Wednesday, January 26, 2022
spot_img
Homeಸ್ಥಳೀಯ ಸುದ್ದಿಪತ್ರಕರ್ತ ಮನೋಹರ್‌ ಪ್ರಸಾದ್‌ ಅವರಿಗೆ ಜ್ಞಾನಸುಧಾ ಸಂಸ್ಥೆ ವತಿಯಿಂದ ಸನ್ಮಾನ

ಪತ್ರಕರ್ತ ಮನೋಹರ್‌ ಪ್ರಸಾದ್‌ ಅವರಿಗೆ ಜ್ಞಾನಸುಧಾ ಸಂಸ್ಥೆ ವತಿಯಿಂದ ಸನ್ಮಾನ

ಕಾರ್ಕಳ : ಕಾರ್ಕಳ ಗಣಿತ ನಗರ ಜ್ಞಾನಸುಧಾ ಸಂಸ್ಥೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಮನೋಹರ್‌ ಪ್ರಸಾದ್‌ ಅವರನ್ನು ಸೆ. 17ರಂದು ಸನ್ಮಾನಿಸಲಾಯಿತು. ಜ್ಞಾನಸುಧಾ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಅವರು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ನಾಡು ಕಂಡ ಶ್ರೇಷ್ಠ ಪತ್ರಕರ್ತರಲ್ಲಿ ಮನೋಹರ್‌ ಪ್ರಸಾದ್‌ ಅವರು ಅಗ್ರಗಣ್ಯರಾಗಿ ಗುರುತಿಸಿಕೊಂಡವರು. ದೇಶ, ವಿದೇಶ ಸುತ್ತಿ ನೂರಾರು ವಿಶೇಷ ವರದಿ, ಸಂದರ್ಶನ, ಸಾವಿರಾರೂ ಕಾರ್ಯಕ್ರಮ ನಿರೂಪಣೆ ಮೂಲಕ ಮನೆಮಾತಾಗಿರುವ ಮನೋಹರ್‌ ಪ್ರಸಾದ್‌ ಅವರು ಕಾರ್ಕಳದವರೆಂಬ ಹೆಮ್ಮೆ ನಮ್ಮದು. ಅಗಾಧ ಅನುಭವ, ನೆನಪಿನ ಶಕ್ತಿ, ಮೃಧು ಮಾತಿನ ಮೂಲಕವೇ ಜನಮನ್ನಣೆ ಗಳಿಸಿರುವ ಮನೋಹರ್‌ ಅವರು ಯುವಕರಿಗೆ ಮಾದರಿಯೆಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮನೋಹರ್‌ ಪ್ರಸಾದ್‌ ಅವರು ಕಾರ್ಕಳ ಸಮೀಪದ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಚೈತನ್ಯದ ಮೂಲಕ ಆದರ್ಶ ಸಮಾಜವನ್ನು ಕಟ್ಟುವಲ್ಲಿ ಡಾ. ಸುಧಾಕರ್‌ ಶೆಟ್ಟಿ ಅವರ ದೂರದರ್ಶಿತ್ವದ ಜ್ಞಾನಸುಧಾ ಸಂಸ್ಥೆಯ ಕೊಡುಗೆ ಅದ್ವಿತೀಯ ಎಂದು ಶ್ಲಾಘಿಸಿದರು.
ಕಾಲೇಜಿನ ಪ್ರಾಂಶುಪಾಲ ದಿನೇಶ್‌ ಎಮ್.‌ ಕೊಡವೂರು, ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ನ್ಯೂಸ್‌ ಕಾರ್ಕಳ ನಿರ್ದೇಶಕ ಪದ್ಮಪ್ರಸಾದ್‌ ಜೈನ್‌, ರಾಮಚಂದ್ರ ಬರೆಪ್ಪಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!