Tuesday, September 28, 2021
spot_img
Homeಸ್ಥಳೀಯ ಸುದ್ದಿಆನೆಕೆರೆ ಪಾರ್ಕ್‌ ಮುಂಭಾಗ ತೋಡಿನಂತಾದ ರೋಡು

ಆನೆಕೆರೆ ಪಾರ್ಕ್‌ ಮುಂಭಾಗ ತೋಡಿನಂತಾದ ರೋಡು

ಕಂಬಳದ ಕೆನೆಹಲಗೆ ದೃಶ್ಯವಿಲ್ಲಿ ಮಾಮೂಲು

ಕಾರ್ಕಳ : ಪುರಸಭಾ ವ್ಯಾಪ್ತಿಯ ಆನೆಕೆರೆ ದಾನಶಾಲೆ ರಸ್ತೆ ಬದಿಯಲ್ಲಿ ಸದಾ ಮಳೆ ನೀರು ನಿಂತು ವಾಹನಗಳು ಸಂಚರಿಸುವ ವೇಳೆ ಪಾದಚಾರಿಗಳಿಗೆ, ದ್ವಿಚಕ್ರ ಸವಾರರಿಗೆ ಕೆಸರಿನ ಅಭಿಷೇಕವಾಗುತ್ತಿದೆ. ಆನೆಕೆರೆ ಪಾರ್ಕ್‌ ಮುಂಭಾಗ ಅಂದರೆ ಪುರಸಭಾ ವ್ಯಾಪ್ತಿಯ 15ನೇ ವಾರ್ಡ್ ಗೊಳಪಟ್ಟ ಈ ರಸ್ತೆ ಬದಿ ಇಂಟರ್‌ ಲಾಕ್‌ ಅಳವಡಿಸಿದ್ದಾಗ್ಯೂ ನೀರು ಸರಾಗವಾಗಿ ಹರಿದುಹೋಗುವಂತೆ ಕಾಮಗಾರಿ ನಡೆಸದ ಕಾರಣ ಮಳೆ ಬಂದಾಗ ಕಂಬಳದಲ್ಲಿ ಕೆನೆಹಲಗೆಯ ಕೆಸರು ಚಿಮ್ಮುವ ದೃ‍ಶ್ಯವಿಲ್ಲಿ ಸಾಮಾನ್ಯವಾಗಿದೆ. ಹಲವೆಡೆ ರಸ್ತೆಗಿಂತಲೂ ಕೆಳಮಟ್ಟದಲ್ಲಿ ಇಂಟರ್‌ ಲಾಕ್‌ ಅಳವಡಿಸಿದ ಪರಿಣಾಮ ರಸ್ತೆಯಲ್ಲೇ ನೀರು ಸಂಗ್ರಹವಾಗುತ್ತಿದೆ. ಆನೆಕೆರೆ ಪಾರ್ಕ್‌ ವಿಹಾರಕ್ಕೆ ಆಗಮಿಸುವವರಿಗೂ ಬಹಳ ಕಿರಿಕಿರಿಯಾಗುತ್ತಿದೆ. ಸ್ಥಳೀಯ ಪ್ರೌಢಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೂ ನಡೆದುಕೊಂಡು ಹೋಗುವಾಗ ಕೆಸರು ರಾಚುತ್ತಿದ್ದು, ವಿದ್ಯಾರ್ಥಿಗಳು ಇದರಿಂದ ಹೈರಣಾಗಿದ್ದಾರೆ.

ಏನು ಪರಿಹಾರ
ಇಲ್ಲಿನ ಇಂಟರ್‌ ಲಾಕ್‌ ಅನ್ನು ನೀರು ಸರಾಗವಾಗಿ ಹರಿದುಹೋಗುವಂತೆ ಮರು ಜೋಡಣೆ ಮಾಡಬೇಕು. ಅಲ್ಲದೆ ರಸ್ತೆಯ ಇನ್ನೊಂದು ಬದಿಯಲ್ಲಿ ಕೊಳಚೆ ನೀರು ನಿಲ್ಲದಂತೆ ಮಾಡಬೇಕಿದೆ.

ತಾತ್ಕಾಲಿಕವಾಗಿ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಾಲ್ಮರದಿಂದ ಮೂರು ಮಾರ್ಗ ಸೇರಿದಂತೆ ಆನೆಕೆರೆ ರಸ್ತೆಯು ವಾರಾಹಿ ಯೋಜನೆಯಡಿ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಗೊಳ್ಳಲಿದೆ. ಜಾಗದ ತಕರಾರು ಮತ್ತು ವಿಪರೀತ ಮಳೆಯ ಕಾರಣದಿಂದ ಕಾಮಗಾರಿ ಪ್ರಾರಂಭವಾಗುವಲ್ಲಿ ವಿಳಂಬವಾಗಿದೆ.
ರೂಪಾ ಶೆಟ್ಟಿ
ಮುಖ್ಯಾಧಿಕಾರಿ ಕಾರ್ಕಳ ಪುರಸಭೆ

ಲೇಖನ : ಅರುಣ್‌ ಮಾಂಜ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!