಡೆಯುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ, ಈಗಾಗಲೇ ತಪಾಸಣೆ ಬಿಗಿಗೊಳಿಸಲಾಗಿದೆ ಎಂದರು. ಪಂಚಾಯತ್ ಅಧ್ಯಕ್ಷೆ ಜ್ಯೋತಿ ಪೂಜಾರಿ ಮಾತನಾಡಿ, ಒಂದು ತಿಂಗಳ ಒಳಗೆ ಹೈನುಗಾರರ ಹಾಗೂ ಗ್ರಾಮಸ್ಥರ ವಿಶೇಷ ಸಭೆ ಕರೆದು ಪೊಲೀಸ್ ಉನ್ನತ ಅಧಿಕಾರಿಗಳನ್ನು ಸಭೆಗೆ ಕರೆಯಲಾಗುವುದು ಎಂದು ಹೇಳಿದರು.
ಮೆಸ್ಕಾಂ ಉಪವಿಭಾಗ ವಿಳಂಬಕ್ಕೆ ಗ್ರಾಮಸ್ಥರಾದ ಹರಿಶ್ಚಂದ್ರ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು. ಪಶು ವೈದ್ಯರ ನೇಮಕಕ್ಕೆ ಮನವಿ, ಅಪಾಯಕಾರಿ ಮರ ತೆರವಿಗೆ ಮನವಿ, ಹುಚ್ಚುನಾಯಿ ಹಾವಳಿ ತಡೆಗೆ ಆಗ್ರಹ ಕೇಳಿಬಂತು.
ಜಲಜೀವನ್ ಕಾಮಗಾರಿ ಅಸಮರ್ಪಕವಾಗಿ ನಡೆದಿದ್ದು ಈ ಬಗ್ಗೆ ಪಂಚಾಯತ್ ಆಡಳಿತ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥ ಕೃಷ್ಣ ನಾಯ್ಕ್ ಹೇಳಿದರು. ಆಶ್ರಯ ನಗರದಲ್ಲಿ ರಸ್ತೆ ಸಮಸ್ಯೆ, ಸ್ಮಶಾನ ಸಮಸ್ಯೆ, ಎಣ್ಣೆಹೊಳೆಯಲ್ಲಿ ಟಿ.ಸಿ ಅಳವಡಿಕೆ, ಸರಕಾರಿ ಶಾಲೆಗೆ ವಿಪರೀತ ವಿದ್ಯುತ್ ಬಿಲ್ ಮೊದಲಾದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಭೆಯ ಗಮನ ಸೆಳೆದರು. ಪಂಚಾಯತ್ ಅಧ್ಯಕ್ಷೆ ಜ್ಯೋತಿ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಟಿ.ಭಾಸ್ಕರ್ ಭಾಗವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್, ಉಪಾಧ್ಯಕ್ಷ ಕುರುಂಬಿಲ, ಪಂಚಾಯತ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲೆಕ್ಕ ಸಹಾಯಕರಾದ ಶಕುಂತಳ ವರದಿ ವಾಚಿಸಿದರು. ಪಂಚಾಯತ್ ಸದಸ್ಯ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!