Tuesday, December 7, 2021
spot_img
Homeಸ್ಥಳೀಯ ಸುದ್ದಿಕಾನೂನು ಕಣಜ - ಕ್ರಿಮಿನಲ್‌ ಪ್ರಕರಣದಲ್ಲಿ ಜಾಮೀನು

ಕಾನೂನು ಕಣಜ – ಕ್ರಿಮಿನಲ್‌ ಪ್ರಕರಣದಲ್ಲಿ ಜಾಮೀನು

ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ಸಂದರ್ಭದಲ್ಲಿ ಆತನನ್ನು ಯಾವ ಕಾರಣಕ್ಕಾಗಿ ಮತ್ತು ಯಾವ ಅಪರಾಧವನ್ನು ಎಸಗಿದ ಆರೋಪದ ಮೇಲೆ ದಸ್ತಗಿರಿ ಮಾಡಲಾಗಿದೆ ಎಂಬ ಬಗ್ಗೆ ವಿವರವನ್ನು ದಸ್ತಗಿರಿ ಮಾಡಿದ ಅಧಿಕಾರಿಯು ಬಂಧನಕ್ಕೆ ಒಳಗಾದ ವ್ಯಕ್ತಿಗೆ ಮತ್ತು ಆತನ ರಕ್ತ ಸಂಬಂಧಿಕರಿಗೆ ಕಾನೂನು ಪ್ರಕಾರ ತಿಳಿಸಬೇಕಾಗುತ್ತದೆ. ಈ ರೀತಿಯಾಗಿ ದಸ್ತಗಿರಿಯಾದ ವ್ಯಕ್ತಿಯು ತಾನು ಆಯ್ಕೆ ಮಾಡುವ ನ್ಯಾಯವಾದಿಯೊಂದಿಗೆ ಸಂಪರ್ಕಿಸಿ ತಾನು ಜಾಮೀನಿನ ಮೇಲೆ ಬಿಡುಗಡೆ ಹೊಂದುವ ಅಥವಾ ಕಾನೂನು ಬದ್ದವಾಗಿ ತನ್ನ ಪ್ರತಿರಕ್ಷೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ.

ಬಂಧನಕ್ಕೆ ಒಳಗಾದ ವ್ಯಕ್ತಿಯನ್ನು ಪೊಲೀಸ್ ಠಾಣೆಯಲ್ಲಿಯೇ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅಧಿಕಾರವನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಹೊಂದಿದ್ದಲ್ಲ್ಲಿ ಆತನನ್ನು ವೈಯುಕ್ತಿಕ (ಸ್ವಂತ) ಜಾಮೀನು/ಮುಚ್ಚಳಿಕೆ ಅಥವಾ ಜಾಮೀನುದಾರರೊಂದಿಗೆ ಜಂಟಿ ಮುಚ್ಚಳಿಕೆ ಆಧಾರದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕಾಗುತ್ತದೆ. ಒಂದು ವೇಳೆ ದಸ್ತಗಿರಿಯಾದ ವ್ಯಕ್ತಿಯನ್ನು ಪೊಲೀಸ್‌ ಹಾಜರುಪಡಿಸುವ ಅವಶ್ಯಕತೆ ಕಂಡುಬಂದಲ್ಲಿ ಸಂಬಂಧಪಟ್ಟ ಪೊಲೀಸ್‌ ಅಥವಾ ಇತರ ಯಾವನೇ ತನಿಖಾಧಿಕಾರಿ ಆತನನ್ನು ದಸ್ತಗಿರಿ ಮಾಡಿದ ಮುಂದಿನ 24 ಗಂಟೆಗಳ ಅವಧಿಯ ಒಳಗಾಗಿ (ದಸ್ತಗಿರಿ ಮಾಡಿದ ಸ್ಥಳದಿಂದ ಸಮ್ಮಂಧಪಟ್ಟ ನ್ಯಾಯಾಧೀಶರಲ್ಲಿಗೆ ಕರೆದುಕೊಂಡು ಹೋಗಲು ಬೇಕಾಗುವ ಪ್ರಯಾಣದ ಅವಧಿಯನ್ನು ಹೊರತುಪಡಿಸಿ) ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಅವಶ್ಯಕವಾಗಿರುತ್ತದೆ. ಬಂಧನದ ವೇಳೆ ಅಥವ ಬಂಧನದಲ್ಲಿರುವ ಸಂದರ್ಭದಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಆತನ ಸಹಾಯಕರು ಬಂಧನಕ್ಕೆ ಒಳಗಾದ ವ್ಯಕ್ತಿಗೆ ಅನಾವಶ್ಯಕವಾಗಿ ಹಲ್ಲೆ, ಹಿಂಸೆ ಅಥವಾ ಕಿರುಕುಳ ನೀಡಿರುವ ವಿಷಯವನ್ನು ಬಂಧನಕ್ಕೆ ಒಳಗಾದ ವ್ಯಕ್ತಿಯು ತನ್ನನ್ನು ನ್ಯಾಯಾಧೀಶರ ಸಮಕ್ಷಮ ಹಾಜರುಪಡಿಸುವ ಸಂದರ್ಭದಲ್ಲಿ, ನ್ಯಾಯಾಧೀಶರಿಗೆ ಬಾಯ್ದೆರೆಯಾಗಿ ಅಥವಾ ಲಿಖಿತವಾಗಿ ತಿಳಿಸಿದ್ದಲ್ಲಿ ನ್ಯಾಯಾಧೀಶರು ತಪ್ಪಿತಸ್ಥ ಅಧಿಕಾರಿಯ ಅಥವಾ ಆತನ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕಾಗುತ್ತದೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!