Wednesday, January 26, 2022
spot_img
Homeಸ್ಥಳೀಯ ಸುದ್ದಿಕುಕ್ಕುಂದೂರು : ಕಾಣೆಯಾದ ಬಾಲಕ ಮುಂಬೈಯಲ್ಲಿ ಪತ್ತೆ

ಕುಕ್ಕುಂದೂರು : ಕಾಣೆಯಾದ ಬಾಲಕ ಮುಂಬೈಯಲ್ಲಿ ಪತ್ತೆ

ಕಾರ್ಕಳ : ಇದೇ ತಿಂಗಳ 16ರಂದು ಕಾರ್ಕಳ ಕುಕ್ಕಂದೂರು ಗ್ರಾಮದ ನಕ್ರೆ ಎಂಬಲ್ಲಿಂದ ನಾಪತ್ತೆಯಾಗಿದ್ದ ಬಾಲಕ ಮುಂಬೈಯಲ್ಲಿ ಪತ್ತೆಯಾಗಿದ್ದಾನೆ. ಕಾಲೇಜಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವನು ಕಾಲೇಜಿಗೆ ಹೋಗದೆ, ಮನೆಗೂ ಬಾರದೆ ಕಾಣೆಯಾಗಿರುವ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕ ಮುಂಬೈ ಚೆಂಬೂರಿನಲ್ಲಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆತನನ್ನು ಪತ್ತೆ ಮಾಡಿ ಹೆತ್ತವರ ವಶಕ್ಕೆ ಒಪ್ಪಿಸಿರುತ್ತಾರೆ. ಕಾರ್ಕಳ ನಗರ ಠಾಣೆ ಎಸ್ಐ ಮಧು ಬಿ.ಇ., ದಾಮೋದರ್, ಎಎಸ್ಐ ರಾಜೇಶ್, ಘನಶ್ಯಾಮ್ ಮುಂಬೈ ತೆರಳಿದ್ದು, ಬಾಲಕನನ್ನು ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!