Wednesday, January 26, 2022
spot_img
Homeರಾಜ್ಯಇನ್ಮುಂದೆ ಜೂಜು, ಬೆಟ್ಟಿಂಗ್ ಗೆ ದುಪ್ಪಟ್ಟು ದಂಡ, ಶಿಕ್ಷೆ

ಇನ್ಮುಂದೆ ಜೂಜು, ಬೆಟ್ಟಿಂಗ್ ಗೆ ದುಪ್ಪಟ್ಟು ದಂಡ, ಶಿಕ್ಷೆ

ಬೆಂಗಳೂರು: ಆನ್ ಲೈನ್ ಗ್ಲ್ಯಾಬ್ಲಿಂಗ್, ಬೆಟ್ಟಿಂಗ್ ದಂಧೆ ನಿಷೇಧಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಮಹತ್ವದ ವಿಧೇಯಕವನ್ನು ಮಂಡನೆ ಮಾಡಲಾಗಿದೆ.

ವಿಧಾನಸಭೆಯಲ್ಲಿ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯದಲ್ಲಿ ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಆನ್ ಲೈನ್ ಜೂಜಾಟ, ಬೆಟ್ಟಿಂಗ್ ಅಪರಾಧವಾಗಿದ್ದು, ಅಂತವರಿಗೆ 1ರಿಂದ 3 ವರ್ಷಗಳ ವರೆಗೆ ಜೈಲುಶಿಕ್ಷೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಈ ತಿದ್ದುಪಡಿ ವಿಧೇಯಕ ಲಾಟರಿ, ಕುದುರೆ ರೇಸ್ ಗೆ ಅನ್ವಯವಾಗುವುದಿಲ್ಲ. ಉಳಿದಂತೆ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇನ್ನಿತರ ಆನ್ ಲೈನ್ ಜೂಜಾಟ, ಬೆಟ್ಟಿಂಗ್ ಗಳಿಗೆ ಅನ್ವಯವಾಗಲಿದೆ. ಆನ್ ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ನಲ್ಲಿ ತೊಡಗುವವರಿಗೆ ಸಹಾಯ ಮಾಡುವವರಿಗೆ ಹಾಗೂ ಆಶ್ರಯ ನೀಡುವವರಿಗೂ 6 ತಿಂಗಳು ಜೈಲುಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!