Sunday, October 2, 2022
spot_img
Homeಸ್ಥಳೀಯ ಸುದ್ದಿಕಾರ್ಕಳ ಮುಖ್ಯ ರಸ್ತೆಯ ಹೊಂಡ-ಗುಂಡಿಗಳಿಗೆ ತಾತ್ಕಾಲಿಕ ತೇಪೆ

ಕಾರ್ಕಳ ಮುಖ್ಯ ರಸ್ತೆಯ ಹೊಂಡ-ಗುಂಡಿಗಳಿಗೆ ತಾತ್ಕಾಲಿಕ ತೇಪೆ

ಕಾರ್ಕಳ : ಕಾರ್ಕಳ ಮುಖ್ಯರಸ್ತೆಯ ಹೊಂಡಗುಂಡಿಗಳಿಗೆ ವೆಟ್‌ ಮಿಕ್ಸ್‌ ಹಾಕುವ ಮೂಲಕ ಪುರಸಭೆಯು ತಾತ್ಕಾಲಿಕವಾಗಿ ತೇಪೆ ಕಾರ್ಯ ಮಾಡುತ್ತಿದೆ. ಕಾರ್ಕಳ ಪುರಸಭೆ ವ್ಯಾಪ್ತಿಯ ಮುಖ್ಯರಸ್ತೆಗಳು ತೀರಾ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿತ್ತು. ವಾಹನ, ದ್ವಿಚಕ್ರ ಚಾಲಕರು ಒಂದು ಹೊಂಡ ತಪ್ಪಿಸಲು ಹೋದರೆ ಮತ್ತೊಂದು ಹೊಂಡಕ್ಕೆ ಬಿದ್ದು ಮತ್ತೆ ಏಳೋದೇ ಕಷ್ಟಕರವಾಗಿತ್ತು. ಅಂತಹ ಬೃಹತ್‌ ಗಾತ್ರದ ಹೊಂಡಗಳಿಂದ ಆವೃತ್ತವಾಗಿತ್ತು. ಕಳೆದ ಒಂದು ತಿಂಗಳಿನಿಂದ ಇಂತಹ ಅನುಭವ ಸಾಮಾನ್ಯವಾಗಿತ್ತು. ಇದೀಗ ಸೆ. 15ರಂದು ಪುರಸಭಾ ವತಿಯಿಂದ ಹೊಂಡ ಗುಂಡಿಗಳಿಗೆ ವೇಟ್‌ ಮಿಕ್ಸ್‌ ತುಂಬಿಸುವ ಕಾರ್ಯವಾಗುತ್ತಿದೆ.

LEAVE A REPLY

Please enter your comment!
Please enter your name here

Most Popular

error: Content is protected !!