Tuesday, December 7, 2021
spot_img
Homeಸ್ಥಳೀಯ ಸುದ್ದಿಕಾರ್ಕಳ : ಭುವನೇಂದ್ರ ಕಾಲೇಜು ರಸ್ತೆಯಲ್ಲಿ ನೆಲಕ್ಕಪ್ಪಳಿಸುವ ಭೀತಿಯಲ್ಲಿ ವಿದ್ಯುತ್ ಕಂಬ

ಕಾರ್ಕಳ : ಭುವನೇಂದ್ರ ಕಾಲೇಜು ರಸ್ತೆಯಲ್ಲಿ ನೆಲಕ್ಕಪ್ಪಳಿಸುವ ಭೀತಿಯಲ್ಲಿ ವಿದ್ಯುತ್ ಕಂಬ

ವರದಿ : ಅರುಣ್‌ ಮಾಂಜ

ಕಾರ್ಕಳ : ಕಾರ್ಕಳ ಭುವನೇಂದ್ರ ಕಾಲೇಜು ರಸ್ತೆ ಬದಿಯಲ್ಲಿ ವಿದ್ಯುತ್‌ ಕಂಬವೊಂದು ವಾಲಿದ್ದು ನೆಲಕ್ಕಪ್ಪಳಿಸುವ ಭೀತಿ ಎದುರಾಗಿದೆ. ಪುರಸಭಾ ವ್ಯಾಪ್ತಿಯ ವಾರ್ಡ್ ನಂ. 11ರಲ್ಲಿ ಕಂಡುಬರುವ ಈ ವಿದ್ಯುತ್‌ ಕಂಬ ಅಪಾಯಕಾರಿ ಸ್ಥಿತಿಯಲ್ಲಿದೆ. ಭುವನೇಂದ್ರ ಶಾಲಾ ವಿದ್ಯಾರ್ಥಿಗಳು ದಿನಂಪ್ರತಿ ಇದೇ ರಸ್ತೆಯಾಗಿ ನಡೆದುಕೊಂಡು ಹೋಗುತ್ತಿದ್ದು ಒಂದು ವೇಳೆ ಕಂಬ ಉರುಳಿದಲ್ಲಿ ಭಾರಿ ಅನಾಹುತವೇ ಸಂಭವಿಸುವ ಸಾಧ್ಯತೆಯಿದೆ. ಹಳೆಯ ಹಲವು ವಿದ್ಯುತ್‌ ತಂತಿಗಳು ಹಾದುಹೋಗಿದ್ದು, ತಂತಿ ತುಂಡಾಗುವ ಭೀತಿಯೂ ಎದುರಾಗಿದೆ.

ಅಪಾಯ ಸಂಭವಿಸುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಿ

ಸದಾ ಜನನಿಬಿಡ ಪ್ರದೇಶವಾದ ಈ ರಸ್ತೆಯಲ್ಲಿ ಸಾರ್ವಜನಿಕರ ಓಡಾಟವು ಅಧಿಕವಾಗಿದೆ. ವಾಲಿರುವ ಕಂಬ ಯಾವಾಗ ನೆಲಕ್ಕಪ್ಪಳಿಸುವುದೋ ಎಂಬ ಆತಂಕವಿದೆ. ಹೀಗಾಗಿ ಅನಾಹುತ ಸಂಭವಿಸುವುಕ್ಕಿಂತ ಮುಂಚೆಯೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸುವುದು ಅತಿ ಅಗತ್ಯ.

ಕಂಬ ವಾಲಿರುವ ಕುರಿತು ಹಲವು ಬಾರಿ ಮೆಸ್ಕಾಂ ಇಲಾಖೆಗೆ ತಿಳಿಸಲಾಗಿದೆ. ಅನಾಹುತ ಸಂಭವಿಸುವ ಮುಂಚೆ ಮೆಸ್ಕಾಂ ಇಲಾಖೆ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ.

ಹರೀಶ್‌ ಕುಮಾರ್‌
ಪುರಸಭಾ ಸದಸ್ಯರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!