Wednesday, January 26, 2022
spot_img
Homeಸ್ಥಳೀಯ ಸುದ್ದಿಸರಕಾರ ದೇಗುಲ ಒಡೆಯುವ ಕಾರ್ಯ ನಿಲ್ಲಿಸಲಿ : ಬಿಪಿನ್‌ ಚಂದ್ರ ಪಾಲ್‌

ಸರಕಾರ ದೇಗುಲ ಒಡೆಯುವ ಕಾರ್ಯ ನಿಲ್ಲಿಸಲಿ : ಬಿಪಿನ್‌ ಚಂದ್ರ ಪಾಲ್‌

ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯಿಂದ ದೇಗುಲ ನೆಲಸಮ

ಕಾರ್ಕಳ : ನ್ಯಾಯಾಲಯಗಳ ಆದೇಶ ದುರುಪಯೋಗಪಡಿಸಿಕೊಂಡು ದೇವಸ್ಥಾನಗಳನ್ನು ಒಡೆದು ಹಾಕುತ್ತಿರುವ ಬಿಜೆಪಿಯ ಧರ್ಮ ತಿಳಿಗೇಡಿತನದ ತಪ್ಪನ್ನು ಸ್ಥಳೀಯ ಅಧಿಕಾರಿಗಳ ಮೇಲೆ ಹೊರಿಸುವ ಮೂಲಕ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ತಮ್ಮ ಪಕ್ಷದ ಮಾನ ಉಳಿಸಲು ನೋಡುತ್ತಿರುವುದು ವಿಷಾದನೀಯ. ಅನಿವಾರ್ಯವಾಗಿ ಕರ್ತವ್ಯ ಮೆರೆದ ಅಧಿಕಾರಿಗಳನ್ನು ಅಮಾನತು ಮಾಡುವ ಮೊದಲು ಒಡೆಯಲು ಆದೇಶ ನೀಡಿದ ಸರಕಾರ ಮತ್ತು ಅದರ ಮುಖ್ಯಸ್ಥರು ಹಿಂದೂ ಧರ್ಮದ್ರೋಹದ ಹೊಣೆಹೊತ್ತು ಮೊದಲು ರಾಜೀನಾಮೆ ಕೊಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

2009ರ ಸುಪ್ರಿಂ ಕೋರ್ಟ್ ಆದೇಶವಾಗಲಿ ಆ ನಂತರದ ಹೈಕೋಟ್೯ ಆದೇಶಗಳಾಗಲಿ ಸಾರ್ವಜನಿಕ ಸ್ಥಳಗಳಲ್ಲಿ ಸರಕಾರಗಳ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುವ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಬೇಕೆಂದು ಆದೇಶಿಸಿವೆಯೇ ಹೊರತು ಒಡೆಯ ಬೇಕೆಂದು ಹೇಳಿಲ್ಲ. ತೆರವಿನ ಆದೇಶಕ್ಕೆ ಒಡೆಯುವ ವ್ಯಾಖ್ಯಾನ ನೀಡಿರುವ ಬಿಜೆಪಿಯ ಧರ್ಮರಾಜಕೀಯದ ಹಿಂದೆ ಪುರಾಣವನ್ನು ಇತಿಹಾಸವನ್ನಾಗಿಸುವ ಷಡ್ಯಂತ್ರ ಅಡಗಿದೆ ಎಂದು ಕಾಂಗ್ರೆಸ್‌ ವಕ್ತಾರ ಬಿಪಿನ್‌ ಚಂದ್ರ ಪಾಲ್‌ ತಿಳಿಸಿದ್ದಾರೆ.

ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದುತ್ವದ ಆಸ್ಮಿತೆ ಆಗಿರುವ ದೇಗುಲಗಳನ್ನೆ ಒಡೆದು ಹಾಕುವುದು ಇದು ಮೊದಲಲ್ಲ. ಗುಜರಾತಿನಲ್ಲಿ ಮೋದಿ ಆಡಳಿತಾವದಿಯಲ್ಲಿ ಇದೇ ರೀತಿ 80ಕ್ಕೂ ಹೆಚ್ಚು ಧಾರ್ಮಿಕ ಕೇಂದ್ರಗಳನ್ನು ಕೆಡವಿ ಹಾಕಲಾಗಿತ್ತು. ಉತ್ತರ ಪ್ರದೇಶದ ಆದಿತ್ಯನಾಥ್ ಆಡಳಿತದಲ್ಲೂ ಇದು ಮುಂದುವರಿಯುತ್ತಿದ್ದು ಇದೀಗ ಕರ್ನಾಟಕದಲ್ಲಿ ಈ ಪ್ರಕ್ರಿಯೆ ಆರಂಭಗೊಂಡಿರುವುದು ಖಂಡನೀಯ. ಸರಕಾರ ಕೂಡಲೇ ದೇವಸ್ಥಾನಗಳನ್ನು ಒಡೆದು ಹಾಕುವ ಕೆಲಸ ನಿಲ್ಲಿಸಬೇಕು. ಕೋಟ್೯ ಆದೇಶದ ವ್ಯಾಪ್ತಿಯಡಿಯಲ್ಲಿ ಬರುವ ದೇವಸ್ಥಾನಗಳನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ ಸ್ಥಳಾಂತರಿಸ ಬೇಕು. ಈಗಾಗಲೇ ಒಡೆದು ಹಾಕಿರುವ ದೇವಸ್ಥಾನಗಳ ಪುನ:ನಿರ್ಮಾಣಕ್ಕೆ ಸ್ಥಳ ಒದಗಿಸಿ ಆರ್ಥಿಕ ನೆರವು ಒದಗಿಸಬೇಕು ಎಂದವರು ಒತ್ತಾಯಿಸಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!