Wednesday, January 26, 2022
spot_img
Homeರಾಜ್ಯಬೆಲೆ ಏರಿಕೆಗೆ ಸರ್ಕಾರವನ್ನು ಬೊಟ್ಟು ಮಾಡಿ ತೋರಿಸಿ ದೂಷಿಸುವುದು ಸಮಂಜಸವಲ್ಲ: ಸಿಎಂ ಬೊಮ್ಮಾಯಿ

ಬೆಲೆ ಏರಿಕೆಗೆ ಸರ್ಕಾರವನ್ನು ಬೊಟ್ಟು ಮಾಡಿ ತೋರಿಸಿ ದೂಷಿಸುವುದು ಸಮಂಜಸವಲ್ಲ: ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಲೆ ಏರಿಕೆ ಎಂಬುದು ನಿರಂತರ ಪ್ರಕ್ರಿಯೆ. ಇದಕ್ಕೆ ಯಾವುದೇ ಸರ್ಕಾರವನ್ನು ನಿರ್ದಿಷ್ಠವಾಗಿ ಬೊಟ್ಟು ಮಾಡಿ ತೋರಿಸಿ ದೂಷಣೆ ಮಾಡುವುದು ಸಮಂಜಸವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆಯಲ್ಲಿಂದು ನಿಯಮ 69ರ ಅಡಿ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಅವರು, ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಸಾರಾಸಗಟಾಗಿ ಅಂಕಿ-ಅಂಶಗಳ ಸಮೇತ ಸದನದ ಮುಂದಿಟ್ಟರು. ಈ ಹಂತದಲ್ಲಿ ಆಡಳಿತರೂಢ ಬಿಜೆಪಿ ಪ್ರತಿಪಕ್ಷವಾದ ಕಾಂಗ್ರೆಸ್ ಸದಸ್ಯರ ನಡುವೆ ಬಿಜೆಪಿ ಲೂಟ್-ಕಾಂಗ್ರೆಸ್ ಲೂಟ್, ಬಿಜೆಪಿಗೆ ದಿಕ್ಕಾರ , ಕಾಂಗ್ರೆಸ್ ಗೆ ದಿಕ್ಕಾರದ ಘೋಷಣೆಗಳು ಪರಸ್ಪರರ ವಿರುದ್ಧ ಸದನದಲ್ಲಿ ಮೊಳಗಿದವು.

1973ರಿಂದ 79ರವೆಗೆ ಪೆಟ್ರೋಲ್ ಬೆಲೆ ಮೂರು ರೂ. ಹೆಚ್ಚಿಗಾಯಿತು. 79 ರಿಂದ 86ರವರೆಗೆ 3 ರೂ.ನಿಂದ 8 ರೂ.ಯಷ್ಟು ಹೆಚ್ಚಾಯಿತು. 83 ರಿಂದ 93 ರವೆಗೆ 15 ರೂ. ಹೆಚ್ಚಾಯಿತು. 1993ರಿಂದ 2000ವರೆಗೆ 28 ರೂ.ಜಾಸ್ತಿಯಾಯಿತು. 2000 ದಿಂದ 2007ವರೆಗೆ 48 ರೂ.ಯಷ್ಟು ಬೆಲೆ ಹೆಚ್ಚಿತು. ಹೀಗೆ ಎಲ್ಲಾ ಸರ್ಕಾರಗಳ ಅವಧಿಯಲ್ಲಿ ತೈಲ ಬೆಲೆ ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಹಿಂದಿನ ಬೆಲೆ ಏರಿಕೆ ಮಾಡಿದ ಸರ್ಕಾರಗಳನ್ನು ಏನೆಂದು ಕರೆಯಬೇಕು? ಕ್ರಿಮಿನಲ್ ಮತ್ತು ಲೂಟ್ ಸರ್ಕಾರಗಳ ಪಟ್ಟಿಗೆ ಹಿಂದಿನ ಸರ್ಕಾರಗಳನ್ನು ಸೇರಿಸಿಕೊಳ್ಳಬೇಕಲ್ಲವೇ ಎಂದಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಲೂಟ್ , ಮೋದಿ ಸರ್ಕಾರ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆಕ್ರೋಶಭರಿತರಾಗಿ ಹೇಳಿದರು.

ಕೆಲ ಕಾಲ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆಯಿತು. ದೇಶದಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಕೋವಿಡ್ ದಾಳಿ ಮಾಡಿತು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 80 ಕೋಟಿ ಜನರಿಗೆ ಉಚಿತ ಪಡಿತರ ಧಾನ್ಯ ನೀಡುವ ಮೂಲಕ ದೇಶದಲ್ಲಿ ಯಾರೂ ಹಸಿವಿನಿಂದ ಸಾಯದಂತೆ ನೋಡಿಕೊಂಡಿದ್ದು ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಎಂದು ಬೆಲೆ ಏರಿಕೆಯನ್ನು ಮುಖ್ಯಮಂತ್ರಿಗಳು ಸಮರ್ಥಿಸಿದರು.
ಬೆರೆ ಯಾವುದೇ ಸಂಪನ್ಮೂಲ ಇಲ್ಲದೇ ಇದ್ದಾಗ ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯಿಂದ ಬಡವರು, ಕಾರ್ಮಿಕರು ಮತ್ತು ಕೆಲ ಮಧ್ಯಮವರ್ಗದ ಜನರು ಹಸಿವಿನಿಂದ ಬಳಲದಂತೆ ನೋಡಿಕೊಂಡರು ಎಂದು ಹೇಳಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!