Tuesday, December 7, 2021
spot_img
Homeಸ್ಥಳೀಯ ಸುದ್ದಿಇಸ್ರೇಲ್‌ ಮಾದರಿ ಕೃಷಿಗೆ ಆದ್ಯತೆ -ಶೋಭಾ ಕರಂದ್ಲಾಜೆ

ಇಸ್ರೇಲ್‌ ಮಾದರಿ ಕೃಷಿಗೆ ಆದ್ಯತೆ -ಶೋಭಾ ಕರಂದ್ಲಾಜೆ

ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಮೀಸಲು

ಕಾರ್ಕಳ : ದೇಶದಲ್ಲಿ ಹಸಿರು ಕ್ರಾಂತಿಯ ತರುವಾಯ ಅಧಿಕ ಅಕ್ಕಿ ಮತ್ತು ಗೋಧಿ ಉತ್ಪನ್ನವಾಗುತ್ತಿದ್ದು ದೇಶದ ೧೩೫ ಕೋಟಿ ಜನ ಉಂಡು ತಿಂದೂ ಉಳಿಯುವಷ್ಟು ಆಹಾರ ಧಾನ್ಯ ಬೆಳೆಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಸೆ. 18ರಂದು ಕಾರ್ಕಳ ದಾನಶಾಲೆಯ ಬಾಹುಬಲಿ ಪ್ರವಚನ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ರೈತ ಸಂವಾದ ಕಾರ್ಯಕ್ರಮದಲ್ಲಿ 
ಮಾತನಾಡಿದರು.
ಕೃಷಿಯ ಆರಂಭ ಕಾಲ ಹಾಗೂ ಫಲವತ್ತತೆತೆಯ ಸಮಯ ಒಂದೊಂದು ರಾಜ್ಯಗಳಲ್ಲಿ ಒಂದೊಂದಾಗಿರುವ ಕಾರಣ ಖರೀದಿ ಕೇಂದ್ರ ತೆರೆಯುವಲ್ಲಿ ಕೇಂದ್ರ ಸರ್ಕಾರದ ಪಾತ್ರವೇನೂ ಇರುವುದಿಲ್ಲ. ಅದೆಲ್ಲ ಆಯಾ ರಾಜ್ಯಗಳಿಗೆ ಸೇರಿದ್ದು. ಅಡಿಕೆ ಅಭಿವೃದ್ಧಿ ಮಂಡಳಿ ರಚಿಸುವುದೂ ರಾಜ್ಯಕ್ಕೆ ಸೇರಿದ್ದು ಎಂದರು. 

ಇಸ್ರೇಲ್ ಮಾದರಿ ಕೃಷಿಗೆ ಆದ್ಯತೆ – ಕಡಿಮೆ ಭೂಮಿಯಲ್ಲಿ ಉತ್ತಮ ಕೃಷಿ ಮಾಡಲು ಇಸ್ರೇಲ್ ಮಾದರಿ ಉತ್ತಮವಾಗಿದ್ದು ನಮ್ಮಲ್ಲೂ ಅದನ್ನು ಅನುಸರಿಸಲು ಪ್ರಯತ್ನ ಮಾಡಬೇಕಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನವನ್ನು ತೆರಿಗೆ ಕಟ್ಟುವವವರು ಮತ್ತು ಸರ್ಕಾರಿ ನೌಕರರು ಹೊರತಾಗಿ ಉಳಿದವರು ಪಡೆಯಬಹುದಾಗಿದೆ. ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಕೃಷಿ ಸಾಧಕರಾದ ಶಂಕರ ಕುಂದರ್ ಸೂಡಾ, ಜೆರಾಲ್ಡ್, ಕೇಶವ ಮರಾಠೆ ದುರ್ಗ, ಡಾ.ಪ್ರಭಾಕರ ಜೋಶಿ, ಇರ್ವತ್ತೂರು ಉದಯ ಎಸ್.ಕೋಟ್ಯಾನ್ ಸಚಿವೆಯ ಜೊತೆ ಸಂವಾದ ನಡೆಸಿದರು.

ಕೃಷಿ ಸಾಧಕರಿಗೆ ಸನ್ಮಾನ
ಕೃಷಿ ಸಾಧಕರಾದ ಸುಂದರ ಪೂಜಾರಿ, ಜಗನ್ನಾಥ ಶೆಟ್ಟಿ ಬೋಳ. ಅಮಿತಾ ಹೆಬ್ರಿ, ಸುಕುಮಾರ ಪೊಸ್ರಾಲು ಅವರನ್ನು ಅಭಿನಂದಿಸಲಾಯಿತು.   
ಎಂ.ಕೆ. ವಿಜಯ ಕುಮಾರ್, ಬೋಳ ಪ್ರಭಾಕರ್ ಕಾಮತ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರ್ ನವೀನ್ ಶೆಟ್ಟಿ, ಪ್ರವೀಣ್ ಕುಮಾರ್ ಗುರ್ಮೆ, ರಾಘವೇಂದ್ರ ಉಪ್ಪೂರು, ಜಯರಾಮ ಸಾಲ್ಯಾನ್ ಉಪಸ್ಥಿತರಿದ್ದರು. ರವೀಂದ್ರ ಕುಮಾರ್‌ ಸ್ವಾಗತಿಸಿ, ಸುಮಾ ರವಿಕಾಂತ್‌ ಪ್ರಾರ್ಥಿಸಿದರು. ನವೀನ್‌ ನಾಯಕ್‌ ಕಾರ್ಯಕ್ರಮ ನಿರೂಪಿಸಿ, ಸುಹಾಸ್‌ ಶೆಟ್ಟಿ ಮುಟ್ಲುಪಾಡಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!