Sunday, October 24, 2021
spot_img
Homeಅಂಕಣಆರೋಗ್ಯಧಾರ - ಹೃದಯಕ್ಕೆ ಒಳ್ಳೆಯದು ಈ ಅರ್ಜುನ

ಆರೋಗ್ಯಧಾರ – ಹೃದಯಕ್ಕೆ ಒಳ್ಳೆಯದು ಈ ಅರ್ಜುನ

ಹೃದಯಕ್ಕೆ ಅತ್ಯುತ್ತಮವಾದುದು ಅರ್ಜುನ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹೃದಯದ ವಿಕಾರಗಳಿಗೆ ಹಾಗೂ ಶ್ವಾಸಕೋಶದ ಹಲವಾರು ಕಾಯಿಲೆಗಳನ್ನು ತಡೆಯುವ ಶಕ್ತಿ ಇದಕ್ಕಿದೆ. ಇದರ ಗುಣಧರ್ಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಧವಲಾ, ಕಕುಭ, ವೀರವೃಕ್ಷ, ನದಿಸರ್ಜಾ ಇವು ಅರ್ಜುನದ ಪರ್ಯಾಯನಾಮಗಳು.

ಉಪಯೋಗಿಸುವ ಅಂಗ – ತೊಗಟೆ
ಸೈಂಟಿಫಿಕ್ ಹೆಸರು -Terminalia Arjuna
ಇದಕ್ಕೆ ಲಘು ಹಾಗು ರೂಕ್ಷ ಗುಣವಿದೆ. ರುಚಿಯಲ್ಲಿ ಕಷಾಯ ರಸ ಹಾಗೂ ಸ್ವಭಾವದಲ್ಲಿ ಶೀತ. ಇದು ಪಿತ್ತ ಹಾಗೂ ಕಫ ದೋಷವನ್ನು ಕಡಿಮೆಗೊಳಿಸುತ್ತದೆ ಹಾಗೂ ವಾತವನ್ನು ವೃದ್ಧಿಸುತ್ತದೆ.

ಅಭ್ಯಂತರ ಪ್ರಯೋಗಇದರ ಸೇವನೆಯಿಂದ ಆಗುವ ಲಾಭಗಳು

  • ಹೃದಯದ ಕಾಯಿಲೆಗಳಲ್ಲಿ ಇದನ್ನು ಸೇವಿಸಲೇಬೇಕು. ರಕ್ತದೊತ್ತಡ, ಕೊಲೆಸ್ಟ್ರಾಲ್, ಹೃದಯ ಬಡಿತ ಹೆಚ್ಚಾದಾಗ ಇದರ ಉಪಯೋಗ ಉತ್ತಮ. ಹೃದಯದ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ. ಹೃದಯವನ್ನು ಪುಷ್ಟೀಕರಿಸುತ್ತದೆ.
  • ಸಕ್ಕರೆ ಕಾಯಿಲೆ, ಗರ್ಭಾಶಯದ ಸಮಸ್ಯೆ, ಅತ್ಯಧಿಕ ಗರ್ಭಾಶಯದ ರಕ್ತಸ್ರಾವ, ಶ್ವೇತ ಪ್ರದರವನ್ನು ಗುಣಪಡಿಸುತ್ತದೆ.
  • ಬೊಜ್ಜುತನವನ್ನು ಕಡಿಮೆಗೊಳಿಸುತ್ತದೆ.
  • ಜ್ವರದಲ್ಲಿ ಇದರ ಪ್ರಯೋಗ ಪರಿಣಾಮಕಾರಿ. ಜೀರ್ಣಜ್ವರ ಅಂದರೆ ಅನೇಕ ದಿನಗಳಿಂದ ಇರುವಂತಹ ಜ್ವರ ಕಡಿಮೆಗೊಳಿಸಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
  • ಶ್ವಾಸ ಕೋಶದ ತೊಂದರೆಗಳಲ್ಲಿ ವಿಶೇಷವಾಗಿ ಅನೇಕ ದಿನಗಳಿಂದ ಇದ್ದಂತಹ ಕೆಮ್ಮುನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಅರ್ಜುನದ ಚೂರ್ಣವನ್ನು ವಾಸಾ ಸ್ವರಸ, ಜೇನುತುಪ್ಪ ಹಾಗೂ ತುಪ್ಪದ ಜೊತೆ ಸೇವಿಸುವುದರಿಂದ ಲಾಭವಿದೆ.

