Friday, September 24, 2021
spot_img
Homeಸ್ಥಳೀಯ ಸುದ್ದಿಕಿಡಿಗೇಡಿಗಳಿಂದ ಸಮಾಜದ ಶಾಂತಿ ಕದಡುವ ಕಾರ್ಯ- ಯೋಗೀಶ್‌ ಸಾಲಿಯಾನ್‌

ಕಿಡಿಗೇಡಿಗಳಿಂದ ಸಮಾಜದ ಶಾಂತಿ ಕದಡುವ ಕಾರ್ಯ- ಯೋಗೀಶ್‌ ಸಾಲಿಯಾನ್‌

ಕಾರ್ಕಳ : ಧರ್ಮದ ಹೆಸರಲ್ಲಿ ಹತ್ತಾರು ಮುಗ್ಧ ಜನರನ್ನು ಕೂಡಿಸಿ ಆಮಿಷವೊಡ್ಡಿ ಮತಾಂತರ ನಡೆಸುತ್ತಿರುವುದು ಖಂಡನೀಯ. ನೆಮ್ಮದಿಯಿಂದಿರುವ ಸಮಾಜದಲ್ಲಿ ಇಂತಹ ಚಟುವಟಿಕೆ ನಡೆಸುವ ಮೂಲಕ ಶಾಂತಿ ಕದಡುವ ಕಾರ್ಯವಾಗುತ್ತಿದೆ. ಇಂತಹ ಕೃತ್ಯಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕಾಗಿದೆ ಎಂದು ಕಾರ್ಕಳ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯೋಗೀಶ್‌ ಸಾಲಿಯಾನ್‌ ಆಗ್ರಹಿಸಿದ್ದಾರೆ.

ಕ್ರೈಸ್ತರೆಂದು ಕರೆಯಲ್ಪಡುವ ಕೆಲವು ಗುಂಪುಗಳಿಂದ ನೈಜ ಕ್ರೈಸ್ತರ ಹಾಗೂ ಕ್ರೈಸ್ತ ಸಂಸ್ಥೆಗಳ ಹೆಸರಿಗೆ ಹಾನಿಯಾಗುತ್ತಿದೆ. ಇಂತವರನ್ನು ಕ್ರೈಸ್ತ ಸಮಾಜ ಬಹಿಷ್ಕರಿಸಬೇಕು. ಮತಾಂತರ, ಗೋವಿಗೆ ಅಮಾನುಷವಾಗಿ ಹಿಂಸೆ ನೀಡುವಂತಹ ಕಿಡಿಗೇಡಿಗಳನ್ನು ಗುರುತಿಸಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಯೋಗೀಶ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!