Wednesday, January 26, 2022
spot_img
Homeಸ್ಥಳೀಯ ಸುದ್ದಿದೇಗುಲ ನೆಲಸಮ ಸರಕಾರದ ನಡೆ ಖಂಡನೀಯ : ರವೀಂದ್ರ ಶೆಟ್ಟಿ ಬಜಗೋಳಿ

ದೇಗುಲ ನೆಲಸಮ ಸರಕಾರದ ನಡೆ ಖಂಡನೀಯ : ರವೀಂದ್ರ ಶೆಟ್ಟಿ ಬಜಗೋಳಿ

ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ನೂರಾರು ವರ್ಷ ಇತಿಹಾಸವುಳ್ಳ ಹಿಂದೂ ಧಾರ್ಮಿಕ ಕೇಂದ್ರಗಳನ್ನು ನೆಲಸಮ ಮಾಡುತ್ತಿರುವ ರಾಜ್ಯ ಸರಕಾರದ ನಡೆ ಖಂಡನೀಯ. ಹಿಂದೂಗಳ ಮತ್ತು ಹಿಂದೂ ಸಂಸ್ಕೃತಿಯ ರಕ್ಷಣೆಗಾಗಿ ಇರುವ ಪಕ್ಷ ನಮ್ಮದು ಎಂದು ಹಿಂದೂಗಳನ್ನು ನಂಬಿಸಿ ಅಧಿಕಾರಕ್ಕೇರಿದ ಪಕ್ಷ ಇದೀಗ ಮತಾಂಧ ಬಾಬರ್, ಔರಂಗಜೇಬ್, ಘಜ್ನಿ, ಘೋರಿ, ಖಾಸಿಂ, ಟಿಪ್ಪು ನಂತಹ ಕ್ರೂರಿಗಳನ್ನೂ ಮೀರಿಸುವಂತಹ ದುಷ್ಕೃತ್ಯವನ್ನು ನೋಡಿ ಹಿಂದೂ ಸಮಾಜ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಹಿಂದು ಮುಖಂಡ ರವೀಂದ್ರ ಶೆಟ್ಟಿ ಬಜಗೋಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಪ್ರೀ ಕೋರ್ಟ್ ರಾಷ್ಟ್ರೀಯ ಹೈವೇ ಬದಿಯಲ್ಲಿನ ಮದ್ಯದಂಗಡಿ ಮುಚ್ಚಬೇಕು ಎಂಬ ಆದೇಶ ಕೊಟ್ಟ ತತ್ಕ್ಷಣ ಎಲ್ಲಾ ಸರಕಾರಗಳು ಮದ್ಯದಂಗಡಿ ಉಳಿಸಲು ಹೇಗೆ ಚಾಣಾಕ್ಷತನ ಪ್ರದರ್ಶನ ಮಾಡಿದೆ. ಅದೇ ರೀತಿ ಸರಕಾರ ದೇವಾಲಯಗಳ ಉಳಿವಿಗೆ ಅದೇ ರಾಜತಂತ್ರವನ್ನು ಬಳಸಿ ಈ ಕೂಡಲೇ ಹಿಂದೂ ಧಾರ್ಮಿಕ ಕೇಂದ್ರದ ರಕ್ಷಣೆಗೆ ಮುಂದಾಗಬೇಕು. ಎಂದವರು ಆಗ್ರಹ ಪಡಿಸಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!