Saturday, October 16, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಸ್ಕರ್ ಅವರಿಗೆ ಶ್ರದ್ಧಾಂಜಲಿ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಸ್ಕರ್ ಅವರಿಗೆ ಶ್ರದ್ಧಾಂಜಲಿ

ಕಾರ್ಕಳ : ಅಜಾತಶತ್ರು, ಹಿರಿಯ ರಾಜಕೀಯ ಧುರೀಣ, ಸರಳ, ಸಜ್ಜನ, ಮಾನವೀಯತೆಯ ದ್ಯೋತಕವಾಗಿದ್ದಂತಹ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಬಾಳು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೂ ಅನುಕರಣೀಯವೆಂದು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಸದಾಶಿವ ದೇವಾಡಿಗ ಅಭಿಪ್ರಾಯಪಟ್ಟರು.
ಅವರು ಸೆ. 17ರಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಆಸ್ಕರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಜಾರ್ಜ್ ಕ್ಯಾಸ್ಟಲಿನೊ, ಸುಧಾಕರ್ ಕೋಟ್ಯಾನ್, ಸುಶಾಂತ್ ಸುಧಾಕರ್, ವಿಜಯಕುಮಾರ್ ಜೈನ್ ಈದು, ಅಶ್ಫಾಕ್ ಅಹ್ಮದ್ ನುಡಿನಮನ ಸಲ್ಲಿಸಿದರು. ಶಿರಿಯಣ್ಣ ಶೆಟ್ಟಿ, ಮಾಲಿನಿ ರೈ, ತಾರಾನಾಥ್‌ ಶೆಟ್ಟಿ ಶ್ರೀಧರ್ ಸನಿಲ್ ಮುಂಡ್ಕೂರು, ಸುರೇಶ್ ಅಚಾರ್ಯ ಈದು, ಜಯರಾಮ ಆಚಾರ್ಯ ನಕ್ರೆ, ಉದಯ ವಿ. ಶೆಟ್ಟಿ ಅಣ್ಣಪ್ಪ ನಕ್ರೆ, ಶುಭದ ರಾವ್, ಪ್ರಕಾಶ್ ಆಚಾರ್ಯ, ಕುಂಟಾಡಿ ವಿನ್ನಿ ಬೊಲ್ಡ್ ಮೆಂಡೊನ್ಸಾ‌, ಮೊಹಮ್ಮದ್ ಅಸ್ಲಾಂ, ವಿವೇಕಾನಂದ ಶೆಣೈ, ಆರೀಫ್ ಕಲ್ಲೋಟ್ಟೆ, ಹಿರಿಯ ಕಾಂಗ್ರೆಸ್ಸಿಗರಾದ ಸಾಣೂರು ಸುಂದರ ಗೌಡ, ಕಾಂತಿ ಶೆಟ್ಟಿ, ಜಯಂತಿ ಈದು ಶಾಂತಿ, ಶೋಭಾಪ್ರಸಾದ್, ರೀನಾ ಟೀಚರ್, ಸುಮನ ನಾಯ್ಕ್, ಅಪರ್ಣ, ಸುನಿಲ್ ಭಂಡಾರಿ, ಸದಾನಂದ ಭಂಡಾರಿ, ಇನಾಸ್ ಲೂಯಿಸ್, ಸತೀಶ್ ಕಾರ್ಕಳ ಉಪಸ್ಥಿತರಿದ್ದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!