Tuesday, December 7, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಸ್ಕೌಟ್ಸ್‌ ಗೈಡ್ಸ್‌ ಮಹಾಸಭೆ

ಕಾರ್ಕಳ ಸ್ಕೌಟ್ಸ್‌ ಗೈಡ್ಸ್‌ ಮಹಾಸಭೆ

ಕಾರ್ಕಳ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ ಇದರ ವಾರ್ಷಿಕ ಮಹಾ ಸಭೆಯು ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ವರದೇಂದ್ರ ಸದನದಲ್ಲಿ ಜರುಗಿತ್ತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯಕುಮಾರ್, ಸಮಾಜ ಸೇವೆಯಲ್ಲಿ ನಿಜವಾದ ಮಾನವೀಯ ಅಂತಃಕರಣದ ಪ್ರೀತಿ ಕಾಣಲು ಸಾಧ್ಯ ಎಂದರು. ಜಿಲ್ಲಾ ಗೈಡ್ ಆಯುಕ್ತರಾದ ಜ್ಯೋತಿ ಜೆ. ಪೈ.ಜಿಲ್ಲಾ ಗೈಡ್ ತರಬೇತಿ ಗೈಡ್ ಆಯಕ್ತೆ ಸಾವಿತ್ರಿ ಮನೋಹರ್, ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಜಿ. ನಾಯಕ್, ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಜಗದೀಶ್ ಹೆಗ್ಡೆ, ಸಹಾಯಕ ಜಿಲ್ಲಾ ಆಯುಕ್ತೆ ವೃಂದಾ ಹರಿಪ್ರಕಾಶ್ ಶೆಟ್ಟಿ, ಭುವನೇಂದ್ರ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ವೃಂದಾ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

ಕೊರೋನಾ ವಾರಿಯರ್ಸ್‌ ಗಳಾಗಿ ಸೇವೆ ಸಲ್ಲಿಸಿದ ಕಾರ್ಕಳ ಭುವನೇಂದ್ರ ರೆಸಿಡೆನ್ಸಿಯಲ್ ಸ್ಕೂಲ್ ಸ್ಕೌಟ್ ಶಿಕ್ಷಕ ಹರೀಶ್ ಕಲ್ಯಾಣಪುರ, ಕಾರ್ಕಳ ಜೇಸಿಸ್ ಶಾಲೆಯ ಸ್ಕೌಟ್ ಶಿಕ್ಷಕಿ ಮಮತಾ, ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಸ್ಕೌಟ್ ಶಿಕ್ಷಕ ನರೇಂದ್ರ ಕಾಮತ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ ಕೆ. ವಸುಧಾ ಪೈ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಆನಂದ ಪೂಜಾರಿ ಸ್ವಾಗತಿಸಿ, ಸ್ಥಳೀಯ ಸಂಸ್ಥೆ ಕೋಶಾಧಿಕಾರಿ ಬಿ. ಸತೀಶ್ ವರದಿ ವಾಚಿಸಿದರು. ಕಾರ್ಯದರ್ಶಿ ಗಣೇಶ್ ಜಾಲ್ಸೂರು ಸ್ಕೌಟ್ ಗೈಡ್ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಸಹಕಾರ್ಯದರ್ಶಿ ಪ್ರಿಯಾ ಪ್ರಭು ನಿರೂಪಿಸಿ, ಸಂಸ್ಥಾ ಪ್ರತಿನಿಧಿ ಲಕ್ಮೀ ಹೆಗ್ಡೆ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!