ಬಾಹ್ಯ ಪ್ರಯೋಗ – ಇದರ ಕಲ್ಕವನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಆಗುವ ಲಾಭಗಳು

  • ಇದು ಕಷಾಯ ರಸದಿಂದ ಕೂಡಿರುವುದರಿಂದ ರಕ್ತ ಸ್ತಂಭನದ ಕೆಲಸ ಮಾಡುತ್ತದೆ ಅಂದರೆ ರಕ್ತಸ್ರಾವವನ್ನು ತಡೆಯುತ್ತದೆ. ಎಲ್ಲಿಯಾದರೂ ರಕ್ತ ಸ್ರಾವವಾಗುತ್ತಿದ್ದರೆ ಅದನ್ನು ಸ್ವಚ್ಛಗೊಳಿಸಿ ಅರ್ಜುನದ ಕಲ್ಕವನ್ನು ಹಚ್ಚಿದರೆ ರಕ್ತಸ್ರಾವ ಕಡಿಮೆಯಾಗುತ್ತದೆ. ವ್ರಣ ರೋಪಣ ಗುಣವಿದೆ ಅಂದರೆ ಗಾಯವನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಉರಿ ಊತದಲ್ಲಿ ಪರಿಣಾಮಕಾರಿ. ತ್ವಚೆಯ ಸಮಸ್ಯೆಗಳಲ್ಲಿ, ತುರಿಕೆ, ತ್ವಚೆಯ ಸೋಂಕು ಇದ್ದಲ್ಲಿ ಇದರ ಕಲ್ಕವನ್ನು ಹಚ್ಚಬಹುದು.

ಹೇಗೆ ಉಪಯೋಗಿಸುವುದು
ಇದರ ಸ್ವರಸ, ಕ್ವಾಥ, ಘೃತ, ಚೂರ್ಣ, ಕ್ಷೀರಪಾಕ ಹೀಗೆ ಅನೇಕ ವಿಧಗಳಲ್ಲಿ ಉಪಯೋಗಿಸುತ್ತಾರೆ. ಅರ್ಜುನವನ್ನು ಬಳಸಿ ಮಾಡಿದಂತಹ ಆಯುರ್ವೇದ ಔಷಧ ಕಕುಭಾದಿ ಚೂರ್ಣ, ಅರ್ಜುನಾರಿಷ್ಟ, ಅರ್ಜುನಾದಿಘೃತ ಮುಂತಾದವುಗಳು.

ಸೇವಿಸುವ ಪ್ರಮಾಣ
• ಚೂರ್ಣ – ಒಂದು ಚಮಚ ಚೂರ್ಣವನ್ನು ಬೆಳಿಗ್ಗೆ ಹಾಗೂ ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.
• ಕ್ವಾಥ – ಒಂದು ಚಮಚ ಚೂರ್ಣವನ್ನು ಇನ್ನೂರು ಎಂಎಲ್ ನೀರಿಗೆ ಹಾಕಿ, ಐವತ್ತು ಎಂಎಲ್ ಬರುವವರೆಗೆ ಕುದಿಸಿ ಅದನ್ನು ಸೋಸಿ ಬೆಲ್ಲವನ್ನು ಸೇರಿಸಿ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಒಳ್ಳೆಯದು.
• ಕ್ಷೀರಪಾಕ – ಐದು ಗ್ರಾಂ ಚೂರ್ಣವನ್ನು ಒಂದು ಲೋಟ ಹಾಲಿಗೆ ಎರಡು ಲೋಟ ನೀರು ಹಾಕಿ ಅರ್ಧ ಪ್ರಮಾಣ ಬರುವವರೆಗೆ ಕುದಿಸಿ. ಇದನ್ನು ಐವತ್ತು ಎಂಎಲ್ ಸೇವಿಸಬಹುದು.
• ಸ್ವರಸ – ಅರ್ಜುನ ರಸವನ್ನು ಹತ್ತರಿಂದ ಇಪ್ಪತ್ತು ಎಂಎಲ್ ಸೇವಿಸಬಹುದು.

ಯಾವುದೇ ಔಷಧವನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!