Tuesday, September 28, 2021
spot_img
Homeಸ್ಥಳೀಯ ಸುದ್ದಿರೈತರಿಗೆ ಅನ್ಯಾಯವಾದರೆ ರೈತ ಸಂಘ ಸಹಿಸಲ್ಲ : ಎನ್‌. ಎಸ್‌. ವರ್ಮ

ರೈತರಿಗೆ ಅನ್ಯಾಯವಾದರೆ ರೈತ ಸಂಘ ಸಹಿಸಲ್ಲ : ಎನ್‌. ಎಸ್‌. ವರ್ಮ

ಮುನಿಯಾಲು : ರೈತರ ಬೆಳೆಗೆ ಸರಿಯಾದ ವೈಜ್ಞಾನಿಕ ಬೆಲೆ ನೀಡಬೇಕು. ಸರಕಾರ ರೈತರ ಸಾಲ ಮಾಡುವ ಮೂಲಕ ಸ್ಪಂದಿಸಿ, ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಆಗಬೇಕಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್‌. ಎಸ್‌. ವರ್ಮ ಹೇಳಿದರು.

ಅವರು ಮಂಗಳವಾರ ಮುನಿಯಾಲಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಕರ್ನಾಟಕ ರೈತ ಸಂಘದ ಹೆಬ್ರಿ ತಾಲೂಕ ಘಟಕದ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿದರು. ರೈತರ ಸಂಘ ಪವಿತ್ರ ಸಂಘ, ರೈತರ ಹಸಿರು ಶಾಲು ಪವಿತ್ರವಾದ ಶಾಲು. ರಾಜಕಾರಣಿಗಳು ಹಸಿರು ಶಾಲು ಹಾಕಿ ಅಪವಿತ್ರಗೊಳಿಸಬಾರದು. ಶಾಲು ಹಾಕಿ ಪ್ರದರ್ಶಿಸುವ ಬದಲು ರೈತರ ಸೇವೆ ಮಾಡುವ ಕಾರ್ಯ ಮಾಡಬೇಕಿದೆ. ರೈತರಿಗೆ ಅನ್ಯಾಯ ಆದಾಗ ರೈತ ಸಂಘ ದಿಟ್ಟ ಹೋರಾಟ ರೂಪಿಸುತ್ತದೆ. ಗ್ರಾಮ ಮಟ್ಟದಲ್ಲಿ ರೈತ ಸಂಘವನ್ನು ಬಲಪಡಿಸಲಾಗುವುದು. ರೈತರಿಗೆ ಅನ್ಯಾಯವಾದರೆ ಸಂಘವು ಸಹಿಸುವುದಿಲ್ಲ ಎಂದು ಎನ್‌. ಎಸ್‌. ವರ್ಮ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲ ಕುಲಾಲ್‌ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ವೃಷಭ ಜೈನ್‌ ಮಾತಿಬೆಟ್ಟು, ಉಪಾಧ್ಯಕ್ಷ ಸುರೇಶ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಂಗೀತ ಹೆಗ್ಡೆ, ಕಾರ್ಯದರ್ಶಿ ಸುಧೀರ್‌ಶೆಟ್ಟಿ, ಖಜಾಂಜಿ ಸುರೇಶ ಶೆಟ್ಟಿ ಅಜೆಕಾರು, ಸಂಘಟನಾ ಕಾರ್ಯದರ್ಶಿ ಸಂತೋಷ ನಾಯಕ್‌ ಅಜೆಕಾರು, ಮುನಿಯಾಲು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಆನಂದ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ಚಂದ್ರಕಾಂತ್‌, ರೈತರು ಮುಖಂಡರು, ಸ್ಥಳೀಯ ಪ್ರಮುಖರು, ಗಣ್ಯರು ಭಾಗವಹಿಸಿದ್ದರು.
ಅಶ್ವತ್‌ ರೈತ ಗೀತೆ ಹಾಡಿದರು, ಸಂಗೀತ ಹೆಗ್ಡೆ ಸಭೆ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!