Sunday, September 26, 2021
spot_img
Homeಸ್ಥಳೀಯ ಸುದ್ದಿಬೈಲೂರು : ಗುರು ಪೂಜೆ ಸನ್ಮಾನ

ಬೈಲೂರು : ಗುರು ಪೂಜೆ ಸನ್ಮಾನ

26 ಉಪಪಂಗಡಗಳನ್ನು ನಾರಾಯಣ ವಿಚಾರ ವೇದಿಕೆಯಡಿ ಗುರುತಿಸಿರುವುದು ಉತ್ತಮ ವಿಚಾರ : ಡಿ.ಆರ್.‌ ರಾಜು

ಕಾರ್ಕಳ : ಬಿಲ್ಲವ – ಈಡಿಗ ಜನಾಂಗದ 26 ಉಪ ಪಂಗಡಗಳನ್ನು ನಾರಾಯಣ ವಿಚಾರ ವೇದಿಕೆಯಡಿ ಗುರುತಿಸಿರುವುದು ಉತ್ತಮ ವಿಚಾರ. ಸಂಘಟನೆ ಹಾಗೂ ಹೋರಾಟದ ದೃಷ್ಟಿಯಿಂದ ಇದು ಅಗತ್ಯವೂ ಆಗಿತ್ತು ಎಂದು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್.‌ ಅಭಿಪ್ರಾಯಪಟ್ಟರು.
ಅವರು ಸೆ. 12ರಂದು ಬೈಲೂರು ಗುರು ಮಂದಿರದಲ್ಲಿ ನಡೆದ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ತಿ ವೇತನ
2019-20 ಮತ್ತು 2020-21 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 85% ಕ್ಕಿಂತ ಅಧಿಕ ಅಂಕ ಗಳಿಸಿದ ಬೈಲೂರು ಬಿಲ್ಲವ ಸಂಘದ ವ್ಯಾಪ್ತಿಯ 24 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸನ್ಮಾನ
50 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಿರುವ ಮುಂಬೈ ಹೈಕೋರ್ಟ್‌ ವಕೀಲ ಭೋಜ ನಾರಾಯಣ ಪೂಜಾರಿ ಕಾಂತನಮಜಲು ದಂಪತಿಯನ್ನು ಸನ್ಮಾನಿಸಲಾಯಿತು.
ಪುಣೆ ಬಿಲ್ಲವ ಸಂಘದ ಪ್ರಕಾಶ್ ಪೂಜಾರಿ, ನಿವೃತ್ತ ಶಿಕ್ಷಕ ವಸಂತ್ ಎಂ., ಅರ್ಚಕ ಸುಖೇಶ್ ಶಾಂತಿ, ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಪೂಜಾರಿ, ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಮೀಳಾ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷ ಉಮಾವತಿ ಪೂಜಾರಿ, ಯುವ ಘಟಕದ ಅಧ್ಯಕ್ಷ ಪ್ರಶಾಂತ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಲ್ಲವ ಸಂಘ ಬೈಲೂರು ಇದರ ಅಧ್ಯಕ್ಷ ಸುರೇಶ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.
ಲಹರಿ ಕೆ. ಪೂಜಾರಿ ಪ್ರಾರ್ಥಿಸಿ, ಬಿಲ್ಲವ ಸಂಘದ ಕಾರ್ಯದರ್ಶಿ ಪ್ರೇಮ್ ಕುಮಾರ್ ಸ್ವಾಗತಿಸಿದರು, ಆನಂದ ಪೂಜಾರಿ ಬೈಲೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ನಿರೂಪಿಸಿ, ಉಮಾವತಿ ಪೂಜಾರಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!