Sunday, October 2, 2022
spot_img
Homeಸ್ಥಳೀಯ ಸುದ್ದಿನೈತಿಕ-ಮಾನವೀಯ ಮೌಲ್ಯ ನೀಡುವ ಶಿಕ್ಷಣ ಇಂದಿನ ಅಗತ್ಯ : ಮಿತ್ರ ಪ್ರಭಾ ಹೆಗ್ಡೆ

ನೈತಿಕ-ಮಾನವೀಯ ಮೌಲ್ಯ ನೀಡುವ ಶಿಕ್ಷಣ ಇಂದಿನ ಅಗತ್ಯ : ಮಿತ್ರ ಪ್ರಭಾ ಹೆಗ್ಡೆ

ಕಾರ್ಕಳ : ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಮೈಗೂಡಿಸುವಂತಹ ಶಿಕ್ಷಣ ಇಂದಿನ ಅಗತ್ಯ. ಶಿಕ್ಷಣ ಕೇವಲ ಓದು ಬರಹವಲ್ಲ. ಜೀವನದ ಸವಾಲನ್ನು ಧೈರ್ಯವಾಗಿ ಎದುರಿಸುವುದು ಕಲೆಯನ್ನು ಉದ್ದೀಪನಗೊಳಿಸುವುದು ಶಿಕ್ಷಣವೆಂದು ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಹೇಳಿದರು.

ಅವರು ಸೆ. 15ರಂದು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ನಡೆದ ಸಾಕ್ಷರತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸತೀಶ್ ಪ್ರಭು, ಚಿರಾಗ್ ರಾವ್ ಮಾತನಾಡಿದರು.

ಬಹುಮಾನ ವಿತರಣೆ
ಶಿಕ್ಷಕರ ದಿನಾಚರಣೆ ಪ್ರಯುಕ್ತ ನಡೆಸಿದ ಆನ್ಲೈನ್ ಸ್ಪರ್ಧೆಯಲ್ಲಿ ವಿಜೇತರಾದ ಶಿರ್ಲಾಲು ಪ್ರೌಢಶಾಲಾ ಸಹ ಶಿಕ್ಷಕ ನಾರಾಯಣ ಪೂಜಾರಿ ಅವರಿಗೆ ಬಹುಮಾನ ವಿತರಿಸಲಾಯಿತು.
ರೋಟರಿ ಕ್ಲಬ್‌ ಅಧ್ಯಕ್ಷ ಪ್ರಕಾಶ್ ಪೈ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಬರ್ಲಾಯ ಕಾರ್ಯಕ್ರಮ ನಿರೂಪಿಸಿ, ಗೀತಾ ರಾವ್ ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!